ನವದೆಹಲಿ: ಭಾರತ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದಕ್ಷಿಣ ಆಫ್ರಿಕಾದ ಗಾಂಬಿಯಾದಲ್ಲಿ ಮಕ್ಕಳು ಸಾವನ್ನಪ್ಪಿದ ಆರೋಪದ ಬಳಿಕ, ಉಜ್ಬೇಕಿಸ್ತಾನದಲ್ಲೂ ಇಂಥಹದ್ದೇ ಗಂಭೀರ ಆರೋಪ ಹೊರಿಸಲಾಗಿದೆ. ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನದಲ್ಲಿ ಭಾರತದಿಂದ ರಫ್ತು ಮಾಡಿಕೊಂಡ ಔಷಧ ಸೇವಿಸಿ 18 ಮಕ್ಕಳು ಅಸುನೀಗಿದ್ದಾರೆ ಎಂದು ಹೇಳಲಾಗ್ತಿದೆ. ಇದರ ವಿರುದ್ಧ ಅಲ್ಲಿನ ಸರ್ಕಾರ ತನಿಖೆಗೆ ಸೂಚಿಸಿದೆ.
ಭಾರತೀಯ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ. ಇದರಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಮೃತ ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮೊದಲು ಈ ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಬಾರಿ, 2.5- 5 ಎಂಎಲ್ ತೆಗೆದುಕೊಂಡಿದ್ದಾರೆ ಎಂದು ಅದು ಹೇಳಿದೆ.
ಈ ಔಷಧದಲ್ಲಿ ಮಾರಣಾಂತಿಕ ರಾಸಾಯನಿಕ ಕಾರಣದಿಂದಾಗಿ ಇದನ್ನು ಸೇವಿಸಿದ ಮಕ್ಕಳು ಉಸಿರಾಟದ ತೊಂದರೆಗೀಡಾಗಿದ್ದಾರೆ. ಔಷಧದಲ್ಲಿ ಮಕ್ಕಳಿಗೆ ಪ್ರಮಾಣಿಸಬಹುದಾದ ಅಂಶ ಮೀರಿದೆ ಎಂಬುದು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಆರೋಪಿಸಿದೆ. ಘಟನೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ಔಷಧ ತಯಾರಕ ಕಂಪನಿ ಈವರೆಗೂ ಪ್ರತಿಕ್ರಿಯಿಸಿಲ್ಲ.
ಓದಿ: ಅಮೆರಿಕದಲ್ಲಿ ಚೀನಾದಿಂದ ಬರುವವರಿಗೆ ಕೊರೊನಾ ನಿಯಮ ಪಾಲನೆ ಕಡ್ಡಾಯ: ವರದಿ