ETV Bharat / bharat

ಯುಪಿಯಲ್ಲಿ ಲವ್ ಜಿಹಾದ್ ಆರೋಪ.. ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತೆ - love jihad case

ಆಗ್ರಾದಲ್ಲಿ ಲವ್ ಜಿಹಾದ್ ಪ್ರಕರಣ ಮುನ್ನೆಲೆಗೆ ಬಂದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ನ್ಯಾಯಾಲಯವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : May 16, 2023, 2:13 PM IST

ಆಗ್ರಾ(ಉತ್ತರ ಪ್ರದೇಶ): ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಹೆಸರು ಬದಲಿಸಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ನನ್ನ ಪತಿ ಲವ್ ಜಿಹಾದ್ ಮಿಷನ್​​ನಲ್ಲಿದ್ದಾರೆ' ಎಂದು ಆಗ್ರಾದ ಸಂತ್ರಸ್ತ ಹಿಂದೂ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಅವರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ರಾಕಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಮೂಲಕ ಅವರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ವಿವರ: ಸಂತ್ರಸ್ತೆಯ ಪ್ರಕಾರ "2018ರಲ್ಲಿ ಆಕೆಯ ಮೊಬೈಲ್‌ಗೆ ಮಿಸ್ಡ್ ಕಾಲ್ ಬಂದಿತ್ತು. ಬಳಿಕ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮಾತನಾಡಿ ತಾನು ಹಿಂದೂ ಯುವಕ. ಹೆಸರು ರಾಜ ಎಂದು ಪರಿಚಯಿಸಿಕೊಂಡಿದ್ದ. ಅಪರಿಚಿತ ನಂಬರ್​ನಿಂದ ಕರೆ ಬಂದ ಕಾರಣ ಆಕೆ ಕಾಲ್​ ಕಟ್​ ಮಾಡಿದ್ದಳು. ಬಳಿಕ ಆತ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಲು ಆರಂಭಿಸಿದ್ದ. ಆರೋಪಿ ತನ್ನನ್ನು ನಿನ್ನ ಕುಟುಂಬದ ಪರಿಚಯಸ್ಥ ಎಂದು ಹೇಳಿಕೊಂಡಿದ್ದು, ಸ್ನೇಹ ಮಾಡುವಂತೆ ಕೇಳಿಕೊಂಡಿದ್ದ. ಒಂದು ಭೇಟಿಯ ನಂತರ ಇಬ್ಬರೂ ಸ್ನೇಹಿತರಾದರು. ಬಳಿಕ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಈ ನಡುವೆ ರಾಜ ಮೋಸದಿಂದ ಆಕೆಯ ಅಶ್ಲೀಲ ವಿಡಿಯೋ ಮಾಡಿಕೊಂಡಿದ್ದ" ಎಂದು ಆರೋಪಿಸಲಾಗಿದೆ.

ಬಳಿಕ ವಿಡಿಯೋ ಹೆಸರಿನಲ್ಲಿ ಬೆದರಿಸಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದ. ನನ್ನ ಮಗ ರಾಜನ ಬಳಿ ನಿನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ರಾಜಾ ತಂದೆ ಮೊಹಮ್ಮದ್ ರಿಯಾಜ್ ಕೂಡ ಬೆದರಿಸಿದ್ದರು. ಸಂತ್ರಸ್ತೆ ಕುಟುಂಬದ ಗೌರವಕ್ಕಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು.

