ETV Bharat / bharat

ಯೋಗಿ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ವರುಣ್ ಗಾಂಧಿ - ಟೆರೈ ಪ್ರದೇಶದ ಪ್ರವಾಹ

ಬಿಜೆಪಿ ಸಂಸದ ವರುಣ್​ ಗಾಂಧಿ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬಾರಿ ರಾಜ್ಯದ ಪ್ರವಾಹ ಸಂತ್ರಸ್ತರ ಸಂಕಷ್ಟವನ್ನು ಗುರಿಯಾಗಿಸಿಕೊಂಡು ಪ್ರಶ್ನಿಸಿದ್ದಾರೆ.

Varun Gandhi
ವರುಣ್ ಗಾಂಧಿ
author img

By

Published : Oct 22, 2021, 4:29 PM IST

ನವದೆಹಲಿ: ಜನರೇ ಸ್ವಂತವಾಗಿ ಎಲ್ಲವನ್ನೂ ತಮ್ಮಿಚ್ಚೆಯಂತೆ ಮಾಡುವುದಾದರೆ ಸರ್ಕಾರದ ಅಗತ್ಯವೇನಿದೆ ಎಂದು ಬಿಜೆಪಿ ಸಂಸದ ವರುಣ್​ ಗಾಂಧಿ ಮತ್ತೊಮ್ಮೆ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಟೆರೈ ಪ್ರದೇಶದಲ್ಲಿ ಪ್ರವಾಹದ ಉಂಟಾಗಿ ಸಾಕಷ್ಟು ಹಾನಿ ಸಂಭವಿಸಿದ್ದು, ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ, ಯುಪಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಯಾವುದೇ ಸೌಲಭ್ಯ ಕಲ್ಪಿಸುವ ಗೋಜಿಗೆ ಹೋಗಿಲ್ಲ. ಇಂತಹ ಕಠಿಣ ಸಂಭರ್ದದಲ್ಲೂ ಜನರು ತಮಗೆ ತಾವೇ ಸಹಾಯ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವ ಸರ್ಕಾರದ ಅಗತ್ಯವೇನು ಎಂದು ಪ್ರಶ್ನಿಸಿದರು.

  • Much of the Terai is badly flooded. Donating dry rations by hand so that no family is hungry till this calamity ends. It’s painful that when the common man needs the system the most,he’s left to fend for himself.If every response is individual-led then what does ‘governance’ mean pic.twitter.com/P2wF7Tb431

    — Varun Gandhi (@varungandhi80) October 21, 2021 " class="align-text-top noRightClick twitterSection" data=" ">

ಟೆರೈನ ಬಹುತೇಕ ಭಾಗ ಪ್ರವಾಹದ ಹೊಡತಕ್ಕೆ ಒಳಗಾಗಿದೆ. ಈ ವಿಪತ್ತನಿಂದ ಜನರು ಹೊರ ಬರುವವರೆಗೂ ಯಾವುದೇ ಕುಟುಂಬವು ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ಪಡಿತರ ವಿತರಣೆ ಮಾಡಲಾಗಿದೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ವ್ಯವಸ್ಥೆಯು ಹೆಚ್ಚು ಅಗತ್ಯವಿರುವಾಗ, ತನಗೆ ಬೇಕಾದನ್ನು ತಾನೇ ಮಾಡಿಕೊಳ್ಳಲು ಆತನನ್ನು ಬಿಡುವುದು ನೋವಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.

ಈ ಹಿಂದೆ ವರುಣ್​​ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಕಬ್ಬಿನ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಬಳಿಕ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ರಾಜ್ಯದ ಪ್ರವಾಹ ಸಂತ್ರಸ್ತರ ಸಂಕಷ್ಟದ ಬಗ್ಗೆ ಯೋಗಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಗುಡುಗಿದ್ದಾರೆ.

ಇದನ್ನೂ ಓದಿ: ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ 300 ರೂ. ಆನ್‌ಲೈನ್‌ ಟಿಕೆಟ್‌ ಬಿಡುಗಡೆ ಮಾಡಿದ ಟಿಟಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.