ETV Bharat / bharat

Vice president election: ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ, ಹಕ್ಕು ಚಲಾಯಿಸಿದ ಪಿಎಂ ಮೋದಿ!

Vice president election: ಉಪಾಧ್ಯಕ್ಷರ ಆಯ್ಕೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮತದಾನ ಆರಂಭವಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

Vice president election, Vice president polling begins, PM Modi casts vote, PM Modi and others casts vote, ಉಪಾಧ್ಯಕ್ಷರ ಆಯ್ಕೆಗೆ ಮತದಾನ ಆರಂಭ, ಭಾರತದ 16ನೇ ಉಪರಾಷ್ಟ್ರಪತಿ ಚುನಾವಣೆ, ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ, ಪ್ರಧಾನಿ ನರೇಂದ್ರ ಮೋದಿ,
ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ
author img

By

Published : Aug 6, 2022, 11:14 AM IST

Updated : Aug 6, 2022, 12:50 PM IST

ನವದೆಹಲಿ: ಭಾರತದ 16ನೇ ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 63ರಲ್ಲಿ ಗುಪ್ತ ಮತದಾನದ ಮೂಲಕ ಮತದಾನ ನಡೆಯುತ್ತಿದೆ. ಮತದಾನ ಮುಗಿದ ತಕ್ಷಣ ಮತ ಎಣಿಕೆ ಆರಂಭವಾಗಲಿದ್ದು, ರಾತ್ರಿ ವೇಳೆ ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರ ಮೇಲ್ವಿಚಾರಣೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಎನ್‌ಡಿಎ ಒಕ್ಕೂಟದ ಪರವಾಗಿ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧನ್‌ಖಡ್​​ (71) ಮತ್ತು ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವೆ ಮತ್ತು ರಾಜ್ಯಪಾಲ ಮಾರ್ಗರೆಟ್ ಆಳ್ವ (80) ಉಪರಾಷ್ಟ್ರಪತಿ ಕಣದಲ್ಲಿದ್ದಾರೆ.

Vice president election, Vice president polling begins, PM Modi casts vote, PM Modi and others casts vote, ಉಪಾಧ್ಯಕ್ಷರ ಆಯ್ಕೆಗೆ ಮತದಾನ ಆರಂಭ, ಭಾರತದ 16ನೇ ಉಪರಾಷ್ಟ್ರಪತಿ ಚುನಾವಣೆ, ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ, ಪ್ರಧಾನಿ ನರೇಂದ್ರ ಮೋದಿ,
ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ

ಮತದಾನ ಆರಂಭವಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಸಂಸದರು ಮತ ಚಲಾಯಿಸಲು ಮುಗಿಬಿದ್ದರು. ಈ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭೆಯ 543 ಸಂಸದರು ಮತ್ತು ರಾಜ್ಯಸಭೆಯ 245 ಸಂಸದರು ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ಪ್ರಸ್ತುತ, ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 4 ಸ್ಥಾನಗಳು, ತ್ರಿಪುರಾದಿಂದ 1 ಮತ್ತು ನಾಮನಿರ್ದೇಶಿತ ಸದಸ್ಯರಿಂದ 3 ಸ್ಥಾನಗಳು ಖಾಲಿ ಇವೆ. ಅಂದರೆ ಒಟ್ಟು 780 ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ ಲೋಕಸಭೆಯಲ್ಲಿ 23 ಮತ್ತು ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದು, ಆ ಪಕ್ಷದ 36 ಸದಸ್ಯರನ್ನು ಹೊರತುಪಡಿಸಿ ಉಳಿದ 744 ಸದಸ್ಯರು ಭಾಗವಹಿಸಲು ಅವಕಾಶವಿದೆ.

