ಫಿರೋಜಾಬಾದ್: ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಹೆಸರಿನಲ್ಲಿ ಸಚಿವರಿಗೆ ದುಬಾರಿ ಉಡುಗೊರೆ ನೀಡಲು ಸಂದೇಶ ರವಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕ್ಷಕನನ್ನು(Puducherry police detained Firozabad teacher) ಪುದುಚೇರಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆರೋಪಿಯನ್ನು ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ. ಫಿರೋಜಾಬಾದ್‌ನ ದಿಡಮೈ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈತ ಶಿಕ್ಷಕನಾಗಿದ್ದಾನೆ.
ಶಿಕ್ಷಕನ ಕುತಂತ್ರ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಸೈ ಸೌಂದರರಾಜನ್ ಅವರ ಪ್ರೊಫೈಲ್ ಚಿತ್ರದ ವಾಟ್ಸ್ಆ್ಯಪ್ನಿಂದ ಪುದುಚೇರಿಯ ಹಲವು ಸಚಿವರಿಗೆ ದುಬಾರಿ ಉಡುಗೊರೆ ನೀಡುವಂತೆ ಸಂದೇಶ ರವಾನಿಸಲಾಗಿದೆ. ಇದರಿಂದ ಸಚಿವರು ಗಲಿಬಿಲಿಗೊಂಡಿದ್ದಾರೆ. ಇದು ಹೌದೋ ಅಲ್ಲವೋ ಎಂಬ ಮಾಹಿತಿ ಕಲೆಹಾಕಿದ್ದಾರೆ.
ಬಳಿಕ ಇದು ಸುಳ್ಳು ಸಂದೇಶ ಎಂದು ತಿಳಿದು ಪುದುಚೇರಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಟ್ಸ್ಆ್ಯಪ್ ಸಂದೇಶ ರವಾನೆಯಾದ ಸಿಗ್ನಲ್ ಆಧರಿಸಿ ಪತ್ತೆ ಕಾರ್ಯ ನಡೆಸಿದ ಪೊಲೀಸರು ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ ವಂಚಕನನ್ನು ಬಂಧಿಸಿದ್ದಾರೆ. ಬಳಿಕ ಉತ್ತರಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಪುದುಚೇರಿಗೆ ಕರೆದೊಯ್ಯಲಾಗಿದೆ.
ಓದಿ: ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ..ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