ETV Bharat / bharat

ಮಾಟಮಂತ್ರದ ಶಂಕೆ, ಅಪರಿಚಿತ ಮಹಿಳೆಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು: ವಿಡಿಯೋ - ಅಪರಿಚಿತ ಮಹಿಳೆಗೆ ಥಳಿತ

ಮನೆಯೊಂದಕ್ಕೆ ಪ್ರವೇಶಿಸಿದ ಅಪರಿಚಿತ ಮಹಿಳೆ ಮನೆಯ ಮಾಲಕಿಯೊಂದಿಗೆ ಮಾತುಕತೆ ಆರಂಭಿಸಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯ ಯಜಮಾಣಿಯ ಆರೋಗ್ಯ ಹದಗೆಟ್ಟಿದೆ. ಅಷ್ಟರಲ್ಲಿ ಮನೆಗೆ ಬಂದ ಸಂಬಂಧಿಕರು ಆಕೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರು ಸೇರಿ ಆಕೆಗೆ ಥಳಿಸಿದ್ದಾರೆ.

ಮಾಟಮಂತ್ರದ ಶಂಕೆ: ಮಹಿಳೆಗೆ ಥಳಿತ
ಮಾಟಮಂತ್ರದ ಶಂಕೆ: ಮಹಿಳೆಗೆ ಥಳಿತ
author img

By

Published : Apr 11, 2022, 12:52 PM IST

ರೂರ್ಕಿ (ಉತ್ತರಾಖಂಡ್​): ಮಾಟಮಂತ್ರ ಮಾಡುವ ಶಂಕೆ ಮೇರೆಗೆ ಮಹಿಳೆಯೊಬ್ಬರಿಗೆ ಥಳಿಸಿರುವ ಘಟನೆ ಉತ್ತರಾಖಂಡ್​ನ ಹರಿದ್ವಾರ ಜಿಲ್ಲೆಯ ಮಂಗಳೂರು ಕೊತ್ವಾಲಿ ಸಮೀಪದ ಲಿಬರಹೇಡಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಚೀಲದಲ್ಲಿ ಪ್ರಾಣಿಯೊಂದರ ಮೂಳೆಯೂ ಪತ್ತೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಲ್ಲಿನ ಮನೆಯೊಂದಕ್ಕೆ ಪ್ರವೇಶಿಸಿದ ಅಪರಿಚಿತ ಮಹಿಳೆ ಮನೆಯ ಮಾಲಕಿಯೊಂದಿಗೆ ಮಾತುಕತೆ ಆರಂಭಿಸಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯ ಮಾಲಕಿಯ ಆರೋಗ್ಯ ಹದಗೆಟ್ಟಿದೆ. ಅಷ್ಟರಲ್ಲಿ ಸಂಬಂಧಿಕರು ಮನೆಗೆ ಬಂದಿದ್ದಾರೆ. ಇದೇ ವೇಳೆ ಮನೆ ಒಡತಿಯ ಆರೋಗ್ಯ ಹದಗೆಟ್ಟಿದ್ದನ್ನು ಕಂಡು ಸಂಬಂಧಿಕರು ದಿಗ್ಭ್ರಮೆಗೊಂಡಿದ್ದಾರೆ. ಆಗ ಮನೆಯಲ್ಲಿದ್ದ ಅಪರಿಚಿತ ಮಹಿಳೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.

ಮಾಟಮಂತ್ರದ ಶಂಕೆ, ಅಪರಿಚಿತ ಮಹಿಳೆಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಅಲ್ಲದೇ, ನಂತರ ಅನುಮಾನಗೊಂಡು ಆಕೆ ಜೊತೆಯಲ್ಲಿದ್ದ ಚೀಲವನ್ನು​ ಪರಿಶೀಲಿಸಿದ್ದಾರೆ. ಆ ಚೀಲದಲ್ಲಿ ಪ್ರಾಣಿಯೊಂದರ ಮೂಳೆ ಪತ್ತೆಯಾಗಿದೆ. ಇದರಿಂದ ಮನೆಯವರು ಭಯಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಆಗ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಮತ್ತೆ ಗ್ರಾಮದ ಕಡೆ ತಲೆ ಹಾಕಬೇಡ ಎಂದು ಮಹಿಳೆಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಈ ಬಗ್ಗೆ ಯಾವುದೇ ಪೊಲೀಸ್​ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ: ಡಿಕ್ಕಿ ಹೊಡೆದ ರೋಪ್ ​ವೇ ಕಾರುಗಳು, ಕೆಳಗೆ ಹಾರಿಬಿದ್ದ ದಂಪತಿ.. ಮಹಿಳೆ ಸಾವು, ಗಾಳಿಯಲ್ಲೇ ಸಿಲುಕಿದ್ರು 50 ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.