ನವದೆಹಲಿ: ಉತ್ತರಾಖಂಡನಲ್ಲಿ ಸಂಭವಿಸಿದ್ದ ನೀರ್ಗಲ್ಲು ಪ್ರವಾಹದಿಂದ 500 ಕಿ.ಮೀ ದೂರದಲ್ಲಿರುವ ದೆಹಲಿಯ ಮೇಲೆ ಪರಿಣಾಮ ಬೀರುತ್ತಿದೆ. ಪ್ರವಾಹವು ರಾಜಧಾನಿಯ ಸಾವಿರಾರು ನಿವಾಸಿಗಳಿಗೆ ನೀರು ಸರಬರಾಜನ್ನು ಕಡಿತಗೊಳಿಸಿದೆ.
ಫೆಬ್ರವರಿ 7ರಂದು ಉತ್ತರಾಖಂಡದಲ್ಲಿ ತೀವ್ರ ಪ್ರಮಾಣದ ಪ್ರವಾಹದ ಅಪಾಯ ಘೋಷಿಸಲಾಗಿದ್ದು, ಧೌಲಿಗಂಗಾ ನದಿಗೆ ಭಾರಿ ಹಿಮಪಾತವಾಗುತ್ತಿದೆ. ಉತ್ತರಾಖಂಡದ ಋಷಿಗಂಗಾ ಕಣಿವೆ ದೆಹಲಿಯ ಈಶಾನ್ಯಕ್ಕೆ 530 ಕಿ.ಮೀ ದೂರದಲ್ಲಿದೆ. ಈ ನದಿ ದೇಶದ ರಾಜಧಾನಿಗೆ ನೀರಿನ ಪ್ರಮುಖ ಮೂಲವಾಗಿದೆ. ಪ್ರವಾಹದ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಮತ್ತು ಅವಶೇಷಗಳಿವೆ. ಹೀಗಾಗಿ, ರಾಜಧಾನಿಯಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ. ಸಂಪೂರ್ಣ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆವಿಷ್ಕಾರಗಳಿಂದಲೇ ಹೆಸರುವಾಸಿಯಾದ ಆಂಧ್ರದ ‘ಹೈಟೆಕ್ ರಾಮು’
ಕೊಳಕು ನೀರಿನಿಂದಾಗಿ ನಗರದ ಎರಡು ಪ್ರಮುಖ ನೀರಿನ ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ನಿವಾಸಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸಬೇಕು. ಪ್ರವಾಹದಿಂದಾಗಿ ಕಣಿವೆಯ ಮೂಲಕ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿವೆ ಎಂದು ದೆಹಲಿ ಜಲಮಂಡಳಿಯ ಉಪಾಧ್ಯಕ್ಷ ರಾಘವ್ ಚಾಧಾ ಹೇಳಿದ್ದಾರೆ.
ದೆಹಲಿಗೆ ಶೇ 60ರಷ್ಟು ನೀರು ಸರಬರಾಜು ಯಮುನಾದಿಂದ ಮತ್ತು ಶೇ 34ರಷ್ಟು ಗಂಗೆಯಿಂದ ಬರುತ್ತದೆ. ಬೇಸಿಗೆಯಲ್ಲಿ ದೇಶದ ರಾಜಧಾನಿಯಲ್ಲಿ ತೀವ್ರ ನೀರಿನ ಕೊರತೆ ಉಂಟಾಗುತ್ತದೆ. ಪ್ರವಾಹದಿಂದ ಈಗಾಗಲೇ 53 ಜನರು ಸಾವನ್ನಪ್ಪಿದ್ದಾರೆ. ಇನ್ನೂ 150 ಮಂದಿಯ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ.