ETV Bharat / bharat

ಸಿಬಿಐನಲ್ಲಿ 1,673 ಹುದ್ದೆಗಳು ಖಾಲಿ: ಲೋಕಸಭೆಗೆ ಕೇಂದ್ರ ಸರ್ಕಾರದ ಮಾಹಿತಿ

ಸಿಬಿಐನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 1673. ವಿವಿಧ ವರ್ಗಗಳಲ್ಲಿ ಮಂಜೂರಾದ 128 ಹೆಚ್ಚುವರಿ ಹುದ್ದೆಗಳ ಭರ್ತಿಗೆ ಜೂನ್ 29, 2022 ರಂದು ಆದೇಶ ಹೊರಡಿಸಲಾಗಿದೆ. 7,295 ಹುದ್ದೆಗಳು ಭರ್ತಿಯಾಗಿವೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸಿಬಿಐ
ಸಿಬಿಐ
author img

By

Published : Dec 14, 2022, 6:30 PM IST

ನವ ದೆಹಲಿ: ಕೇಂದ್ರ ತನಿಖಾ ಸಂಸ್ಥೆಯಲ್ಲಿ(ಸಿಬಿಐ) 1,673 ಹುದ್ದೆಗಳು ಖಾಲಿ ಇವೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಬುಧವಾರ ಮಾಹಿತಿ ನೀಡಿದೆ. ನವೆಂಬರ್​​ 30, 2022ರ ತನಕ 7,295 ಹುದ್ದೆ ಭರ್ತಿಯಾಗಿವೆ. ಖಾಲಿ ಹುದ್ದೆಗಳ ಸಂಖ್ಯೆ 1,673 ಇದ್ದು, ವಿವಿಧ ವರ್ಗಗಳಲ್ಲಿ ಮಂಜೂರಾದ 128 ಹೆಚ್ಚುವರಿ ಹುದ್ದೆಗಳ ಭರ್ತಿಗೆ ಜೂನ್ 29, 2022 ರಂದು ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇದನ್ನೂಓದಿ: 1,472 ಐಎಎಸ್, 864 ಐಪಿಎಸ್, 1,057 ಐಎಫ್​ಎಸ್​ ಹುದ್ದೆಗಳು ಖಾಲಿ: ಲೋಕಸಭೆಗೆ ಕೇಂದ್ರದ ಮಾಹಿತಿ

ಹುದ್ದೆಗಳು ಖಾಲಿಯಾಗುವುದು ಮತ್ತು ಅವುಗಳ ಭರ್ತಿ ನಿರಂತರ ಪ್ರಕ್ರಿಯೆಯಾಗಿದೆ. ಅಧಿಕಾರಿಗಳ ಸೇರ್ಪಡೆ, ಬಡ್ತಿ, ನಿವೃತ್ತಿ ಮತ್ತು ವಾಪಸಾತಿಗೆ ಅನುಗುಣವಾಗಿ ಸಂಖ್ಯೆಯು ಬದಲಾಗುತ್ತಲೇ ಇರುತ್ತದೆ. ಎಲ್ಲಾ ಶ್ರೇಣಿಯ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.