ETV Bharat / bharat

ಹಳಿ ತಪ್ಪಿದ ಗೂಡ್ಸ್​ ರೈಲು: ವಡೋದರಾ- ಅಹಮದಾಬಾದ್​​​​​​​​​​ ನಡುವೆ ಸಂಚಾರ ಅಸ್ತವ್ಯಸ್ತ

ಮಹಮದಾಬಾದ್​ ಬಳಿ ಗೂಡ್ಸ್ ರೈಲು ಹಳಿತಪ್ಪಿದೆ. ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ 9 ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದು ಮಾಡಲಾಗಿದೆ.

Vadodara To Ahmedabad Rail Operations Were Affected Due To Goods Train Derail
ಹಳಿ ತಪ್ಪಿದ ಗೂಡ್ಸ್​ ರೈಲು: ವಡೋದರಾ- ಅಹಮದಾಬಾದ್​​​​​​​​​​ ನಡುವೆ ಸಂಚಾರದ ಅಸ್ತವ್ಯಸ್ತ
author img

By

Published : Aug 15, 2023, 8:03 AM IST

ಖೇಡಾ( ಗುಜರಾತ್​): ಖೇಡಾ ಜಿಲ್ಲೆಯ ಮಹಮದಾಬಾದ್ ಬಳಿ ಗೂಡ್ಸ್ ರೈಲು ಹಳಿತಪ್ಪಿದೆ. ಈ ಘಟನೆಯಿಂದಾಗಿ ವಡೋದರಾದಿಂದ ಅಹಮದಾಬಾದ್‌ಗೆ ರೈಲು ಸಂಚಾರ ಸ್ಥಗಿತಗೊಂಡಿದೆ. ರೈಲ್ವೆ ಹಳಿಯ ಒಂದು ಬದಿಯನ್ನು ಮುಚ್ಚಲಾಗಿದೆ. ಗೂಡ್ಸ್​ ಹಳಿ ತಪ್ಪಿದ್ದರಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ.

ವಡೋದರಾದಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಬೋಗಿ ಮಹಮದಾಬಾದ್ ಖೇಡಾ ರಸ್ತೆ ನಿಲ್ದಾಣದಲ್ಲಿ ಹಠಾತ್ ಹಳಿ ತಪ್ಪಿದೆ. ಕೆಲವು ತಾಂತ್ರಿಕ ಕಾರಣದಿಂದ ಕೋಚ್ ಹಳಿತಪ್ಪಿದೆ ಎಂದು ಹೇಳಲಾಗುತ್ತಿದೆ. ಗೂಡ್ಸ್​ ಹಳಿ ತಪ್ಪಿದ ಮಾಹಿತಿ ಸಿಕ್ಕ ತಕ್ಷಣವೇ ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಹಳಿ ತಪ್ಪಿದ ಗೂಡ್ಸ್​ ರೈಲು
ಹಳಿ ತಪ್ಪಿದ ಗೂಡ್ಸ್​ ರೈಲು

ಈ ನಡುವೆ ಗೂಡ್ಸ್​ ಹಳಿ ತಪ್ಪಿದ ಪರಿಣಾಮ ಅಹಮದಾಬಾದ್ - ವಡೋದರಾ ನಡುವೆ ರೈಲು ಸಂಚಾರಕ್ಕೆ ತೊಂದರೆಯಾಯಿತು. ಅದೇ ಸಮಯದಲ್ಲಿ, ವಡೋದರಾದಿಂದ ಅಹಮದಾಬಾದ್ ಕಡೆಗೆ ಬರುವ ರೈಲುಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಗೂಡ್ಸ್ ರೈಲನ್ನು ಮತ್ತೆ ಹಳಿಗೆ ತರಲು ರೈಲ್ವೆ ಇಲಾಖೆ ಯುದ್ಧೋಪಾದಿಯಲ್ಲಿ ಅಭಿಯಾನ ಆರಂಭಿಸಿದೆ.

ರೈಲು ಸಂಚಾರಕ್ಕೆ ತೊಂದರೆ: ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಹಮದಾಬಾದ್ ರೈಲು ನಿಲ್ದಾಣದ ಉತ್ತರ ಭಾಗದಲ್ಲಿರುವ ಗರ್ನಾಲಾ ಮೂಲಕ ಹಾದು ಹೋಗುತ್ತಿದ್ದ ಗೂಡ್ಸ್ ರೈಲಿನ ಚಕ್ರ ಹಠಾತ್ ಹಳಿತಪ್ಪಿತು. ಈ ಘಟನೆಯ ಮಾಹಿತಿ ಬಂದ ಕೂಡಲೇ ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ, ವಡೋದರಾದಿಂದ ಅಹಮದಾಬಾದ್‌ಗೆ ತೆರಳಬೇಕಾಗಿರುವ ರೈಲು ಸಂಚಾರಗಳಿಗೆ ಈ ಘಟನೆಯಿಂದ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಕಾರ್ಮಿಕ ವರ್ಗ, ವಿದ್ಯಾರ್ಥಿ ವರ್ಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು.

9 ರೈಲುಗಳ ಸಂಚಾರ ಸಂಪೂರ್ಣ ರದ್ದತಿ: ಕರ್ಣಾವತಿ ರೈಲು ಸೇರಿದಂತೆ ಪ್ರಮುಖ ರೈಲುಗಳನ್ನು ವಡೋದರ ಸುತ್ತಮುತ್ತ ನಿಲ್ಲಿಸಲಾಗಿತ್ತು. ಸಿಕ್ಕಿಬಿದ್ದ ರೈಲನ್ನು ಹಳಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಸಂಚಾರ ತೆರವುಗೊಳಿಸಲಾಗುವುದು. ಸದ್ಯ ರೈಲ್ವೆ ಸಿಬ್ಬಂದಿಯಿಂದ ಸಮರೋಪಾದಿಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದೆ. ಮುಂದಿನ ಎರಡು ದಿನಗಳ ಕಾಲ ಈ ಮಾರ್ಗದಲ್ಲಿ 9 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ತಿಂಗಳ ಹಿಂದೆಯೂ ನಡೆದಿತ್ತು ಅಪಘಾತ: ಒಂದು ತಿಂಗಳ ಹಿಂದೆ ಮಹಮದಾಬಾದ್ ಬಳಿ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದವು. ಇದಾಗಿ ಒಂದು ತಿಂಗಳ ನಂತರ ಸೋಮವಾರ ಸಂಜೆ ಗೂಡ್ಸ್​ ಹಳಿ ತಪ್ಪಿದೆ. ಭವಿಷ್ಯದಲ್ಲಿ ಯಾವುದೇ ದೊಡ್ಡ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

ಇದನ್ನು ಓದಿ: ಅಮೆರಿಕದಲ್ಲಿ ಏರ್​ ಶೋ ವೇಳೆ ವಿಮಾನ ಪತನ: ಪ್ಯಾರಾಚೂಟ್​ ಬಳಸಿ ಪ್ರಾಣ ಉಳಿಸಿಕೊಂಡ ಪೈಲಟ್​ಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.