ETV Bharat / bharat

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಮುಸ್ತಫಾ: ಇವರ 'ರೋಟಿ ಬ್ಯಾಂಕ್'ಗೆ ಎಲ್ಲೆಡೆ ಮೆಚ್ಚುಗೆ! - ರೈಲ್ವೆ ಅಧಿಕಾರಿಯಾಗಿರುವ ಮುಸ್ತಫಾ

ವಾರಣಾಸಿಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ವಿಶಿಷ್ಟ ರೋಟಿ ಬ್ಯಾಂಕ್ ಎಂಬ ಕ್ರಾರ್ಯಕ್ರಮದ ಮೂಲಕ ಬಡ ಮತ್ತು ಹಸಿದ ಜನರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ಮೊಹಮ್ಮದ್ ಮುಸ್ತಫಾ ಎಂಬುವವರು ಈ ಮಹತ್ತರ ಕಾರ್ಯ ಮಾಡುತ್ತಿದ್ದಾರೆ.

'ರೋಟಿ ಬ್ಯಾಂಕ್'
'ರೋಟಿ ಬ್ಯಾಂಕ್'
author img

By

Published : Dec 18, 2020, 7:50 PM IST

ವಾರಣಾಸಿ( ಉತ್ತರಪ್ರದೇಶ): ದೇವಾಲಯಗಳ ಸ್ಥಳವೆಂದೇ ಪ್ರಖ್ಯಾತಿ ಪಡೆದಿರುವ ವಾರಣಾಸಿಗೆ ನಿತ್ಯ ನೂರಾರು ಯಾತ್ರಿಕರು ಬರುತ್ತಾರೆ. ಆದ್ರೆ ಅಲ್ಲಿಗೆ ಬರುವವರಿಗೆಲ್ಲಾ ಸರಿಯಾದ ಆಹಾರ ದೊರಕುವುದಿಲ್ಲ. ಹಾಗಾಗಿ ಇಲ್ಲಿಗೆ ಬರುವ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಮೊಹಮ್ಮದ್ ಮುಸ್ತಫಾ ಎಂಬುವವರು ಆಹಾರವನ್ನು ನೀಡಲು 'ರೋಟಿ ಬ್ಯಾಂಕ್' ಎಂಬ ವಿಶಿಷ್ಟ ಯೋಜನೆ ಆರಂಭಿಸಿದ್ದಾರೆ.

'ರೋಟಿ ಬ್ಯಾಂಕ್'
'ರೋಟಿ ಬ್ಯಾಂಕ್'

ರೈಲ್ವೆ ಅಧಿಕಾರಿಯಾಗಿರುವ ಮುಸ್ತಫಾ ಅವರು ಕಳೆದ ಎರಡು ವರ್ಷಗಳಿಂದ ಬಡವರಿಗೆ ಮತ್ತು ಯಾತ್ರಾರ್ಥಿಗಳಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಸ್ಥಳೀಯರು ಸಹ ಬೆಂಬಲವನ್ನು ನೀಡುತ್ತಿದ್ದಾರೆ.

ವಿವಾಹ ಕಾರ್ಯಕ್ರಮ, ದೊಡ್ಡ ಪಕ್ಷಗಳ ಕಾರ್ಯಕ್ರಮ, ಯಾವುದೇ ದೊಡ್ಡ ಪ್ರಮಾಣದ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಉಳಿದಿರುವ ಆಹಾರವನ್ನು ಮುಸ್ತಫಾ ಮತ್ತು ಅವರ ತಂಡ ಸಂಗ್ರಹಿಸುತ್ತದೆ. ಬಳಿಕ ಈ ಆಹಾರವನ್ನು ಅಗತ್ಯ ಇರುವವರಿಗೆ ವಿತರಿಸುತ್ತದೆ. ಆಹಾರವನ್ನು ನಗರದಾದ್ಯಂತ ವಿವಿಧ ಪ್ರದೇಶಗಳಲ್ಲಿ ವಿತರಿಸಲಾಗುತ್ತದೆ.

ಓದಿ:OLXನಲ್ಲಿ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿಯನ್ನೇ ಮಾರಾಟಕ್ಕಿಟ್ಟ ಖದೀಮರು: ನಾಲ್ವರು ಅಂದರ್​​

"ನಾವು ವಿವಿಧ ಕಾರ್ಯಕ್ರಮಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ, ಅದನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿರುವ ಜನರಿಗೆ ನೀಡುತ್ತೇವೆ. ನನ್ನ ಸಹಾಯಕರಾದ ರಾಜಾ ಭೈಯಾ ಮತ್ತು ಕುಮಾರ್ ಸ್ವಾಮಿ ಭಟ್​​ ನನಗೆ ಸಹಾಯ ಮಾಡುತ್ತಾರೆ. ಜನರಿಗೆ ಹಸಿವಾದಾಗ ತಿನ್ನಲು ಆಹಾರ ನೀಡುತ್ತಿದ್ದೇನೆ ಎಂಬುದೇ ನನಗೆ ಹೆಮ್ಮೆಯ ವಿಷಯವಾಗಿದೆ. ನಾನು 2018 ರಲ್ಲಿ ರೋಟಿ ಬ್ಯಾಂಕ್​ನನ್ನು ಪ್ರಾರಂಭಿಸಿದೆ. ನಾವು 24 * 7 ಕೆಲಸ ಮಾಡುತ್ತೇವೆ. ಹಳಸಿದ ಆಹಾರವನ್ನು ನಾವು ವಿತರಿಸುವುದಿಲ್ಲ" ಎಂದು ಮೊಹಮ್ಮದ್ ಮುಸ್ತಫಾ ಹೇಳುತ್ತಾರೆ.

"ರೋಟಿ ಬ್ಯಾಂಕ್ ಒದಗಿಸುವ ಆಹಾರದ ಗುಣಮಟ್ಟ ನಿಜವಾಗಿಯೂ ಉತ್ತಮವಾಗಿದೆ. ಅವರಿಗೆ ಸಹಾಯ ಮಾಡಲು ನಾನು ಪ್ರತಿ ತಿಂಗಳು 500 ಅಥವಾ 1000 ರೂ.ಗಳನ್ನು ದಾನ ಮಾಡುತ್ತೇನೆ" ಎಂದು ಸ್ಥಳೀಯರೊಬ್ಬ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.