ನವದೆಹಲಿ: ದಕ್ಷಿಣ ಭಾರತದಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಚೆನ್ನೈ, ಬೆಂಗಳೂರು ಹಾಗೂ ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರವೇ ಆರಂಭವಾಗಲಿದೆ.
ಈಗಾಗಲೇ ದೇಶದಲ್ಲಿ ನಾಲ್ಕು ಕಡೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿವೆ. ಇದೀಗ ಐದನೇ ರೈಲನ್ನು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಾರಂಭಿಸಲು ಯೋಜಿಸಲಾಗಿದೆ. ಇದೇ ನವೆಂಬರ್ 10ರಂದು ಈ ಮೂರು ನಗರಗಳನ್ನು ಸಂದಿಸುವ ರೈಲು ಆರಂಭವಾಗುವ ನಿರೀಕ್ಷೆ ಇದೆ.
-
Vande Bharat Express likely to make its southern debut on Nov 10; fifth edition to run between Chennai-Bengaluru and Mysuru: Sources
— Press Trust of India (@PTI_News) October 14, 2022 " class="align-text-top noRightClick twitterSection" data="
">Vande Bharat Express likely to make its southern debut on Nov 10; fifth edition to run between Chennai-Bengaluru and Mysuru: Sources
— Press Trust of India (@PTI_News) October 14, 2022Vande Bharat Express likely to make its southern debut on Nov 10; fifth edition to run between Chennai-Bengaluru and Mysuru: Sources
— Press Trust of India (@PTI_News) October 14, 2022
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಹಿಮಾಚಲ ಪ್ರದೇಶದ ಉನಾ ಹಾಗೂ ದೆಹಲಿ ಮಧ್ಯೆ ಈ ರೈಲಿಗೆ ಹಸಿರು ನಿಶಾನೆಯನ್ನು ಮೋದಿ ತೋರಿಸಿದ್ದರು. ಇನ್ನು, ಈಗಾಗಲೇ ಗುಜರಾತ್ನ ಗಾಂಧಿ ನಗರ ಮತ್ತು ಮಹಾರಾಷ್ಟ್ರದ ಮುಂಬೈ ಹಾಗೂ ವಾರಾಣಸಿ ಹಾಗೂ ದೆಹಲಿ ನಡುವೆ ಸೆಮಿ ಹೈಸ್ಪೀಡ್ ರೈಲು ಸಂಚರಿಸುತ್ತಿದೆ.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಧಾನಿ ಮೋದಿ