ETV Bharat / bharat

ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್ - ಮಾರುತಿ ಕಂಪನಿಯ ಎರ್ಟಿಗಾ

100ಕ್ಕೂ ಅಧಿಕ ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ನಂತರ ಅವುಗಳನ್ನು ಮಾರಾಟ ಮಾಡುತ್ತಿದ್ದ ವಂಚಕರನ್ನು ವಡೋದರಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕಾರು
ಕಾರು
author img

By

Published : Mar 10, 2023, 5:51 PM IST

ವಡೋದರಾ ( ಗುಜರಾತ್​ ) : ಬಾಡಿಗೆಗೆ ವಾಹನಗಳನ್ನು ತೆಗೆದುಕೊಂಡು ನಂತರ ಆ ವಾಹನಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ವಡೋದರಾದಲ್ಲಿ ಬೆಳಕಿಗೆ ಬಂದಿದೆ. 100ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ವಂಚಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಡೋದರಾ ಪೊಲೀಸ್ ಕಮಿಷನರ್ ಡಾ ಶಂಶೇರ್ ಸಿಂಗ್, ಈ ಬಗ್ಗೆ ಪಾಣಿಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಮನೀಶ್ ಮತ್ತು ದೀಪಕ್ ರೈಯಾನಿ ಹೆಸರು ಸೇರಿತ್ತು. ಈ ಇಬ್ಬರೂ ಆರೋಪಿಗಳು 120 ಮಂದಿಯಿಂದ ಕಾರುಗಳನ್ನು ಪಡೆದಿದ್ದರು.

ಇದರಲ್ಲಿ ಬಹುತೇಕ ಕುಟುಂಬಗಳು ಸಾಲ ಪಡೆದು ವಾಹನ ಖರೀದಿಸಿದ್ದಾರೆ. ಕೆಲವರ ಇಎಂಐ ಕೂಡ ಪೂರ್ಣಗೊಂಡಿಲ್ಲ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆಯೂ ನಡೆಯುತ್ತಿದೆ. ಅವರು ಮೊದಲ ಎರಡು ತಿಂಗಳ ಮೊತ್ತವನ್ನು ಪಾವತಿಸುತ್ತಿದ್ದರು. ಇದರಿಂದ ಹೆಚ್ಚು ಹೆಚ್ಚು ಜನರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈಗ ಸ್ವೀಕರಿಸಿದ ಕಾರನ್ನು ನ್ಯಾಯಾಲಯದ ಅನುಮತಿ ಪಡೆದು ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಇದುವರೆಗೆ 84ಕ್ಕೂ ಹೆಚ್ಚು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೂರತ್, ಮೆಹ್ಸಾನಾ, ಮಹಾರಾಷ್ಟ್ರ-ನಡುಂಬರ್ ಮತ್ತು ಧುಲಿಯಾ ಮುಂತಾದ ನಗರಗಳಲ್ಲಿ ಅಡಮಾನಗಳನ್ನು ಇರಿಸಲಾಗಿತ್ತು. ಪೊಲೀಸರು ಎಲ್ಲ ಕಡೆ ಶೋಧ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಎಂದರೆ ಹೆಚ್ಚಿನ ಕಾರುಗಳು ಹೊಸದಾಗಿವೆ. ಯಾವುದೇ ಕಾರಿಗೂ ಹಾನಿಯಾಗಿಲ್ಲ. ವಡೋದರಾ ಅಪರಾಧದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಮಾರು 8 ಕೋಟಿ ಮೌಲ್ಯದ ಕಾರನ್ನು ಕಳ್ಳತನದಿಂದ ವಶಪಡಿಸಿಕೊಳ್ಳಲಾಗಿದೆ. ಕಾರು ವಶಪಡಿಸಿಕೊಂಡ ತಕ್ಷಣವೇ ಮಾಲೀಕರನ್ನು ಸಂಪರ್ಕಿಸಲಾಗುತ್ತಿದೆ. ಆರೋಪಿಗಳ 9 ದಿನಗಳ ರಿಮಾಂಡ್ ಅವಧಿಯಲ್ಲಿ 84 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ವೆಚ್ಚ 5.53 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈ ಇಬ್ಬರೂ ಪ್ರಮುಖ ಆರೋಪಿಗಳು ಎರಡು ದಿನಗಳ ಕಾಲ ರಿಮಾಂಡ್‌ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು 9 ದಿನಗಳ ರಿಮಾಂಡ್​ಗೆ ತೆಗೆದುಕೊಂಡ ಪೊಲೀಸರು: ವಡೋದರದ ಪಾಣಿಗಟ್ ಪೊಲೀಸ್ ಠಾಣೆಯಲ್ಲಿ 31 ಡಿಸೆಂಬರ್ 2022 ರಂದು ದಾಖಲಾದ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ತನಿಖೆಯ ಸಮಯದಲ್ಲಿ ಸಿಟಿ ಕ್ರೈಂ ಬ್ರಾಂಚ್ ಬಂಧಿಸಿದೆ. ಬಾಡಿಗೆಗೆ ವಾಹನಗಳನ್ನು ಮಾರಾಟ ಮಾಡಿದ ಅಪರಾಧದಲ್ಲಿ ಭಾಗಿಯಾಗಿರುವ ಸೂರತ್‌ನ ದೀಪಕ್ ರೈಯಾನಿ ಮತ್ತು ವಡೋದರದ ಮನೀಶ್ ಹರ್ಸೋಯಾ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿ 9 ದಿನಗಳ ರಿಮಾಂಡ್‌ಗೆ ತೆಗೆದುಕೊಂಡಿದ್ದಾರೆ.

