ವಾರಣಾಸಿ : ವಾರಣಾಸಿ ಧಾರ್ಮಿಕ ವ್ಯವಹಾರಗಳ ನಿರ್ದೇಶನಾಲಯದ ಪ್ರಧಾನ ಕಚೇರಿಯ (ಡಿಆರ್‌ಎ) ಮೊದಲ ನಿರ್ದೇಶಕರಾಗಿ ವಿಭಾಗೀಯ ಆಯುಕ್ತ ದೀಪಕ್ ಅಗರ್‌ವಾಲ್ ಅವರನ್ನು ನೇಮಿಸಲಾಗಿದೆ. ನಿರ್ದೇಶನಾಲಯವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ಆರು ತಿಂಗಳ ನಂತರ ಈ ಆದೇಶ ಬಂದಿದೆ.
ಧಾರ್ಮಿಕ ವ್ಯವಹಾರ ಮತ್ತು ಪ್ರವಾಸೋದ್ಯಮಕ್ಕಾಗಿ ಯುಪಿ ರಾಜ್ಯ ಸಚಿವ ನೀಲಕಂಠ ತಿವಾರಿ ಅವರು ಮಾತನಾಡಿದ್ದು,"ವಾರಣಾಸಿ ವಿಭಾಗದ ಆಯುಕ್ತರಿಗೆ ಡಿಆರ್‌ಎ ನಿರ್ದೇಶಕರಾಗಿ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಕಾಶಿಯ 'ವಿಶ್ವನಾಥ್ ಧಾಮ್' (ಕಾರಿಡಾರ್)ಪ್ರಕ್ರಿಯೆ ಪ್ರಾರಂಭವಾಗಿದೆ. ಇದಕ್ಕೆ ಸೈಟ್ ಅಂತಿಮಗೊಂಡ ನಂತರ ನಿರ್ಮಾಣ ಪ್ರಾರಂಭವಾಗುತ್ತದೆ" ಎಂದರು.
ಇನ್ನು, ದೀಪಕ್ ಅಗರ್‌ವಾಲ್ ಮಾತನಾಡಿ, "ಕಚೇರಿ ಸ್ಥಾಪಿಸುವುದರ ಹೊರತಾಗಿ, ಕಚೇರಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ. ಧಾರ್ಮಿಕ ತಾಣಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಉತ್ತೇಜಿಸುವಲ್ಲಿ ಆಡಳಿತಾತ್ಮಕ ಕಾರ್ಯವನ್ನು ಸುಲಭಗೊಳಿಸಲು ಡಿಆರ್‌ಎ ಸ್ಥಾಪಿಸುವ ಪ್ರಸ್ತಾವನೆಯನ್ನು 2020ರ ಡಿಸೆಂಬರ್ 11ರಂದು ರಾಜ್ಯ ಸಚಿವ ಸಂಪುಟ ಅಂಗೀಕರಿಸಿತು" ಎಂದಿದ್ದಾರೆ.
ಕಾಶಿ ವಿಶ್ವನಾಥ್ ವಿಶೇಷ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆವಿಎಸ್‌ಎಡಿಬಿ) ಸಹಾಯದಿಂದ ಡಿಆರ್‌ಎ ಕೇಂದ್ರ ಕಚೇರಿಯನ್ನು ಸ್ಥಾಪಿಸಲಾಗುತ್ತದೆ. ಡಿಆರ್‌ಎಯ ಉಪಕಚೇರಿಯನ್ನು ಗಾಜಿಯಾಬಾದ್‌ನ ಕೈಲಾಶ್ ಮಾನಸ ರೋವರ್ ಕಚೇರಿ ಕಟ್ಟಡದಲ್ಲಿ ಸ್ಥಾಪಿಸಲಾಗುತ್ತಿದೆ.