ETV Bharat / bharat

39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ವ್ಯಾಕ್ಸಿನ್: ಎಫ್​ಐಆರ್ ದಾಖಲು

ಶಾಲೆಯಲ್ಲಿ ಮೆಗಾ ವ್ಯಾಕ್ಸಿನೇಶನ್ ಮೇಳ- ಒಂದೇ ಸಿರಿಂಜ್​ನಲ್ಲಿ 39 ಮಕ್ಕಳಿಗೆ ವ್ಯಾಕ್ಸಿನ್- ಆರೋಪಿ ಜಿತೇಂದ್ರ ಅಹಿರ್ವಾರ್ ವಿರುದ್ಧ ಎಫ್​ಐಆರ್

Vaccination of 39 children with single syringe: FIR registered
39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ವ್ಯಾಕ್ಸಿನ್: ಎಫ್​ಐಆರ್ ದಾಖಲು
author img

By

Published : Jul 28, 2022, 4:05 PM IST

ಸಾಗರ್ (ಮಧ್ಯ ಪ್ರದೇಶ): 39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ಕೋವಿಡ್​-19 ವ್ಯಾಕ್ಸಿನ್ ನೀಡಿರುವ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದೆ. ಇಂಜೆಕ್ಷನ್ ಮಾಡುತ್ತಿರುವವರು ಎಲ್ಲ ಮಕ್ಕಳಿಗೂ ಒಂದೇ ಸಿರಿಂಜ್ ಉಪಯೋಗಿಸುತ್ತಿರುವುದನ್ನು ಕೆಲ ಮಕ್ಕಳ ಪಾಲಕರು ಗಮನಿಸಿ ಆಕ್ಷೇಪವೆತ್ತಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಜೈನ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ ಮೆಗಾ ವ್ಯಾಕ್ಸಿನೇಶನ್ ಮೇಳದಲ್ಲಿ ಈ ಅಚಾತುರ್ಯ ನಡೆದಿದ್ದು, ವ್ಯಾಕ್ಸಿನ್ ನೀಡಿಕೆ ಸಂಸ್ಥೆಯ ಜಿತೇಂದ್ರ ಅಹಿರ್ವಾರ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. 15 ವರ್ಷ ಮೇಲ್ಪಟ್ಟ 9 ರಿಂದ 12 ವರ್ಷದೊಳಗಿನ 39 ಮಕ್ಕಳಿಗೆ ಒಂದೇ ಸಿರಿಂಜ್​ನಿಂದ ಇಂಜೆಕ್ಷನ್ ಮಾಡಲಾಗಿದೆ.

​​ಪಾಲಕರ ಪ್ರತಿಭಟನೆಯ ನಂತರ ಸಾಗರ್​ ಇನ್​-ಚಾರ್ಜ್​ ಕಲೆಕ್ಟರ್ ಕ್ಷಿತಿಜ್ ಸಿಂಘಾಲ್, ಸ್ಥಳಕ್ಕೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ ಕೆ ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ. ಒಂದೇ ಸಿರಿಂಜ್​ನಿಂದ ವ್ಯಾಕ್ಸಿನ್ ನೀಡಿದ ಆರೋಪಿ ಅಹಿರ್ವಾರ್ ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿಯಲ್ಲಿ ಅಹಿರ್ವಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಎಮ್‌ಎಚ್‌ಒ ವರದಿಯ ಆಧಾರದ ಮೇಲೆ ಜಿಲ್ಲಾ ಲಸಿಕಾ ಅಧಿಕಾರಿ ಡಾ. ರಾಕೇಶ್ ರೋಷನ್ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ವಿಭಾಗೀಯ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿಯಲ್ಲಿ ಅಹಿರ್ವಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ (ಉದ್ವೇಗ ಅಥವಾ ನಿರ್ಲಕ್ಷ್ಯದ ಕ್ರಿಯೆ ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ) ಸಿಎಂಎಚ್‌ಒ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ವಿಭಾಗೀಯ ಆಯುಕ್ತರು ಇಲಾಖಾ ತನಿಖೆ ಮತ್ತು ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಂಘಾಲ್ ಹೇಳಿದರು.

39ರ ಪೈಕಿ 19 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ವರದಿ ನಾರ್ಮಲ್ ಬಂದಿವೆ. ಉಳಿದ ಮಕ್ಕಳ ಆರೋಗ್ಯ ತಪಾಸಣೆ ವರದಿಗಾಗಿ ಕಾಯಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.