ETV Bharat / bharat

ಕೋಮುಗಲಭೆಗೆ ಕಾರಣವಾದ ಮಕ್ಕಳ ಜಗಳ.. ಛತ್ತೀಸ್​ಗಢ ಬಂದ್​ಗೆ ಕರೆ ನೀಡಿದ ಸಂಘಟನೆಗಳು

ಇಬ್ಬರ ಮಕ್ಕಳ ನಡುವಿನ ಜಗಳ ಕೋಮುಗಲಭೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ ಯುವಕನೊಬ್ಬನನ್ನು ಬಲಿ ಪಡೆದಿದೆ. ಈ ಘಟನೆ ಕುರಿತು ಪೊಲೀಸರು ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.

Bemetara violence incident  Biranpur of Bemetara  communal violence in Bemetara  Chhattisgarh bandh after communal violence  ಛತ್ತೀಸ್​ಗಢ ಬಂದ್​ಗೆ ಕರೆ ನೀಡಿದ ಸಂಘಟನೆಗಳು  ಕೋಮುಗಲಭೆಗೆ ಕಾರಣವಾದ ಮಕ್ಕಳ ಜಗಳ  ಮಕ್ಕಳ ನಡುವಿನ ಜಗಳ ಕೋಮುಗಲಭೆಗೆ ದಾರಿ  ಯುವಕನೊಬ್ಬನನ್ನು ಬಲಿ  ಮಾರಾಮಾರಿ ಕೋಮುಗಲಭೆಯ ಸ್ವರೂಪ  ಸಾಜಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿರಾನ್‌ಪುರ
ಕೋಮುಗಲಭೆಗೆ ಕಾರಣವಾದ ಮಕ್ಕಳ ಜಗಳ
author img

By

Published : Apr 10, 2023, 1:27 PM IST

ಬೆಮೆತಾರಾ (ಛತ್ತೀಸ್​ಗಢ): ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ನಡುವಿನ ಮಾರಾಮಾರಿ ಕೋಮುಗಲಭೆಯ ಸ್ವರೂಪ ಪಡೆದುಕೊಂಡಿದೆ. ಶನಿವಾರ ಮಧ್ಯಾಹ್ನ ಸಾಜಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿರಾನ್‌ಪುರ ಗ್ರಾಮದಲ್ಲಿ ನಡೆದ ಇಬ್ಬರು ಮಕ್ಕಳ ನಡುವಿನ ಜಗಳ ದೊಡ್ಡ ಕೋಮು ಸ್ವರೂಪ ಪಡೆದುಕೊಂಡಿದೆ. ಹೊಡೆದಾಟದ ವೇಳೆ ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾರೆ. ಅಂದಿನಿಂದ ಈ ವಿಷಯ ಆ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಷ್ಟೇ ಅಲ್ಲ, ಬೆಮೆತಾರಾ ಘಟನೆಯನ್ನು ವಿರೋಧಿಸಿ ಇಂದು ಕೆಲ ಸಂಘಟನೆಗಳು ಛತ್ತೀಸ್‌ಗಢ ಬಂದ್‌ಗೆ ಕರೆ ನೀಡಿವೆ.

ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶನಿವಾರ ಸಜಾ ಗ್ರಾಮದ ಬೀರನಪುರದಲ್ಲಿ ನಡೆದಿದೆ. ನಂತರ ಈ ವಿಷಯ ಮಕ್ಕಳ ಮನೆಗೆ ತಲುಪಿದಾಗ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ನಂತರ ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ಹಿಂಸಾಚಾರದಲ್ಲಿ ಭುನೇಶ್ವರ್ ಸಾಹು ಎಂಬ ಯುವಕ ಸಾವನ್ನಪ್ಪಿದ್ದು, ಹತ್ಯೆಯಿಂದ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಈಗ ಹಿಂಸಾಚಾರ ನಡೆದ ಗ್ರಾಮವನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ಘಟನೆಯಲ್ಲಿ ರಕ್ಷಿಸಲು ಬಂದ ಸಜಾ ಪೊಲೀಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಜಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆಯಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ಅಷ್ಟೇ ಅಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಮೆತಾರಾ ಹೊರತುಪಡಿಸಿ ಕವರ್ಧಾ, ಬಿಲಾಸ್‌ಪುರ, ರಾಜನಂದಗಾಂವ್, ದುರ್ಗ್ ಜಿಲ್ಲೆಗಳ ಪೊಲೀಸ್ ಪಡೆಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ.

ಬಿಜೆಪಿ ನಾಯಕರು ಇಂದು ಬೀರನಪುರಗೆ ಎಂಟ್ರಿ?: ದುರ್ಗ್ ರೇಂಜ್ ಐಜಿ ಆನಂದ್ ಛಾಬ್ರಾ ಕೂಡ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇನ್ನು ಈ ಖಂಡಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಮೆತಾರಾ ಜಿಲ್ಲೆಯಲ್ಲಿ ಬಿಜೆಪಿ ವಾಗ್ದಾಳಿ ನಡೆಸಿದೆ. ಇಂದು ಬಿಜೆಪಿಯ ದೊಡ್ಡ ನಾಯಕರ ಬೀರನಪುರ ಗ್ರಾಮ ತಲುಪಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ರಮಣ್ ಸಿಂಗ್, ಸಂಸದ ವಿಜಯ್ ಬಘೇಲ್, ಬಿಜೆಪಿ ನಾಯಕ ಧರ್ಮಲಾಲ್ ಕೌಶಿಕ್ ಸೇರಿದಂತೆ ಹಲವು ನಾಯಕರು ಇಂದು ಬೀರನಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಬೆಮೆತಾರಾದ ಬೀರನಪುರದಲ್ಲಿ ಯುವಕನ ಹತ್ಯೆಯನ್ನು ಖಂಡಿಸಿ ಇಂದು ಕೆಲ ಸಂಘಟನೆಗಳು ಛತ್ತೀಸ್‌ಗಢ ಬಂದ್‌ಗೆ ಕರೆ ನೀಡಿವೆ. ಪೊಲೀಸರು ಇನ್ನಿತರ ಚಟುವಟಿಕೆಗಳ ಮೇಲೆ ಗಮನ ಹರಿಸಿದ್ದು, ಮುನ್ನೆಚ್ಚರಿಕೆಯಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಓದಿ: ಜೆಡಿಎಸ್ ಅಭ್ಯರ್ಥಿ - ಪೊಲೀಸ್ ಕಮಿಷನರ್ ನಡುವೆ ವಾಗ್ವಾದ: 8 ಮಂದಿ ವಿರುದ್ಧ ಪ್ರಕರಣ

ನಿಷೇಧಾಜ್ಞೆ ಜಾರಿ: ಭಾನುವಾರ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಬಳಿಕ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಉದ್ರಿಕ್ತ ಕೆಲ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೆಮೆತಾರಾ ಕಲೆಕ್ಟರ್ ಪದುಮ್ ಸಿಂಗ್ ಎಲ್ಮಾ ಅವರು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.