ಬೆಂಗಳೂರು: ರಾಜಕಾರಣಿ ಮತ್ತು ಸಾಹಿತಿ ಎಂ.ವೀರಪ್ಪ ಮೊಯ್ಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಒಲಿದು ಬಂದಿದೆ. ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ' ಮಹಾಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
-
प्रेस विज्ञप्ति: साहित्य अकादेमी द्वारा वार्षिक साहित्य अकादेमी पुरस्कार- 2020 की घोषणा |@prahladspatel, @pspoffice, @MinOfCultureGoI, @ksraosahitya, @PIB_India, @PIBCulture @MIB_India, @DDNational pic.twitter.com/fUaxJjlG0O
— Sahitya Akademi (@sahityaakademi) March 12, 2021 " class="align-text-top noRightClick twitterSection" data="
">प्रेस विज्ञप्ति: साहित्य अकादेमी द्वारा वार्षिक साहित्य अकादेमी पुरस्कार- 2020 की घोषणा |@prahladspatel, @pspoffice, @MinOfCultureGoI, @ksraosahitya, @PIB_India, @PIBCulture @MIB_India, @DDNational pic.twitter.com/fUaxJjlG0O
— Sahitya Akademi (@sahityaakademi) March 12, 2021प्रेस विज्ञप्ति: साहित्य अकादेमी द्वारा वार्षिक साहित्य अकादेमी पुरस्कार- 2020 की घोषणा |@prahladspatel, @pspoffice, @MinOfCultureGoI, @ksraosahitya, @PIB_India, @PIBCulture @MIB_India, @DDNational pic.twitter.com/fUaxJjlG0O
— Sahitya Akademi (@sahityaakademi) March 12, 2021
ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಸ್ಟಿವಲ್ ಆಫ್ ಲೆಟರ್ಸ್ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವೀರಪ್ಪ ಮೊಯ್ಲಿ ಸೇರಿದಂತೆ 20 ಮಂದಿಗೆ ಪ್ರಶಸ್ತಿ ಒಲಿದುಬಂದಿದೆ. ಅವರಲ್ಲಿ ಮುಖ್ಯವಾಗಿ ಅರುಂಧತಿ ಸುಬ್ರಮಣಿಯಮ್ ಅವರ ಇಂಗ್ಲಿಷ್ ಭಾಷೆಯ 'ವೆನ್ ಗಾಡ್ ಈಸ್ ಎ ಟ್ರಾವೆಲರ್'ಗೆ ಪ್ರಶಸ್ತಿ ಒಲಿದಿದೆ.
ಇದನ್ನೂ ಓದಿ: ಸಿಎಂ ಮಮತಾ ಬ್ಯಾನರ್ಜಿ ಚೇತರಿಕೆ; ಆಸ್ಪತ್ರೆಯಿಂದ ಬಿಡುಗಡೆ
ಇದು ಮಾತ್ರವಲ್ಲದೇ ಗುಜರಾತಿ ಭಾಷೆಯಲ್ಲಿ ಹರೀಶ್ ಮೀನಾಕ್ಷಿ , ಹಿಂದಿಯಲ್ಲಿ ಅನಾಮಿಕ, ಕೊಂಕಣಿಯಲ್ಲಿ ಆರ್.ಎಸ್.ಭಾಸ್ಕರ್, ಮಣಿಪುರಿ ಭಾಷೆಯಲ್ಲಿ ಇರುಂಗ್ಬಮ್ ದೆವೆನ್, ಸಂತಾಲಿ ಭಾಷೆಯಲ್ಲಿ ರೂಪ್ಚಂದ್ ಹಂಸ್ಡಾ, ತೆಲುಗು ಭಾಷೆಯಲ್ಲಿ ನಿಖಿಲೇಶ್ವರ್ಗೆ ಪುರಸ್ಕಾರ ಪ್ರಕಟಿಸಲಾಗಿದೆ.
ಇದೂ ಸೇರಿ ಇನ್ನೂ ಹಲವು ಭಾಷೆಗಳಿಗೆ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಶಸ್ತಿ ಪ್ರದಾನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.