ನವದೆಹಲಿ : ಕೋವಿಡ್-19 ವಿರುದ್ಧ ಭಾರತವು 3ನೇ ಮತ್ತು ಅತೀ ದೊಡ್ಡ ಹಂತದ ವ್ಯಾಕ್ಸಿನೇಷನ್ ಡ್ರೈವ್‌ನ ಪ್ರಾರಂಭಿಸಲು ಸಜ್ಜಾಗಿದೆ. 45 ರಿಂದ 65 ವರ್ಷ ಮೇಲ್ಪಟ್ಟ ಸುಮಾರು 27 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ.
ಈಗಾಗಲೇ ಕೇಂದ್ರ ಸರ್ಕಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದೆ. ಈ ಎರಡು ಲಸಿಕೆಗಳನ್ನು ಜನರಿಗೆ ನೀಡುವ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಈವರೆಗೆ ಕೋವಿಡ್ ವ್ಯಾಕ್ಸಿನೇಷನ್ ಪಡೆಯುವ ಜನರಲ್ಲಿ ಶೇ.70ರಷ್ಟು ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಂತೆ ಸುಮಾರು 1,42,42,547 ಪ್ರಮಾಣದ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆಯಲು ಮೂರು ವಿಧಾನ : ಈ ಕೋವಿಡ್ ಲಸಿಕೆ ಪಡೆಯಲು ಬಯಸುವ ಜನರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಅರ್ಹ ಫಲಾನುಭವಿಗಳ ನೋಂದಣಿಗೆ ಸರ್ಕಾರವು ಮೂರು ವಿಧಾನಗಳನ್ನು ಒದಗಿಸಿದೆ. ಆನ್‌ಲೈನ್, ಆನ್‌ಸೈಟ್ ಮತ್ತು ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ನೋಂದಣಿ ಮಾಡಿಕೊಳ್ಳಬಹುದು.
ಆರೋಗ್ಯ ಸೇತು ಆ್ಯಪ್ನಲ್ಲಿ ನೋಂದಣಿಗೆ ಅವಕಾಶ : ಫಲಾನುಭವಿಗಳು ಕೋ-ವಿನ್ 2.0 ಪೋರ್ಟಲ್‌ನ ಡೌನ್‌ಲೋಡ್ ಮಾಡುವ ಮೂಲಕ ಮತ್ತು ಆರೋಗ್ಯ ಸೇತು ಮುಂತಾದ ಇತರ ಐಟಿ ಅಪ್ಲಿಕೇಶನ್‌ಗಳ ಮೂಲಕ ಮುಂಚಿತವಾಗಿ ಸ್ವಯಂ-ನೋಂದಣಿ ಮಾಡಲು ಸಾಧ್ಯವಿದೆ. ಅರ್ಹ ಫಲಾನುಭವಿಗಳು ಇಂದಿನಿಂದ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
ನಿಗದಿತ ದಿನಾಂಕದಂದು ಲಸಿಕೆ ಪಡೆಯಬೇಕು : ಅರ್ಹ ಫಲಾನುಭವಿಗಳು ಕೋ-ವಿನ್ 2.0 ಪೋರ್ಟ್ಲ್ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ಕೋವಿಡ್ ವ್ಯಾಕ್ಸಿನ್ ಲಭ್ಯವಿರುವ ಸರ್ಕಾರಿ ಮತ್ತು ಖಾಸಗಿ ಕೇಂದ್ರಗಳ (ಸಿವಿಸಿ) ಮಾಹಿತಿ, ಕೋವಿಡ್ ಲಸಿಕೆ ಪಡೆಯುವ ದಿನಾಂಕ ಮತ್ತು ಸ್ಥಳಗಳ ಕುರಿತಾದ ಮಾಹಿತಿ ಬರುತ್ತದೆ. ಆಗ ತಮಗೆ ಹತ್ತಿರದಲ್ಲಿರುವ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ವ್ಯಾಕ್ಸಿನೇಷನ್ ಪಡೆಯಬಹುದು.
ಒಬ್ಬ ವ್ಯಕ್ತಿಯು ಒಂದೇ ಮೊಬೈಲ್ ಸಂಖ್ಯೆಯೊಂದಿಗೆ ನಾಲ್ಕು ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, ಫಲಾನುಭವಿಗಳು ಪ್ರತ್ಯೇಕವಾಗಿ ಗುರುತಿನ ದಾಖಲೆಗಳನ್ನು ತಯಾರಿಸ ಬೇಕಾಗುತ್ತದೆ.
ಇ-ನೋಂದಣಿಗೆ 7 ಫೋಟೋ ಗುರುತಿನ ದಾಖಲೆಗಳ ಪಟ್ಟಿ: ಫಲಾನುಭವಿಗಳು ಆನ್ಲೈನ್ನಲ್ಲಿ ನಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಕೊಲ ದಾಖಲೆಗಳನ್ನು ನೀಡಬೇಕು. ಆಧಾರ್ ಕಾರ್ಡ್, ಗುರುತಿನ ಚೀಟಿ (ಇಪಿಐಸಿ), ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್ ಮತ್ತು ಪಿಂಚಣಿ ದಾಖಲೆಗಳನ್ನು ಕೊಡಬೇಕಾಗುತ್ತದೆ. ಈಗಾಗಲೇ 10 ಸಾವಿರ ಸರ್ಕಾರಿ ಆಸ್ಪತ್ರೆ ಮತ್ತು 20 ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.