ETV Bharat / bharat

ಪಕ್ಷದ ಕಚೇರಿಯಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್: ವಿವಾದ ಸೃಷ್ಟಿಸಿದ ವೈಎಸ್​ಆರ್​ಸಿ​ಪಿ - ವ್ಯಾಕ್ಸಿನೇಷನ್

ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್​ಆರ್​ಸಿ​ಪಿ ತನ್ನ ಕಚೇರಿಯಲ್ಲಿಯೇ ವ್ಯಾಕ್ಸಿನೇಷನ್​ ಮಾಡುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

office
office
author img

By

Published : May 10, 2021, 4:06 PM IST

ವಿಜಯವಾಡ( ಆಂಧ್ರಪ್ರದೇಶ): ಕೃಷ್ಣ ಜಿಲ್ಲೆಯ ಕಾಂಕಿಪಾಡು, ವನಿನಗರದ ವೈಎಸ್​ಆರ್​ಸಿ​ಪಿ ಕಚೇರಿಯಲ್ಲಿ ನಡೆಸಿದ ವ್ಯಾಕ್ಸಿನೇಷನ್ ಶಿಬಿರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ವ್ಯಾಕ್ಸಿನೇಷನ್ ಕ್ಯಾಂಪ್​ನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು , ಘಟನೆ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ.

ಆಡಳಿತ ಪಕ್ಷದ ಮುಖಂಡರು ಮತ್ತು ಅವರ ಕುಟುಂಬ ಸದಸ್ಯರು ಶನಿವಾರ ಬೆಳಿಗ್ಗೆ ವಾಹನಗಳಲ್ಲಿ ಕಂಕಿಪಾಡ, ಪುಣಡಿಪಾಡು, ನೆಪ್ಪಳ್ಳಿ, ತೆನ್ನೆರು, ಉಪ್ಪಲೂರು, ಇಡಪುಗುಲ್ಲು, ಗೋದಾವರು, ಕುಂದೇರು ಮತ್ತು ಪ್ರೊಡೂತೂರ್ ಗ್ರಾಮಗಳಿಂದ ವೈಎಸ್​ಆರ್​ಸಿ​ಪಿ ಕಚೇರಿಗೆ ಬಂದಿದ್ದರು. ಕೊರೊನಾ ಲಸಿಕೆ ನೀಡುವ ವಿಷಯವನ್ನು ರಹಸ್ಯವಾಗಿರಿಸಿದ್ದರಿಂದ ಅವರು ಏಕೆ ಬರುತ್ತಿದ್ದಾರೆಂದು ಇತರರಿಗೆ ತಿಳಿದಿರಲಿಲ್ಲ. ಪಕ್ಷದ ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ ಮೊದಲು ವ್ಯಾಕ್ಸಿನ್​ ನೀಡಲಾಯಿತು. ಕಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಕೊನೆಯಲ್ಲಿ ಲಸಿಕೆ ಹಾಕಲಾಯಿತು. ಇನ್ನು ಈ ಘಟನೆಯ ಬಗ್ಗೆ ಆದಾಯ ಇಲಾಖೆ ಮತ್ತು, ವೈದ್ಯಕೀಯ ಇಲಾಖಾ ಅಧಿಕಾರಿಗಳು ಪ್ರಶ್ನಿಸಿದಾಗ ಅವರು ಈ ವ್ಯಾಕ್ಸಿನೇಷನ್​ ಕ್ಯಾಂಪ್​ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.