ETV Bharat / bharat

ಜ್ಞಾನಾವಪಿ ಮಸೀದಿಯೊಳಗೆ ದೇವರನ್ನು ಪೂಜಿಸಲು ಅನುಮತಿ ವಿಚಾರ : ಪ್ರತಿಕ್ರಿಯೆ ಕೋರಿದ ಕೋರ್ಟ್

author img

By

Published : Aug 21, 2021, 7:00 PM IST

Updated : Aug 21, 2021, 7:36 PM IST

ದೇವಸ್ಥಾನದಲ್ಲಿ ಗಣೇಶ, ಹನುಮಾನ್, ದೇವಿ ಗೌರಿ ಮತ್ತು ನಂದಿ ವಿಗ್ರಹಗಳನ್ನು ಅಲಂಕರಿಸುವುದನ್ನು ಒಳಗೊಂಡಿರುವ ಫಿರ್ಯಾದಿಗಳ ಮೂಲಭೂತ ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಜೈನ್ ಮನವಿ ಮಾಡಿದರು..

ಜ್ಞಾನಾವಪಿ ಮಸೀದಿ
ಜ್ಞಾನಾವಪಿ ಮಸೀದಿ

ವಾರಾಣಸಿ (ಉತ್ತರಪ್ರದೇಶ): ಜ್ಞಾನಾವಪಿ ಮಸೀದಿಯೊಳಗೆ ಗಂಗಾ, ಹನುಮಾನ್, ಶ್ರೀಗೌರಿ-ಶಂಕರ, ಗಣೇಶ, ಶ್ರೀ ಮಹಾಕಾಳೇಶ್ವರ, ಶ್ರೀ ಮಹೇಶ್ವರ, ಶ್ರೀದೇವಿ ಶೃಂಗಾರ ಗೌರಿ ದೇವತೆಗಳು ಕಾಣಿಸಿವೆ. ಈ ಹಿನ್ನೆಲೆ ಮಸೀದಿಯೊಳಗೆ ದೇವತೆಗಳ ದರ್ಶನ, ಪೂಜೆ ಮಾಡಲು ಅವಕಾಶ ನೀಡುವಂತೆ ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ವಾರಾಣಸಿಯ ಸ್ಥಳೀಯ ನ್ಯಾಯಾಲಯವು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ವಾರಣಾಸಿ ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೋರಿದೆ. ರಾಖಿ, ಲಕ್ಷ್ಮಿ, ಸೀತಾ, ಮಂಜು ಮತ್ತು ರೇಖಾ ಎಂಬ ಐವರು ಮಹಿಳೆಯರು, ಮಸೀದಿಯೊಳಗಿನ ದೇವತೆಗಳ ಪೂಜೆಗೆ ಅನುಮತಿ ನೀಡಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಬುಧವಾರ ರಾಖಿ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಈ ಪ್ರದೇಶದಲ್ಲಿ ಮೊಘಲರ ಆಳ್ವಿಕೆಯಲ್ಲಿ ದೇವಾಲಯ ಸಂಕೀರ್ಣವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಹಳೆಯ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದಲ್ಲಿ ಕಾಣುವ ಅಥವಾ ಕಾಣದ ದೇವತೆಗಳನ್ನು ಪೂಜಿಸುವ ಹಕ್ಕು ಭಕ್ತರಿಗೆ ಇದೆ ಎಂದು ಉಲ್ಲೇಖಿಸಲಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲರಾದ ಹರಿ ಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ಅವರು, ಮೂಲ ಕಾಶಿ ವಿಶ್ವನಾಥ ದೇವಸ್ಥಾನ ಸಂಕೀರ್ಣವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಆಡಳಿತಾವಧಿಯಲ್ಲಿ ನಾಶಪಡಿಸಿದರು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ದೇವಸ್ಥಾನದಲ್ಲಿ ಗಣೇಶ, ಹನುಮಾನ್, ದೇವಿ ಗೌರಿ ಮತ್ತು ನಂದಿ ವಿಗ್ರಹಗಳನ್ನು ಅಲಂಕರಿಸುವುದನ್ನು ಒಳಗೊಂಡಿರುವ ಫಿರ್ಯಾದಿಗಳ ಮೂಲಭೂತ ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಜೈನ್ ಮನವಿ ಮಾಡಿದರು.

Last Updated : Aug 21, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.