ETV Bharat / bharat

ಗುಜರಾತ್ ವಡೋದರಾದಿಂದ ಮಹಿಳಾ ಪೇದೆ ನಾಪತ್ತೆ: ಸ್ನೇಹಿತನೊಂದಿಗೆ ಮಹಾರಾಷ್ಟ್ರದಲ್ಲಿ ಪತ್ತೆ: ಮುಂದುವರಿದ ತನಿಖೆ

ವಡೋದರಾ ಜಿಲ್ಲೆಯ ದಾಭೋಯ್ ಠಾಣೆಯ ಮಹಿಳಾ ಪೇದೆ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು - ಮಹಾರಾಷ್ಟ್ರದಲ್ಲಿ ಸದ್ದಾಂ ಎಂಬ ಯುವಕನ ಜತೆಗೆ ಮಹಿಳಾ ಪೇದೆ ಇರುವ ಮಾಹಿತಿ ಪೊಲೀಸ​​ರಿಗೆ ಲಭ್ಯ- ಐಶಾರಾಮಿ ಬಸ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಿದ ಪೊಲೀಸರು - ಈಗ ಇದನ್ನೂ ಲವ್ ಜಿಹಾದ್ ಎಂದು ಮಹಿಳಾ ಪೇದೆಯ ಸಂಬಂಧಿಕರ ಆರೋಪ.

Missing case of female constable from the station
ಠಾಣೆಯ ಮಹಿಳಾಪೇದೆ ನಾಪತ್ತೆ ಪ್ರಕರಣ
author img

By

Published : Jan 19, 2023, 9:21 PM IST

ವಡೋದರಾ(ಗುಜರಾತ್​): ವಡೋದರಾ ಜಿಲ್ಲೆಯ ದಾಭೋಯ್ ಠಾಣೆಯ ಮಹಿಳಾ ಪೇದೆ ನಾಪತ್ತೆಯಾಗಿರುವ ಪ್ರಕರಣ ಮತ್ತೆ ಈಗ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಾಪತ್ತೆಯಾಗಿದ್ದ ಆ ಮಹಿಳಾ ಪೇದೆಯೂ ಮಹಾರಾಷ್ಟ್ರದಲ್ಲಿ ಸದ್ದಾಂ ಎಂಬ ಯುವಕನನ್ನು ಭೇಟಿಯಾಗಿರುವ ಕುರಿತು ಗುರುವಾರ ಪೊಲೀಸ್​ರಿಗೆ ಸುಳಿವು ಸಿಕ್ಕಿದೆ. ಈಗ ಇದನ್ನೂ ಲವ್ ಜಿಹಾದ್ ಎಂದು ಮಹಿಳಾ ಪೇದೆಯ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ದಾಭೋಯ್​​ದಿಂದ ಮಣಿ ಚೌಧರಿ ಎಂಬ ಮಹಿಳಾ ಪೇದೆ ನಾಪತ್ತೆಯಾಗಿದ್ದಳು. ಆಗ ವಡೋದರದ ದಾಭೋಯ್‌ನಿಂದ ನನ್ನ ಮಗಳು ಮಹಿಳಾ ಪೇದೆ ನಾಪತ್ತೆಯಾಗಿದ್ದಾಳೆ ಎಂದು ಅವಳ ತಂದೆ ಜನವರಿ 16ರಂದು ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ಭೇದಿಸಲು ಪೊಲೀಸರು ತನಿಖೆಯನ್ನು ತೀವ್ರ ಚುರುಕುಗೊಳಿಸಿದ್ದರು.

ವಿದೇಶಕ್ಕೆ ಹೋಗುವುದಾಗಿ ಸಂದೇಶ:ವಡೋದರಾದ ದಾಬೋಯ್ ಠಾಣೆಯಲ್ಲಿ ಮಹಿಳಾ ಪೇದೆಯ ತಂದೆ ದೂರು ದಾಖಲಿಸಿದ್ದ ಬಳಿಕ ಮಣಿಬೆಹನ್ ತನ್ನ ಸಹೋದರಿಗೆ ವಿದೇಶಕ್ಕೆ ಹೋಗುವುದಾಗಿ ಸಂದೇಶ ಕಳುಹಿಸಿದ್ದರು. ಆದರೆ, ಸದ್ಯ ಈ ಮಹಿಳಾ ಪೇದೆಯ ಬಳಿ ಪಾಸ್‌ಪೋರ್ಟ್ ಇಲ್ಲ. ಮಹಿಳಾ ಪೇದೆ ಎಲ್ಲಿಂದ ವಿದೇಶಕ್ಕೆ ಹೋಗಬಹುದು ಎಂದು ಪೊಲೀಸರು ತನಿಖೆ ನಡೆಸಿದ್ದರು.

