ETV Bharat / bharat

ಹೆಲ್ಮೆಟ್​ ಧರಿಸಲು ನಿರಾಕರಿಸಿದ ಓಲಾ ಬೈಕ್​ ಚಾಲಕ; ಸಂಸ್ಥೆಗೆ ಪೊಲೀಸ್‌ ನೋಟಿಸ್

ಇಲ್ಲಿಯವರೆಗೆ ಹೆಲ್ಮೆಟ್​ ಧರಿಸಿಲ್ಲ. ಹೆಲ್ಮೆಟ್​ ಧರಿಸುವುದೂ ಇಲ್ಲ ಎಂದು ಹಠ ಮಾಡಿದ ಓಲಾ ಬೈಕ್​ ಟ್ಯಾಕ್ಸಿ ಚಾಲಕನ ವಿರುದ್ಧ ಗ್ರಾಹಕರು ದೂರು ಸಲ್ಲಿಸಿದ್ದಾರೆ.

test
test
author img

By

Published : Feb 3, 2023, 10:34 PM IST

ವಾರಣಾಸಿ: ರಸ್ತೆ ಸಂಚಾರದ ವೇಳೆ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗಿರುವುದು ಕಡ್ಡಾಯ. ಆದರೆ, ಈ ನಿಯಮಗಳು ತನಗಲ್ಲ ಎಂದು ಹಠ ಮಾಡಿದ ಓಲಾ ಬೈಕ್​ ಟ್ಯಾಕ್ಸಿ ಚಾಲಕನ ವಿರುದ್ಧ ಗ್ರಾಹಕರು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ನಡೆದಿದೆ.

ವಾರಣಾಸಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಓಲಾ ಬೈಕ್​ ಟಾಕ್ಸಿಯನ್ನು ಬುಕ್​ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಬಂದ ಚಾಲಕ, ಗ್ರಾಹಕರನ್ನು ಕೂರಿಸಿಕೊಂಡು ಬಿಡಬೇಕಿರುವ ಸ್ಥಳಕ್ಕೆ ಸಜ್ಜಾಗಲು ಮುಂದಾಗಿದ್ದಾನೆ. ಈ ವೇಳೆ ಗ್ರಾಹಕರು ಆತನಿಗೆ ಹೆಲ್ಮೆಟ್​ ಧರಿಸುವಂತೆ ತಿಳಿಸಿದ್ದಾರೆ. ಆದರೆ, ಚಾಲಕ ಮಾತ್ರ ಹೆಲ್ಮೆಟ್​ ಧರಿಸಲು ನಿರಾಕರಿಸಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಚಾಲಕನ ವಿರುದ್ಧ ಗ್ರಾಹಕರು ಟ್ರಾಫಿಕ್​ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಬೈಕ್​ ಸರ್ವಿಸ್​ ಒದಗಿಸುತ್ತಿದ್ದ ಓಲಾ ಕಂಪನಿ ನಿರ್ವಾಹಕರಿಗೆ ನೋಟಿಸ್​ ಜಾರಿ ಮಾಡಿದ್ದು, ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಗ್ರಾಹಕರಾದ ಸತ್ಯ ಫೌಂಡೆಷನ್​ ಕಾರ್ಯದರ್ಶಿ ಚೇತನ್​ ಉಪಾಧ್ಯಾಯ್​​, ಬುಧವಾರ ಸಾಮಾಜಿಕ ಕಾರ್ಯಕ್ರಮಲ್ಲಿ ಭಾಗಿಯಾಗುವ ಸಂಬಂಧ ತೆರಳಲು ಓಲಾ ಬೈಕ್​ ಬುಕ್​ ಮಾಡಿದೆ. ಸರಿಯಾದ ಸಮಯಕ್ಕೆ 65 ಬಿಸಿ- 2520 ಸಂಖ್ಯೆ ಹೊಂದಿದ್ದ ಬೈಕ್​ ಸ್ಥಳಕ್ಕೆ ಆಗಮಿಸಿತು. ಓಲಾ ಡ್ರೈವರ್​ ಒಟಿಪಿ ಪಡೆದ. ಇದಾದ ಬಳಿಕ ಆತ ಹೆಲ್ಮೆಟ್​ ಧರಿಸುವುದಿಲ್ಲ ಎಂದಿದ್ದಾನೆ.

ಇದೇ ವೇಳೆ ಯಾಕೆ ಹೆಲ್ಮೆಟ್​ ಧರಿಸುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ತಮ್ಮ ಜೀವನದಲ್ಲಿ ಎಂದೂ ಹೆಲ್ಮೆಟ್​ ಧರಿಸಿಲ್ಲ. ಮುಂದೆ ಎಂದೂ ಹೆಲ್ಮೆಟ್​ ಧರಿಸಬಾರದು ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ. ಟ್ರಾಫಿಕ್​ ನಿಯಮ ಪಾಲನೆ ಮಾಡಬೇಕು ಅಲ್ವಾ ಎಂದು ಗ್ರಾಹಕ ಪ್ರಶ್ನೆ ಮಾಡಿದ್ದಕ್ಕೆ, ಆತ ಬೈಕ್​ ಸೇವೆ ನೀಡಲು ನಿರಾಕರಿಸಿದ್ದು, ಬರುವುದಿದ್ದರೆ ಬನ್ನಿ, ಇಲ್ಲ ಬಿಡುವಂತೆ ತಿಳಿಸಿದ. ಇದಾದ ಬಳಿಕ ಓಲಾ ಕಂಪನಿಯ ಮುಖ್ಯ ಕಚೇರಿಗೆ ಈ ಸಂಬಂಧ ವರದಿ ಮಾಡಿದೆ. ವಾರಣಾಸಿ ಟ್ರಾಫಿಕ್​ ಪೊಲೀಸ್​ ಎಸಿಪಿ ವಿಕಾಸ್​ ಶ್ರೀವಾತ್ಸವ್​ಗೆ ಕೂಡ ಫೋನ್​ ಮೂಲಕ ತಿಳಿಸಿದೆ.

ಹೆಲ್ಮೆಟ್​ ಹಾಕಲು ನಿರಾಕರಿಸಿದ ಓಲಾ ಬೈಕ್​ ಡ್ರೈವರ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸಿಪಿಗೆ ಲಿಖಿತ ದೂರನ್ನು ಕೂಡ ಸಿಯುಜಿ ವಾಟ್ಸಾಪ್​ ಮೂಲಕ ಕಳುಹಿಸಿದೆ. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ ವಾರಾಣಾಸಿ ಟ್ರಾಫಿಕ್​ ಅಸಿಸ್ಟಂಟ್​ ಕಮಿಷನರ್​ ಓಲಾ ಕಂಪನಿ ಮುಖ್ಯ ಕಚೇರಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಈ ನೋಟಿಸ್​ನಲ್ಲಿ ಕಂಪನಿಯ ಎಲ್ಲಾ ಡ್ರೈವರ್​ಗಳು ಸೀಟ್​ ಬೆಲ್ಟ್​​, ಹೆಲ್ಮೆಟ್​ ಹಾಕುವುದು ಸೇರಿದಂತೆ ಟ್ರಾಫಿಕ್​ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು. ಈ ನಿಯಮವನ್ನು ಎಲ್ಲಾ ಚಾಲಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.