ಇಡುಕ್ಕಿ (ಕೇರಳ): ಇಲ್ಲಿನ ವಾಗಮೊನ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸೋಮವಾರ ರೇವ್ ಪಾರ್ಟಿ ನಡೆಸುತ್ತಿದ್ದ 9 ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಹಿಂದೆ ಇದೇ ರೆಸಾರ್ಟ್‌ನಿಂದ 60 ಜನರನ್ನು ವಶಕ್ಕೆ ಪಡೆದಿದ್ದು, ಅವರಿಂದ ಎಲ್‌ಎಸ್‌ಡಿ ಮತ್ತು ಗಾಂಜಾಗಳನ್ನು ವಶಪಡಿಸಿಕೊಂಡಿದ್ದರು.
ರೇವ್ ಪಾರ್ಟಿ ಸಂಘಟಕರಾದ ತೊಡುಪುಳ ಮೂಲದ ಅಜ್ಮಲ್ (30), ಮಲಪ್ಪುರಂನ ಮೆಹರ್ ಶೆರಿನ್ (26), ಎಡಪ್ಪಲ್ನ ನಬೀಲ್ (36), ಸಲ್ಮಾನ್ (38), ಅಜಯ್ (41) ಮತ್ತು ಕೋಯಿಕ್ಕೋಡ್‌ನ ಶೌಕತ್ (36), ಕಾಸರಗೋಡಿನ ಮೊಹಮ್ಮದ್ ರಶೀದ್ (31), ಚವಕ್ಕಾದ್‌ನ ನಿಷಾದ್ (36), ಮತ್ತು ತ್ರಿಪೂನಿಥಾರ ಮೂಲದ ಬ್ರೆಸ್ಟಿ ವಿಶ್ವಾಸ್ (23) ಬಂಧಿತರು.
ರೇವ್ ಪಾರ್ಟಿಯಲ್ಲಿ ಎಲ್‌ಎಸ್‌ಡಿ, ಹೆರಾಯಿನ್, ಗಮ್, ಗಾಂಜಾ ಸೇರಿದಂತೆ ಹಲವು ಡ್ರಗ್ಗಳನ್ನು ದೊರಕಿದೆ. ಈ ಪಾರ್ಟಿಯು ಹುಟ್ಟುಹಬ್ಬ ಆಚರಣೆಯ ಸಲುವಾಗಿ ನಡೆದಿದೆ. ಬಂಧಿತರ ಫೋನ್ ವಿವರಗಳನ್ನು ಸಂಗ್ರಹಿಸಿದ ನಂತರ ಎನ್‌ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ರೇವ್ ಪಾರ್ಟಿ ನಡೆಸಲು ರೆಸಾರ್ಟ್ ನೀಡಿದ ಮಾಲೀಕ ಶಾಜಿ ಕುಟ್ಟಿಕಾಡು ಎಂಬಾತ ಸಿಪಿಐಎಂ ಪಕ್ಷದ ಸ್ಥಳೀಯ ಕಾರ್ಯದರ್ಶಿಯಾಗಿದ್ದು, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿದ್ದೇವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಕೆ ಶಿವರಾಮನ್ ಹೇಳಿದ್ದಾರೆ.