ಕಾನ್ಸ್​​ಟೇಬಲ್​ ಮಣಿ ಚೌಧರಿ ಮೊಬೈಲ್ ಟ್ರ್ಯಾಕ್: ಪೊಲೀಸರು ತನಿಖೆಯಲ್ಲಿ, ಮಹಿಳಾ ಪೇದೆ ಮಣಿ ಚೌಧರಿ ಅವರ ಮೊಬೈಲ್ ಟ್ರ್ಯಾಕ್ ಮಾಡಿದ ಬಳಿಕ ಅವರು ಪ್ರಸ್ತುತ ಮಹಾರಾಷ್ಟ್ರದಲ್ಲಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಹಾಗೂ ಮಹಿಳಾ ಪೇದೆಯ ತಂದೆ ನೀಡಿದ ದೂರಿನನ್ವಯ ವಡೋದರಾ ನಗರ ಗ್ರಾಮಾಂತರ ಪ್ರದೇಶದಲ್ಲಿ ವಿವಿಧ ತಂಡಗಳಿಂದ ತನಿಖೆ ನಡೆಸಲಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಇಬ್ಬರ ಲೊಕೇಶನ್ ಪಡೆದು ತಂಡವೊಂದು ಮಹಾರಾಷ್ಟ್ರಕ್ಕೆ ತೆರಳಿತ್ತು.

ಐಶಾರಾಮಿ ಬಸ್​ನಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು:ಇಬ್ಬರೂ ಐಷಾರಾಮಿ ಬಸ್​​ನಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಮುನ್ನೆಲೆಗೆ ಬರುತ್ತಿದೆ. ಸದ್ಯ ಇವರಿಬ್ಬರು ಎಷ್ಟು ದಿನಗಳಿಂದ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಗುಜರಾತ್​ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕುದುರೆ ಸವಾರಿ ತರಬೇತಿ ವೇಳೆ ಮಹಿಳಾ ಪೇದೆಯೂ ಸದ್ದಾಂ ಎಂಬ ಪೊಲೀಸ್ ಸ್ನೇಹಿತನ ಸಂಪರ್ಕಕ್ಕೆ ಬಂದಿದ್ದರು. ಅವರು ಕಳೆದ ಏಳೆಂಟು ತಿಂಗಳುಗಳಿಂದ ನಿರಂತರವಾಗಿ ಫೋನ್​ ಮೂಲಕ ಸಂಪರ್ಕದಲ್ಲಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಗೆಳೆತನ ಶುರುವಾಗಿತ್ತು. ನಂತರ ಅದು ಪ್ರೀತಿಗೆ ತಿರುಗಿದೆ. ಈಗ ಇವರಿಬ್ಬರೂ ವಿವಾಹ ಆಗಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.

ಲವ್ ಜಿಹಾದ್ ಶಂಕೆ : ಗುಜರಾತ್​ ಪೊಲೀಸರು ಇಬ್ಬರನ್ನು ಮಹಾರಾಷ್ಟ್ರದಲ್ಲಿ ಸೆರೆ ಹಿಡಿದಿದ್ದಾರೆ. ಇಬ್ಬರ ನಡುವಣ ಸಂಬಂಧದ ಬಗ್ಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಮಹಿಳಾ ಪೇದೆಯ ಸಂಬಂಧಿಕರು ಪೊಲೀಸ​ರ ಎದುರು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಗಳ ಈ ಸಂಬಂಧದ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪಾಟ್ನಾದಲ್ಲಿ ಮೊಬೈಲ್ ಟವರ್ ಕಳವು.. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.