ಪ್ರಯಾಗರಾಜ್( ಉತ್ತರಪ್ರದೇಶ): ಇತ್ತೀಚೆಗೆ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಕೇಳಿ ಬಂದಿದೆ. ನಗರದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಕೆಲ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅದು ತನ್ನ ಸ್ನೇಹಿತನ ಮಾತು ಕೇಳಿ.. ಹೌದು, ಇಲ್ಲಿನ ನಿವಾಸಿಗೆ ಮದುವೆಯಾಗಿದೆ. ತನ್ನ ಪತ್ನಿಯೊಂದಿಗೆ ನೂರೊಂದು ಕನಸು ಹೊತ್ತು ಜೀವನ ಸಾಗಿಸುವ ಆಸೆ ಕಂಡಿದ್ದ. ಮದುವೆ ಕಾರ್ಯಕ್ರಮ ಮುಗಿದ ಮೇಲೆ ಯುವಕ ಮೊದಲನೇ ರಾತ್ರಿಗೆ ಸಜ್ಜಾಗಿದ್ದಾನೆ. ಆದರೆ, ಈ ವೇಳೆ ಆಗಿದ್ದೇ ಬೇರೆ..
ಆ ನವವಿವಾಹಿತ ತನ್ನ ಸ್ನೇಹಿತರ ಒತ್ತಾಯದ ಮೇರೆಗೆ ವಯಾಗ್ರವನ್ನು ಬಳಸಿದ್ದಾನೆ. ವಧುವಿನ ಕೋಣೆಗೆ ಹೋದ ಆ ಯುವಕ ಆರೋಗ್ಯದಲ್ಲಿ ಬದಲಾವಣೆಗಳು ಕಂಡು ಬಂದಿವೆ. ಮೊದಲು ಬಾರಿಗೆ ಟ್ಯಾಬ್ಲೆಟ್ ತೆಗೆದುಕೊಂಡಿದ್ದಕ್ಕೆ ಈ ಸಮಸ್ಯೆ ಕಾಡಿರಬಹುದು ಎಂದು ತಿಳಿದಿದ್ದ. ಆದರೆ ಸಮಯ ಕಳೆದಂತೆ ಯುವಕನ ದೇಹದಲ್ಲಿ ಏರುಪೇರಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಓದಿ: ಹಲೋ ಎಕ್ಸ್ಕ್ಯೂಸ್ ಮಿ.. ನೀವು ವಯಾಗ್ರ ತೆಗೆದುಕೊಳ್ಳುತ್ತಿದ್ರೆ ಈ ಸುದ್ದಿ ನಿಮಗಾಗಿ!
ಯುವಕ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ವಾಸ್ತವವಾಗಿ ಯುವಕ ದೊಡ್ಡ ಪ್ರಮಾಣದಲ್ಲಿ ವಯಾಗ್ರವನ್ನು ತೆಗೆದುಕೊಂಡಿದ್ದಕ್ಕೆ ಸಮಸ್ಯೆ ತೀವ್ರಗೊಂಡಿತ್ತು. ವೈದ್ಯರು ನವ ವರನನ್ನು ಉಳಿಸಲು ಎರಡು ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾಯಿತು. ಈಗ ಆ ಯುವಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ವಯಾಗ್ರ ಔಷಧಗಳ ಬಳಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಜನರು ಯಾವುದೇ ತಜ್ಞರ ಸಲಹೆಯಿಲ್ಲದೇ ಇಂತಹ ಔಷಧಿಗಳನ್ನು ಬಳಸುವುದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ. ಹೀಗಾಗಿ ವೈದ್ಯರ ಸಲಹೆ ಸೂಕ್ತ.