ವಿವಾಹದ ಬಳಿಕ ರಾಜ ಮೊದಲ ಬಾರಿಗೆ ತನ್ನ ಮನೆಗೆ ಕರೆದೊಯ್ದಿದ್ದ. ಅವರ ಮನೆ ಬಲುಗಂಜ್‌ನ ದರ್ಗೈಯಾ ಪ್ರದೇಶದಲ್ಲಿತ್ತು. ಇದನ್ನು ನೋಡಿ ಆಕೆ ಬೆಚ್ಚಿಬಿದ್ದಿದ್ದಳು. ಮನೆಗೆ ತಲುಪಿದಾಗ ರಾಜನ ತಾಯಿ ಬಳಿಅವನ ಧರ್ಮದ ಬಗ್ಗೆ ಕೇಳಿದಳು. ಆಗ ರಾಜ ತಾನು ಮುಸ್ಲಿಂ ಧರ್ಮಕ್ಕೆ ಸೇರಿದವನೆಂದು ಹೇಳಿದ್ದ. ಆತನ ಹೆಸರು ಮೊಯೀನ್ ಖಾನ್ ಎಂದು ತಿಳಿಸಿದ್ದ.

ಬಲವಂತವಾಗಿ ಮತಾಂತರ: ಆತನ ನಿಜ ಬಣ್ಣ ಬಹಿರಂಗವಾದ ನಂತರ ರಾಜ ಹಾಗೂ ಅವನ ಕುಟುಂಬ ನನ್ನನ್ನು ಒತ್ತೆಯಾಳಾಗಿ ಮಾಡಿಕೊಂಡಿತು. ರಾಜನ ಮನೆಯವರು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ನನ್ನ ಧರ್ಮದ ಬಗ್ಗೆ ಅಪಹಾಸ್ಯ ಮಾಡಲಾಗಿತ್ತು. ಮನೆಯಲ್ಲಿ ಪೂಜೆಯನ್ನು ನಿಷೇಧಿಸಲಾಯಿತು. ಈ ಸಮಯದಲ್ಲಿ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಮಗು ಹುಟ್ಟಿದ ನಂತರ ರಾಜನು ಅವನನ್ನು ಸಂಪೂರ್ಣವಾಗಿ ಮುಸಲ್ಮಾನನನ್ನಾಗಿ ಮಾಡುವುದಾಗಿ ಹೇಳಿದ್ದ. ಕುಟುಂಬ ಸದಸ್ಯರು ನಿತ್ಯ ನನ್ನನ್ನು ನಿಂದಿಸಿಸುತ್ತಿದ್ದರು. 2020ರಲ್ಲಿ ನಾನು ಮಗನೊಂದಿಗೆ ತವರು ಮನೆಗೆ ಹಿಂದಿರುಗಿದ್ದೆ. ಆಗ ರಾಜ ಮತ್ತು ಅವನ ಕುಟುಂಬಸ್ಥರು ಫೋನ್‌ನಲ್ಲಿ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು" ಎಂದು ಆರೋಪಿಸಿದ್ದಾರೆ.

ಅಲ್ಲದೇ ಅನೇಕ ಹಿಂದೂ ಹುಡುಗಿಯರನ್ನು ಲವ್ ಜಿಹಾದ್‌ಗೆ ಬಲಿಪಶು ಮಾಡಲಾಗಿದೆ. ಹಲವು ಹಿಂದೂ ಹುಡುಗಿಯರನ್ನು ದೈಹಿಕವಾಗಿ ಶೋಷಣೆ ಮಾಡಿ ಮದುವೆಯಾಗಿದ್ದಾನೆ. ಒಂದು ದಿನ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಫೋಟೋಗಳು ಸಿಕ್ಕಿವೆ ಎಂದು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ವಿರುದ್ಧ ಆರೋಪ: ಸಂತ್ರಸ್ತೆ ಪೊಲೀಸರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ದೂರು ನೀಡಿದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ. ಬಳಿಕ ಅಂದಿನ ಎಸ್‌ಎಸ್‌ಪಿಗೆ ದೂರು ನೀಡಿದ್ದೆ. ಅವರ ಆದೇಶದ ನಂತರವೂ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ. ಈಗ ನ್ಯಾಯಾಲಯದ ಆದೇಶದ ಮೇರೆಗೆ ಮೇ 13, 2023 ರಂದು ಆರೋಪಿ ರಾಜ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ರಾಕಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ; ನ್ಯಾಯಕ್ಕಾಗಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.