ETV Bharat / bharat

ಕೋವಿಡ್​ ಕರ್ಫ್ಯೂ ಹಿಂಪಡೆದ ಉತ್ತರ ಪ್ರದೇಶ ಸರ್ಕಾರ

author img

By

Published : Jun 8, 2021, 12:00 PM IST

ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ 600ಕ್ಕಿಂತಲೂ ಕಡಿಮೆ ಪ್ರಕರಣಗಳು ಆ್ಯಕ್ಟಿವ್​ ಆಗಿದ್ದು, ರಾಜ್ಯದಲ್ಲಿ ಹೇರಲಾಗಿದ್ದ ಕಠಿಣ ಕೋವಿಡ್​ ಕರ್ಫ್ಯೂ ತೆಗೆದುಹಾಕಲಾಗಿದೆ.

Uttar Pradesh
ಯೋಗಿ ಆದಿತ್ಯನಾಥ್

ಲಖನೌ (ಉತ್ತರ ಪ್ರದೇಶ): ಕೊರೊನಾ ಹಾವಳಿ ಕಡಿಮೆಯಾದ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೇರಲಾಗಿದ್ದ ಕಠಿಣ ಕೋವಿಡ್​ ಕರ್ಫ್ಯೂ ಆದೇಶವನ್ನು ಹಿಂಪಡೆದಿದೆ.

ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳನ್ನು ಕರ್ಫ್ಯೂ ಮುಕ್ತಗೊಳಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ರಾತ್ರಿ 7ರಿಂದ ಬೆಳಗ್ಗೆ 7ರ ವರೆಗೆ ಇರುವ ನೈಟ್​ ಕರ್ಫ್ಯೂ ಮಾತ್ರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್​ ಎರಡನೇ ಅಲೆ ಆರಂಭದಲ್ಲಿ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದರು. ಸುಮಾರು 200 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದರು. ಇದೀಗ ಎರಡು ತಿಂಗಳ ಬಳಿಕ ಉತ್ತರ ಪ್ರದೇಶದ ದೈನಂದಿನ ಕೊರೊನಾ ಕೇಸ್​ಗಳ ಸಂಖ್ಯೆ ಸಾವರ ಗಡಿಯಿಂದ ಕೆಳಗಿಳಿದಿದೆ. ಕಳೆದ 24 ಗಂಟೆಗಳಲ್ಲಿ 797 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ಪ್ರಧಾನಿ.. ಹಿಂದಿರುವ ಕಾರಣವೇನು?

ಒಟ್ಟು 14,000 ಕೇಸ್​ಗಳು ಮಾತ್ರ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಎಲ್ಲಾ 75 ಜಿಲ್ಲೆಗಳಲ್ಲೂ 600ಕ್ಕಿಂತಲೂ ಕಡಿಮೆ ಪ್ರಕರಣಗಳು ಆ್ಯಕ್ಟಿವ್​ ಆಗಿವೆ. ಇನ್ನು ಗುಣಮುಖರ ಪ್ರಮಾಣ ಶೇ.97.9 ಕ್ಕೆ ಏರಿಕೆಯಾಗಿದೆ. ಹೀಗಾಗಿ ಕಠಿಣ ಕೋವಿಡ್​ ಕರ್ಫ್ಯೂವನ್ನು ತೆಗೆದುಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.