ನಗರದ ಸುಮಾರು 120 ನಾಗರಿಕರನ್ನು ವಂಚಿಸಿ, ನಾಲ್ಕು ಚಕ್ರದ ವಾಹನಗಳನ್ನು ಮಾಸಿಕ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಬಾಡಿಗೆ ಪಡೆದು ಓಡಾಡುತ್ತಿದ್ದ ಇವರು ವಾಹನಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ವಡೋದರಾ ನಗರದ ಬಹುತೇಕ ನಾಗರಿಕರು ಮಧ್ಯಮ ವರ್ಗದವರಾಗಿದ್ದು, ಅವರು ಸಾಲದ ಮೇಲೆ ಕಾರನ್ನು ಖರೀದಿಸಿದ್ದರು. ಆರಂಭದಲ್ಲಿ ಆತ್ಮವಿಶ್ವಾಸ ತುಂಬಲು ಬಾಡಿಗೆಯ ಕಂತುಗಳನ್ನು ನೀಡಲಾಗುತ್ತಿತ್ತು. ಇದಾದ ಬಳಿಕ ಅದನ್ನು ಕಟ್ಟುತ್ತಿದ್ದ ಮಾಲೀಕರ ಸ್ಥಿತಿ ಹದಗೆಟ್ಟಿದೆ.

'ಕ್ರೈಂ ಬ್ರಾಂಚ್ ಸಂಪೂರ್ಣ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ನಂತರ 120 ವಾಹನಗಳಲ್ಲಿ 90 ವಾಹನಗಳನ್ನು ವಶಪಡಿಸಿಕೊಂಡಿದೆ ಮತ್ತು ಇಂದು ಆ ಎಲ್ಲ ವಾಹನಗಳನ್ನು ಅವುಗಳ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳು ವಂಚನೆ ಮಾಡಿ ಆಸ್ತಿ ಸಂಪಾದಿಸಿದ್ದರೆ ಅವುಗಳನ್ನೂ ಜಪ್ತಿ ಮಾಡಲಾಗುವುದು. ಜನರು ಅಂತಹ ದುರಾಸೆಗೆ ಒಳಗಾಗಬಾರದು. ಉಳಿದ 30 ವಾಹನಗಳನ್ನು ಮರು ಪಡೆಯಲು ತನಿಖೆ ನಡೆಯುತ್ತಿದೆ ಮತ್ತು ಅವುಗಳನ್ನು ಶೀಘ್ರವಾಗಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆದಿದೆ' ಎಂದು ಪೊಲೀಸ್​ ಕಮಿಷನರ್​​ ಡಾ ಶಂಶೇರ್ ಸಿಂಗ್ ಅವರು ಹೇಳಿದ್ದಾರೆ.

ಅಡಮಾನ ಇಟ್ಟವರಿಂದ ಹಣ ಸುಲಿಗೆ : ಈ ಇಬ್ಬರೂ ಆರೋಪಿಗಳು ಅಪಾರ ಪ್ರಮಾಣದ ಲಾಭ ಪಡೆಯಲು ಒತ್ತೆ ಇಟ್ಟಿದ್ದ ಕಾರುಗಳನ್ನು ಅಡಮಾನ ಇಟ್ಟವರಿಂದ ಹಣ ಸುಲಿಗೆ ಮಾಡಿದ್ದರು. ಸಿಟಿ ಕ್ರೈಂ ಬ್ರಾಂಚ್ ಪ್ರಸ್ತುತ 84 ವಾಹನಗಳನ್ನು ವಶಪಡಿಸಿಕೊಂಡಿದೆ. ಇದರ ಒಟ್ಟು ವೆಚ್ಚ 5.53 ರೂ. ಕೋಟಿಗೂ ಅಧಿಕವಾಗಿದೆ. ಈ ನಾಲ್ಕು ಚಕ್ರದ ವಾಹನಗಳಲ್ಲಿ ಮಾರುತಿ ಕಂಪನಿಯ ಎರ್ಟಿಗಾ, ಸ್ವಿಫ್ಟ್, ಬಲೆನೊ, ಇಕ್ಕೊ, ಬ್ರೀಝಾ, ವ್ಯಾಗನಾರ್ಸ್ ಪ್ರೆಸ್ಸೊ ಮತ್ತು ಹ್ಯುಂಡೈ ಕಂಪನಿಯ ಐ20, ಐ10, ವೆನ್ಯೂ ಮತ್ತು ಟೊಯೊಟಾ ಕಂಪನಿಯ ಇನೋವಾ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ : ಬೈಕ್‌ ನಿಲ್ಲಿಸಿ ಅಜ್ಜಿಯ ಸರ ಎಳೆದ ಕಿಡಿಗೇಡಿ; ಕೈಯಲ್ಲಿದ್ದ ಬ್ಯಾಗ್‌ನಿಂದ ಹೊಡೆದು ಓಡಿಸಿದ 10 ವರ್ಷದ ಬಾಲಕಿ!- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.