ವಲ್ಸಾದ್: ಇತ್ತೀಚೆಗೆ ಕಾರಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಗಾಯಕಿ ವೈಶಾಲಿ ಬಲ್ಸಾರಾ ಅವರ ಮೃತ ದೇಹ ಪತ್ತೆಯಾಗಿತ್ತು. ಬಳಿಕ ಕೊಲೆಯೇ ಅಥವಾ ಆತ್ಮಹತ್ಯೆಯೋ ಎಂಬ ಹಲವು ಅನುಮಾನಗಳೂ ಕಾಡತೊಡಗಿದ್ದು, ಈ ಕುರಿತು ಪೊಲೀಸರು ಗಂಭೀರ ತನಿಖೆ ನಡೆಸಿದ್ದರು. ಪ್ರಕರಣದ ಕುರಿತು ಇಂದು ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದ್ದು, ವೈಶಾಲಿಯ ಫೇಸ್‌ಬುಕ್ ಸ್ನೇಹಿತೆ ಬಬಿತ ಎನ್ನುವವಳೇ ಹಣಕ್ಕಾಗಿ ವೈಶಾಲಿಯನ್ನು ಕೊಂದಿರುವುದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಬಬಿತಾ ಮತ್ತು ವೈಶಾಲಿ ಬಲ್ಸಾರಾ ನಡುವೆ 25 ಲಕ್ಷ ರೂಪಾಯಿಯ ವ್ಯವಹಾರ ನಡೆದಿದ್ದು, ಇದೇ ವಿಚಾರವಾಗಿ ಬಬಿತ ವೈಶಾಲಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ತಿಳಿದು ಬಂದಿದೆ. ಇನ್ನು ಕಳೆದ ಐದು ದಿನಗಳ ಹಿಂದೆ ಗಾಯಕಿ ವೈಶಾಲಿ ಬಲ್ಸಾರಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಕಾರೊಂದರಲ್ಲಿ ಪತ್ತೆಯಾಗಿತ್ತು. ದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಕತ್ತು ಹಿಸುಕಿ ಕೊಂದಿರುವ ಮಾಹಿತಿ ಬಂದಿತ್ತು ಈ ಹಿನ್ನೆಲೆ ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದರು.
ವೈಶಾಲಿ ಬಲ್ಸಾರಾ ತಮ್ಮ ಪತಿಯೊಂದಿಗೆ ಗುಜರಾತ್, ಮುಂಬೈ ಸೇರಿದಂತೆ ವಿದೇಶಗಳಲ್ಲಿಯೂ ಸ್ಟೇಜ್ ಶೋಗಳನ್ನು ಕೊಡುವ ಮೂಲಕ ಪ್ರಸಿದ್ದಿ ಪಡೆದಿದ್ದರು.
ಇದನ್ನೂ ಓದಿ: ಗುಜರಾತ್ ಗಾಯಕಿ ವೈಶಾಲಿ ಬಲ್ಸಾರಾ ಮೃತದೇಹ ಕಾರಿನಲ್ಲಿ ಪತ್ತೆ.. ಕೊಲೆ ಶಂಕೆ.