ETV Bharat / bharat

ಬೈಕ್ ಸವಾರನನ್ನು ಕೊಂದ ಹುಲಿ: ಟ್ರ್ಯಾಪ್ ಕ್ಯಾಮೆರಾ ಬಳಸಿ ಹುಲಿ ಸೆರೆಗೆ ಮುಂದಾದ ಸಿಬ್ಬಂದಿ

ಜುಲೈ 16 ರಂದು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಬಳಿ ಬೈಕ್ ಸವಾರನನ್ನು ಬೇಟೆಯಾಡಿದ ಹುಲಿಯ ಟ್ರ್ಯಾಪ್ ಕ್ಯಾಮೆರಾ ದೃಶ್ಯಗಳು ಇತ್ತೀಚೆಗೆ ಕಂಡುಬಂದಿವೆ.

ಉತ್ತರಾಖಂಡದಲ್ಲಿ ಬೈಕ್ ಸವಾರನನ್ನು ಕೊಂದ ಹುಲಿ
ಉತ್ತರಾಖಂಡದಲ್ಲಿ ಬೈಕ್ ಸವಾರನನ್ನು ಕೊಂದ ಹುಲಿ
author img

By

Published : Jul 28, 2022, 8:01 PM IST

ರಾಮನಗರ (ಉತ್ತರಾಖಂಡ) : ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಹೊರಭಾಗದಲ್ಲಿ ಹುಲಿಯು ಬೈಕ್ ಸವಾರನ ಮೇಲೆ ದಾಳಿ ಮಾಡಿದ ದೃಶ್ಯಗಳು ಹೊರಬಿದ್ದಿವೆ. ಜುಲೈ 16 ರಂದು ಸಂಭವಿಸಿದ ಅಪಘಾತದ ನಂತರ ಕಾರ್ಬೆಟ್ ಆಡಳಿತವು ಈಗ ಹುಲಿಯನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಅರಣ್ಯ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಧೀರಜ್ ಪಾಂಡೆ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಹುಲಿಯನ್ನು ಎರಡು ಮೂರು ಬಾರಿ ಪತ್ತೆಹಚ್ಚಲಾಗಿದೆ.

ಅದರ ನಿಖರವಾದ ಸ್ಥಾನವನ್ನು ನಾವು ಇನ್ನೂ ಕಂಡುಕೊಂಡಿಲ್ಲ.ಆದರೆ, ಮುಂಗಾರು ಮಳೆಯಿಂದಾಗಿ, ಅರಣ್ಯದ ಒಳಭಾಗವು ಶೋಧ ಕಾರ್ಯಾಚರಣೆಗೆ ಅಡೆತಡೆಗಳು ಎದುರಾಗಿವೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಟ್ರ್ಯಾಪ್ ಕ್ಯಾಮೆರಾ ಬಳಸಿ ಹುಲಿ ಸೆರೆಗೆ ಮುಂದಾದ ಸಿಬ್ಬಂದಿ

ಹುಲಿ ಪತ್ತೆಗೆ ಎರಡು ಡ್ರೋನ್‌ಗಳು ಮತ್ತು ಮೂರು ಆನೆಗಳ ಜೊತೆಗೆ ಎರಡು ತಂಡಗಳನ್ನು ರಚಿಸಿದ್ದೇವೆ. 30 ರಿಂದ 35 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸಹ ಅರಣ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ನಿವಾಸಿ ಅಫ್ಸರುಲ್ (25) ಸಾವಿನ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ರಾಮನಗರ ಅರಣ್ಯ ವಿಭಾಗದ ವ್ಯಾಪ್ತಿಯ ಕೋಸಿ ವ್ಯಾಪ್ತಿಯ ಮೋಹನ್ ಪ್ರದೇಶದ ಬಳಿ ಬೈಕ್‌ನಲ್ಲಿದ್ದ ಅಫ್ಸರುಲ್ ಮತ್ತು ಆತನ ಸ್ನೇಹಿತನ ಮೇಲೆ ಹುಲಿ ದಾಳಿ ನಡೆಸಿತ್ತು.

ಇದನ್ನೂ ಓದಿ : 'ರಾಷ್ಟ್ರಪತ್ನಿ' ಟೀಕೆ: ಅಧೀರ್ ರಂಜನ್​ ಚೌಧರಿಗೆ ಸಮನ್ಸ್ ನೀಡಿದ ಮಹಿಳಾ ಆಯೋಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.