ETV Bharat / bharat

ರಾಹುಲ್ ವಿರುದ್ಧದ ಮೋದಿ ಉಪನಾಮದ ಕೇಸ್​: ಪರಿಷ್ಕರಣಾ ಅರ್ಜಿಯ ತೀರ್ಪು ಜೂ.5ರ ನಂತರ ಪ್ರಕಟ ಸಾಧ್ಯತೆ..! - ಮೋದಿ ಉಪನಾಮದ ಮಾನನಷ್ಟ ಕೇಸ್

ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಪರಿಷ್ಕರಣೆ ಅರ್ಜಿಯ ತೀರ್ಪು ಜೂನ್ 5ರ ನಂತರ ಬರುವ ಸಾಧ್ಯತೆಯಿದೆ. ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿದ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಶಿಕ್ಷೆಗೆ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

Rahul Gandhi
ರಾಹುಲ್ ಗಾಂಧಿ
author img

By

Published : Jun 1, 2023, 7:48 PM IST

ಅಹಮದಾಬಾದ್ (ಗುಜರಾತ್​): ಗುಜರಾತ್ ಹೈಕೋರ್ಟ್‌ನ ಬೇಸಿಗೆ ರಜೆ ಪೂರ್ಣಗೊಂಡ ನಂತರ ಅಂದರೆ, ಜೂನ್ 5ರ ನಂತರ ರಾಹುಲ್ ಗಾಂಧಿ ವಿರುದ್ಧದ ಮೋದಿ ಉಪನಾಮದ ಮಾನಹಾನಿ ಪ್ರಕರಣದ ಪರಿಷ್ಕರಣೆ ಅರ್ಜಿಯ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಸದ್ಯ ಗುಜರಾತ್ ಹೈಕೋರ್ಟ್ ರಜೆಯಲ್ಲಿದೆ. ನಿಯಮಿತ ನ್ಯಾಯಾಲಯವು ಜೂನ್ 5 ರಂದು ಪ್ರಾರಂಭವಾಗುತ್ತದೆ. ಬಳಿಕ ಜೂನ್ 5ರ ನಂತರ ಯಾವುದೇ ದಿನವು ಕೂಡ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯ ಪರಿಷ್ಕರಣೆ ಅರ್ಜಿಯ ತೀರ್ಪು ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಸಿಸೋಡಿಯಾ ಜತೆಗೆ ಭದ್ರತಾ ಸಿಬ್ಬಂದಿ ಅನುಚಿತ ವರ್ತನೆ: ಸಿಸಿಟಿವಿ ದೃಶ್ಯಾವಳಿ ಸಂರಕ್ಷಿಸುವಂತೆ ಕೋರ್ಟ್ ಆದೇಶ

15ರೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶ: ಮಾನನಷ್ಟ ಮೊಕದ್ದಮೆಯಲ್ಲಿ 2023ರ ಏಪ್ರಿಲ್ 25ರಂದು ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್‌ನಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಮೊದಲ ವಿಚಾರಣೆಯನ್ನು 29 ಏಪ್ರಿಲ್ 2023 ರಂದು ನಡೆಸಲಾಯಿತು. ಎರಡನೇ ವಿಚಾರಣೆಯನ್ನು 2 ಮೇ 2023 ರಂದು ಹೈಕೋರ್ಟ್‌ನಲ್ಲಿ ನಡೆಯಿತು. ಮೇ 2 ರಂದು, ನ್ಯಾಯಮೂರ್ತಿ ಹೇಮಂತ್ ಪ್ರಚಕ್ ಅವರ ವಿಭಾಗೀಯ ಪೀಠವು ಗುಜರಾತ್ ಹೈಕೋರ್ಟ್‌ನಲ್ಲಿ ಮೋದಿ ಅವರ ಉಪನಾಮವನ್ನು ಅವಮಾನಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಪರಿಷ್ಕರಣೆ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ ಎಂದು ಘೋಷಿಸಿತು. ಗುಜರಾತ್ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಬೇಸಿಗೆ ರಜೆಯ ನಂತರ ಈ ವಿಷಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದೆ. ಇದರೊಂದಿಗೆ ಸೂರತ್ ನ್ಯಾಯಾಲಯದ ದಾಖಲೆಗಳನ್ನು ಇದೇ 15ರೊಳಗೆ ಹೈಕೋರ್ಟ್‌ಗೆ ಸಲ್ಲಿಸುವಂತೆಯೂ ಹೈಕೋರ್ಟ್ ಆದೇಶ ನೀಡಿತ್ತು.

ಇದನ್ನೂ ಓದಿ: ಮುಳುಗುತ್ತಿದ್ದ ನಾಲ್ವರು ಯುವಕರ ರಕ್ಷಣೆಗಾಗಿ ಈಜುಗಾರರೊಂದಿಗೆ ಸಮುದ್ರಕ್ಕೆ ಹಾರಿದ ಶಾಸಕ!

ಪೂರ್ಣೇಶ್ ಮೋದಿ ಪರ ವಕೀಲರು ಹೇಳಿದ್ದೇನು: ಹೈಕೋರ್ಟ್‌ನಲ್ಲಿ ಕಳೆದ ವಿಚಾರಣೆಯಲ್ಲಿ ಪೂರ್ಣೇಶ್ ಮೋದಿ ಪರ ವಕೀಲರು, ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ನಾನು ಗಾಂಧಿಯೇ ಹೊರತು ಸಾವರ್ಕರ್ ಅಲ್ಲ ಎಂದು ಹೇಳಿದ್ದಾರೆ. ರಾಹುಲ್​ ಗಾಂಧಿ ಕ್ಷಮೆ ಕೇಳುವುದಿಲ್ಲ. ಜೈಲಿಗೆ ಹೋಗಿ ಮಾತನಾಡಲು ನಾನು ಹೆದರುವುದಿಲ್ಲ ಅವರು ಹೇಳಿದ್ದರು. ಹಾಗಾದರೆ ಶಿಕ್ಷೆಯನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಏಕೆ ಪ್ರಾರ್ಥಿಸಬೇಕು? ರಾಹುಲ್ ಗಾಂಧಿ ಸಾರ್ವಜನಿಕವಾಗಿ ಅನುಚಿತ ಟೀಕೆಗಳನ್ನು ಮಾಡುತ್ತಾರೆ. ತಾವು ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಿಲ್ಲ ಎಂದು ಕೇಳಿಕೊಂಡಿದ್ದರು. ನ್ಯಾಯಾಲಯದಲ್ಲಿದ್ದಾಗ ಅವರು ಪ್ರಾರ್ಥಿಸುತ್ತಿದ್ದಾರೆ. ಇದು ಅವರ ವ್ಯತಿರಿಕ್ತ ನಡವಳಿಕೆಯಾಗಿದ್ದು, ನ್ಯಾಯಾಲಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಕೋರ್ಟ್​ಗೆ ತಿಳಿಸಿದರು.

ಇದನ್ನೂ ಓದಿ: ಬಳಲಿದ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಪೀಡಿಸಿ ಉಸಿರುಗಟ್ಟಿಸಿ ಕೊಂದ ಪತಿ! 2 ವರ್ಷದ ಮಗ, 1 ತಿಂಗಳ ಮಗಳು ಅನಾಥ!

ಇದನ್ನೂ ಓದಿ: ಕೆನಡಾದಲ್ಲಿ ಪಂಜಾಬಿಗಳ ಪ್ರಾಬಲ್ಯ... ಅಲ್ಬೆರ್ಟಾ ರಾಜ್ಯ ವಿಧಾನಸಭೆಯಲ್ಲಿ ನಾಲ್ವರು ಸಿಖ್​ ಶಾಸಕರು ಆಯ್ಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.