ಕಚ್ (ಗುಜರಾತ್): ದೇಶಾದ್ಯಂತ ಆಗಸ್ಟ್ 13 ರಿಂದ 15ರವರೆಗೆ 'ಹರ್ ಘರ್ ತಿರಂಗ' ಅಭಿಯಾನ ನಡೆಯಲಿದೆ. ಅಭಿಯಾನದ ಭಾಗವಾಗಿ ರಾಷ್ಟ್ರಧ್ವಜ ಹಾರಿಸುವಂತೆ ಮಾಧಪರ್ ಗ್ರಾಮದ ವೀರಾಂಗಣರು ದೇಶದ ಜನತೆಗೆ ಮನವಿ ಮಾಡಿದರು.
ಒಂದೇ ರಾತ್ರಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭುಜ್ ತಾಲೂಕಿನ ಮಾಧಪರ್ ಗ್ರಾಮದ ವೀರಾಂಗಣರು ರನ್ ವೇ ನಿರ್ಮಿಸಿದ್ದರು. 1971ರ ಯುದ್ಧದಲ್ಲಿ, ಪಾಕಿಸ್ತಾನಿ ಮಿಲಿಟರಿ ವಿಮಾನಗಳ ಬಾಂಬ್ ದಾಳಿಯಲ್ಲಿ ಏರ್‌ಸ್ಟ್ರಿಪ್ ಹಾನಿಗೊಂಡಿದೆ. ದೇಶಕ್ಕೆ ನಮ್ಮ ಅಗತ್ಯವಿದ್ದಾಗ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಕುಟುಂಬ, ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಮಾನ ನಿಲ್ದಾಣದ ರನ್ ವೇ ನಿರ್ಮಿಸುವ ಕೆಲಸ ಮಾಡಿದ್ದೇವೆ. ಕೇವಲ ಒಂದು ಕರೆಗೆ ಅನೇಕ ಮಹಿಳೆಯರು ತಮ್ಮ ಮನೆಗಳನ್ನು ತೊರೆದು ಪಾಕಿಸ್ತಾನದ ಬಾಂಬ್ ದಾಳಿಯ ನಡುವೆ ರಾತ್ರೋರಾತ್ರಿ ಭುಜ್ ಏರ್‌ಸ್ಟ್ರಿಪ್ ಅನ್ನು ನಿರ್ಮಿಸುವ ಮೂಲಕ ದೇಶದ ರಕ್ಷಣೆಗೆ ಕೊಡುಗೆ ನೀಡಿದ್ದಾರೆ.
ಪರಿಸ್ಥಿತಿ ಏನೇ ಇರಲಿ, ರಾಷ್ಟ್ರ ಮೊದಲು. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಅಭಿಯಾನದಲ್ಲಿ ವೀರಾಂಗಣರು ಮುಂಚೂಣಿಯಲ್ಲಿರುತ್ತಾರೆ. ಆಗಸ್ಟ್ 13 ರಿಂದ 15 ರವರೆಗೆ ದೇಶದ ಏಕತೆ ಮತ್ತು ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ತಮ್ಮ ಮನೆಗಳಲ್ಲಿ ಹಾರಿಸಲಾಗುವುದು ಎಂದು ವೀರಾಂಗಣರು ಹೇಳಿದರು.
ದೇಶದ ರಾಷ್ಟ್ರಧ್ವಜವನ್ನು ಗೌರವಯುತವಾಗಿ ಹಾರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಮಗಾಗಿ ಹುತಾತ್ಮರಾಗುವ ಮೂಲಕ ದೇಶವನ್ನು ಮುಕ್ತಗೊಳಿಸಿದ್ದಾರೆ. ಹಾಗಾಗಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹುತಾತ್ಮರನ್ನು ಸ್ಮರಿಸೋಣ ಎಂದು ವೀರಾಂಗಣರು ಹೇಳಿದರು.
ಇದನ್ನೂ ಓದಿ: ರಾಷ್ಟ್ರಧ್ವಜವನ್ನು ಜೋಪಾನವಾಗಿ ಮಡಿಚಿಡುವ ಬಗೆ ತಿಳಿದಿದೆಯೇ?: ಇಲ್ಲಿದೆ ಮಾಹಿತಿ