ETV Bharat / bharat

ಶಾಲಾ ಬಾಲಕಿಯೊಂದಿಗೆ ಓಡಿ ಹೋದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್! - ಶಾಲಾ ಬಾಲಕಿಯೊಂದಿಗೆ ಓಡಿ ಹೋದ ಪೊಲೀಸ್

ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಹೌದು, ಇದಕ್ಕೆ ಹೊಸ ನಿದರ್ಶನ ಉತ್ತರ ಪ್ರದೇಶದಲ್ಲಿ ಸಿಕ್ಕಿದೆ. ಆರಕ್ಷರರೊಬ್ಬರು ಇಂಥದ್ದೊಂದು ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಂದಿಗೆ ಪೊಲೀಸ್​ ಅಧಿಕಾರಿಯೊಬ್ಬ ಓಡಿ ಹೋಗಿರುವ ಘಟನೆ ಸಾರ್ವಜನಿಕರಲ್ಲಿ ಕಳವಳ ಉಂಟುಮಾಡಿದೆ.

Uttar Pradesh-sub-inspector-elopes-with-school-girl
ಶಾಲಾ ಬಾಲಕಿಯೊಂದಿಗೆ ಓಡಿ ಹೋದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್
author img

By

Published : Dec 28, 2022, 3:25 PM IST

ಲಖಿಂಪುರ ಖೇರಿ (ಉತ್ತರ ಪ್ರದೇಶ): ಪೊಲೀಸ್ ಸಬ್ ಇನ್ಸ್‌ಪೆಕ್ಟರ್​​ವೊಬ್ಬರು ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ತಂದೆ ರಾಜಧಾನಿ ಲಖನೌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜೋಗೇಂದ್ರ ಸಿಂಗ್ ಎಂಬುವವರೇ ಬಾಲಕಿಯೊಂದಿಗೆ ಪಲಾಯನ ಮಾಡಿರುವ ಎಸ್​ಐ. ಈ ಘಟನೆಯು ಬಾಲಕಿಯ ಕುಟುಂಬಸ್ಥರು, ಸಂಬಂಧಿಕರೂ ಸೇರಿದಂತೆ ಇಡೀ ಪ್ರದೇಶದಲ್ಲಿ ಆಘಾತ ಉಂಟುಮಾಡಿದೆ. ಇಲ್ಲಿನ ಪಲಿಯಾ ಚೌಕಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಗೇಂದ್ರ ಸಿಂಗ್ ಎರಡು ದಿನಗಳ ಹಿಂದೆ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಜೋಗೇಂದ್ರ ಸಿಂಗ್​ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಈ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಎಸ್​ಐ ಆಗಾಗ್ಗೆ ಆಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಮಾನವ ಕಳ್ಳಸಾಗಣೆ ಪ್ರಕರಣ: ಐದು ಸಾವಿರಕ್ಕೆ ಮಗು ಮಾರಾಟದ ಶಂಕೆ.. ತನಿಖೆ ಚುರುಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.