ನವದೆಹಲಿ : ಮುಂದಿನ ತಿಂಗಳು ವಿವಾಹವಾಗಲಿರುವ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು (M Venkaiah Naidu) ಅವರ ಮೊಮ್ಮಗಳು ಸುಷ್ಮಾ ಅವರು ತಮ್ಮ ಮದುವೆ ವೆಚ್ಚವನ್ನು ಕಡಿತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸುಮಾರು 50 ಲಕ್ಷ ರೂಪಾಯಿಯನ್ನು ಹೃದಯ ಸಂಬಂಧ ಸಮಸ್ಯೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆಯಾಗಿ ನೀಡಿದ್ದಾರೆ. ಸುಷ್ಮಾ ಅವರು 50 ಲಕ್ಷ ರೂಪಾಯಿಯ ಚೆಕ್ ಅನ್ನು 'ಹೃದಯ-ಕ್ಯೂರ್ ಎ ಲಿಟಲ್ ಹಾರ್ಟ್ ಫೌಂಡೇಶನ್' (Hrudaya-Cure a Little Heart Foundation) ಎಂಬ ಹೈದರಾಬಾದ್ ಮೂಲದ ಸಂಘಟನೆಯೊಂದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ವೆಂಕಯ್ಯ ನಾಯ್ಡು ಅವರು ಆಂಧ್ರ ಪ್ರದೇಶದ ನೆಲ್ಲೂರಿನ ವೆಂಕಟಾಚಲಂನಲ್ಲಿ ಸ್ಥಾಪನೆ ಮಾಡಿದ್ದ ಸ್ವರ್ಣ ಭಾರತಿ ಟ್ರಸ್ಟ್‌ನ (Swarna Bharati Trust) 20ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆಯಲ್ಲಿ ಸುಷ್ಮಾ ಅವರು 50 ಲಕ್ಷ ರೂಪಾಯಿಯ ಚೆಕ್ ಅನ್ನು 'ಹೃದಯ-ಕ್ಯೂರ್ ಎ ಲಿಟಲ್ ಹಾರ್ಟ್ ಫೌಂಡೇಶನ್'ಗೆ ನೀಡಿದ್ದಾರೆ.
ಸ್ವರ್ಣ ಭಾರತಿ ಟ್ರಸ್ಟ್‌ನ 20ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ್ದ ಅಮಿತ್ ಶಾ, ವೆಂಕಯ್ಯ ನಾಯ್ಡು ಅವರನ್ನು ಸಂವಿಧಾನದ ಆದರ್ಶ ಪಾಲಕರು ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಂವಿಧಾನದ ಆದರ್ಶ ಪಾಲಕರು : ಅಮಿತ್ ಶಾ