ಎನ್‌ಡಿಎ ಮತ್ತು ಅದರ ಮಿತ್ರಪಕ್ಷಗಳು ಉಭಯ ಸದನಗಳಲ್ಲಿ ಸ್ಪಷ್ಟ ಬಲವನ್ನು ಹೊಂದಿರುವುದರಿಂದ ಅಧಿಕೃತ ಮೈತ್ರಿ ಅಭ್ಯರ್ಥಿ ಜಗದೀಪ್ ಧನ್‌ಖಡ್​​ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆಡಳಿತಾರೂಢ ಬಿಜೆಪಿ ಲೋಕಸಭೆಯಲ್ಲಿ 303 ಮತ್ತು ರಾಜ್ಯಸಭೆಯಲ್ಲಿ 91 ಒಟ್ಟು 394 ಮತಗಳನ್ನು ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ ಬೇಕಿರುವ 372+1ಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿ ಮಾತ್ರ ಹೊಂದಿದೆ.

ಈಗ ಪಕ್ಷದ ಜೊತೆಗೆ ಶಿವಸೇನೆ, ಜನತಾದಳ (ಯು), ಬಿಎಸ್ಪಿ, ಬಿಜೆಡಿ, ಎಐಎಡಿಎಂಕೆ, ವೈಕೆಎಪಿ, ಟಿಡಿಪಿ, ಶಿರೋಮಣಿ ಅಕಾಲಿದಳ, ಎಲ್ಜೆಪಿ, ಎಜಿಪಿ, ಎನ್ಪಿಪಿ, ಎನ್ಪಿಎಫ್, ಎಂಎನ್ಎಫ್, ಎಸ್ಕೆಎಂ, ಎನ್ಡಿಪಿಪಿ, ಆರ್ಪಿಐ-ಎ, ಪಿಎಂಕೆ, ಅಪ್ನಾದಲ್ , AJSU, TMC-M ಬೆಂಬಲಿಸುತ್ತಿವೆ.

ಸದ್ಯದ ಲೆಕ್ಕಾಚಾರದ ಪ್ರಕಾರ ಎನ್ ಡಿಎ ಮೈತ್ರಿಕೂಟಕ್ಕೆ 544 ಮತಗಳು ಬೀಳುವ ಮುನ್ಸೂಚನೆ ಇದೆ. ಅಂದರೆ ಇಲೆಕ್ಟೋರಲ್ ಕಾಲೇಜಿನಲ್ಲಿ ಧನಖಡ್ ಶೇ.73ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. 2017 ರ ಚುನಾವಣೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು 67.89% ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ 32.11% ಪಡೆದಿದ್ದರು. ಪ್ರಮುಖ ವಿರೋಧ ಪಕ್ಷವಾದ ಟಿಎಂಸಿಯ ಅನುಪಸ್ಥಿತಿಯು ಮೈತ್ರಿಕೂಟದ ಮತಗಳನ್ನು ಕಡಿಮೆ ಮಾಡುತ್ತಿದೆ ಮತ್ತು ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿಯ ಬಲವನ್ನು ಹೆಚ್ಚಿಸುತ್ತಿದೆ.

11 ರಂದು ಪ್ರಮಾಣ ವಚನ ಸ್ವೀಕಾರ: ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಇದೇ 10ರಂದು ಕೊನೆಗೊಳ್ಳಲಿದೆ. ನೂತನ ಉಪಾಧ್ಯಕ್ಷರು ಇದೇ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ರಾಖಿಪೌರ್ಣಮಿ ರಜೆ ಇದ್ದರೂ ಕಾರ್ಯಕ್ರಮ ಎಂದಿನಂತೆ ಮುಂದುವರಿಯಲಿದೆ. 12ರ ವರೆಗೆ ಸಂಸತ್ತಿನ ಕಲಾಪ ನಡೆಯಲಿದ್ದು, ಕೊನೆಯ ದಿನ ನೂತನ ಉಪರಾಷ್ಟ್ರಪತಿ ರಾಜ್ಯಸಭೆ ಅಧ್ಯಕ್ಷರಾಗುವ ಸಾಧ್ಯತೆ ಇದೆ.

ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆಗೆ ಮತದಾನ.. ಕನ್ನಡತಿ ಮಾರ್ಗರೇಟ್​ ಆಳ್ವಗೆ ಸೋಲು ಖಚಿತವೇ?!

Last Updated : Aug 6, 2022, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.