ಗೋರಖ್ಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಇಂದು ಗೋರಖ್ಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಒಟ್ಟು ಆಸ್ತಿ ಎಷ್ಟು ಎಂಬುದರ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಐದು ಸಲ ಲೋಕಸಭೆ ಸಂಸದರಾಗಿ ಗೋರಖ್ಪುರ ಕ್ಷೇತ್ರ ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಮಾರ್ಚ್ 3ರಂದು ನಡೆಯಲಿರುವ ಚುನಾವಣೆಗೋಸ್ಕರ ಯೋಗಿ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಅಫಡವಿಟ್ನಲ್ಲಿ ಯೋಗಿ ಆದಿತ್ಯನಾಥ್ 1,54,94,054 ರೂಪಾಯಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆರು ಬ್ಯಾಂಕ್ ಖಾತೆ ಹೊಂದಿರುವುದಾಗಿ ಯೋಗಿ ತಿಳಿಸಿದ್ದು, ಅವರ ಕೈಯಲ್ಲಿ 12 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಇದೆ. ಉಳಿದಂತೆ 1 ಲಕ್ಷ ರೂ. ಮೌಲ್ಯದ ರಿವಾಲ್ವರ್ ಮತ್ತು 80 ಸಾವಿರ ರೂಪಾಯಿ ಮೌಲ್ಯದ ರೈಫಲ್ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿರಿ: ಗೋರಖನಾಥ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗೋರಖ್ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ
ಉತ್ತರ ಪ್ರದೇಶ ಸಿಎಂ ಬಳಿ 49 ಸಾವಿರ ರೂ. ಮೌಲ್ಯದ ಚಿನ್ನದ ಆಭರಣ, 20 ಸಾವಿರ ಮೌಲ್ಯದ ಚಿನ್ನದ ಸರ ಮತ್ತು ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಇರುವುದಾಗಿ ತಿಳಿಸಿದ್ದಾರೆ.
ಅಫಿಡವಿಟ್ ಪ್ರಕಾರ ಯೋಗಿ ಆದಿತ್ಯನಾಥ್ 2022-21ರಲ್ಲಿ 13,20,653 ರೂ., 2019-20ನೇ ಸಾಲಿನಲ್ಲಿ 15,68,799 ರೂ. ಆದಾಯ, 2018-19ನೇ ಸಾಲಿನಲ್ಲಿ 18,27,639 ರೂ. ಮತ್ತು 2018-19ನೇ ಸಾಲಿನಲ್ಲಿ 18,27,639 ರೂ.ಗಳ ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ. ಚುನಾವಣಾ ಅಫಡವಿಟ್ ಪ್ರಕಾರ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ಗಳು ದಾಖಲಾಗಿಲ್ಲ.