ETV Bharat / bharat

ಬಕ್ರೀದ್ ಆಚರಣೆಗೆ ಕೋವಿಡ್ ನಿಯಮ ಸಡಿಲಿಕೆ : ವಿಹೆಚ್​​​ಪಿ ತೀವ್ರ ವಿರೋಧ

author img

By

Published : Jul 18, 2021, 8:06 PM IST

ಬಕ್ರೀದ್ ಆಚರಣೆಯ ಅಂಗವಾಗಿ ಕೇರಳ ಸರ್ಕಾರ ಮೂರು ದಿನಗಳ ಕಾಲ ಕೋವಿಡ್ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಸಿಎಂ ಪಿಣರಾಯಿ ವಿಜಯನ್ ನಿರ್ಧಾರವೀಗ ವಿಹೆಚ್​​​​ಪಿ ಸಂಘಟನೆಯ ಕಣ್ಣು ಕೆಂಪಾಗುವಂತೆ ಮಾಡಿದೆ..

vhp-objects-to-easing-of-covid-restrictions-for-eid-ul-azha-in-kerala
ಬಕ್ರೀದ್ ಆಚರಣೆಗೆ ಕೋವಿಡ್ ನಿಯಮ ಸಡಿಲಿಕೆ

ನವದೆಹಲಿ : ಮುಸಲ್ಮಾನರ ಪವಿತ್ರ ಹಬ್ಬವಾಗಿರುವ ಬಕ್ರೀದ್​​​ಗಾಗಿ ಕೇರಳದಲ್ಲಿ ಲಾಕ್​ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಿರುವ ಸರ್ಕಾರದ ನೀತಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಇದು ಬಹುದೊಡ್ಡ ಸಾರ್ವಜನಿಕ ಆರೋಗ್ಯ ಸವಾಲು ತಂದೊಡ್ಡಲಿದೆ ಎಂದಿದೆ.

ಇದಕ್ಕೂ ಮೊದಲು ಉತ್ತರಾಖಂಡ್ ಸರ್ಕಾರ ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನೆಲೆ ವಾರ್ಷಿಕ ಕನ್ವರ್​ ಯಾತ್ರೆಯನ್ನ ರದ್ದು ಮಾಡಿತ್ತು ಎಂದು ವಿಹೆಚ್​ಪಿಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ಜೊತೆಗೆ ಇದು ಕೋವಿಡ್ ವಿರುದ್ಧದ ದೇಶದ ಹೋರಾಟವನ್ನ ದುರ್ಬಲಗೊಳಿಸಲಿದ್ದು, ಬಹುದೊಡ್ಡ ಅನಾರೋಗ್ಯ ಸವಾಲನ್ನು ನಮ್ಮ ಮುಂದಿಡಲಿದೆ ಎಂದಿದ್ದಾರೆ.

ಮೊದಲಿಗೆ ಕನ್ವರ್ ಯಾತ್ರೆಯನ್ನು ಕೆಲವು ನಿರ್ಬಂಧಗಳನ್ನ ಹೇರುವ ಮೂಲಕ ನಡೆಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿತ್ತು. ಆದರೆ, ಈ ವೇಳೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಈ ಯಾತ್ರೆಗೆ ನಿರ್ಬಂಧಿಸಿತ್ತು. ಇದೇ ರೀತಿ ಈಗ ಕೇರಳದಲ್ಲಿ ನಿಯಮ ಸಡಿಲಿಸಲಾಗಿದೆ. ಆದರೆ, ಅಪೆಕ್ಸ್​ ಕೋರ್ಟ್ ಈಗ ಮಧ್ಯಪ್ರವೇಶಿಸುವ ನಂಬಿಕೆ ಇದೆ ಎಂದಿದ್ದಾರೆ.

ಕೇರಳ ಸರ್ಕಾರದ ಈ ನಿರ್ಧಾರದಿಂದ ನಮಗೆ ಅಚ್ಚರಿಯಾಗಿದೆ. ಬಕ್ರೀದ್ ಸಮಯದಲ್ಲಿ ಮಾರುಕಟ್ಟೆ, ಸಿನಿಮಾ ಹಾಲ್​, ಮಾಲ್​ಗಳು ತೆರೆದಿರಲು ಅವಕಾಶ ನೀಡಿರುವುದು ಅಚ್ಚರಿ ತರಿಸಿದೆ ಎಂದು ವಿಹೆಚ್​​ಪಿ ನಾಯಕ ಹೇಳಿದ್ದಾರೆ.

ಓದಿ: ಅಯ್ಯಯ್ಯೋ, ಅಬ್ಬಬ್ಬೋ.. ಈ ಸಚಿವೆ ಜತೆ ಸೆಲ್ಫಿ ಬೇಕಿದ್ರೆ 100 ರೂ. ಕೊಡಬೇಕಂತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.