ETV Bharat / bharat

ಯುಪಿ ಚುನಾವಣೆಯಲ್ಲಿ ಹವಾ ಸೃಷ್ಟಿಸಿದ್ದ ನಟಿ, ಮಾಡೆಲ್​ ಅರ್ಚನಾ ಗೌತಮ್​ಗೆ ಹಿನ್ನಡೆ - ಅರ್ಚನಾ ಗೌತಮ್​ಗೆ ಹಿನ್ನಡೆ

ಕಾಂಗ್ರೆಸ್ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ಹಸ್ತಿನಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರ್ಚನಾ ಗೌತಮ್ ಹಿನ್ನಡೆ ಅನುಭವಿಸಿದ್ದಾರೆ.

ಅರ್ಚನಾ ಗೌತಮ್
ಅರ್ಚನಾ ಗೌತಮ್
author img

By

Published : Mar 10, 2022, 10:51 AM IST

Updated : Mar 10, 2022, 10:59 AM IST

ಉತ್ತರ ಪ್ರದೇಶ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದ್ದು ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಹಿನ್ನಡೆ ಅನುಭವಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಹಸ್ತಿನಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರ್ಚನಾ ಗೌತಮ್ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಮತದಾರ ಬಂಧುಗಳು ಅರ್ಚನಾ ಗೌತಮ್​​ಗೆ ಹೆಚ್ಚಿನ ಒಲವು ತೋರಿಲ್ಲ. ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್​ 2014ರಲ್ಲಿ 'ಉತ್ತರ ಪ್ರದೇಶ ಸುಂದರಿ'ಯಾಗಿ ಹೊರಹೊಮ್ಮಿದ್ದು, ಇದಾದ ಬಳಿಕ ಮಿಸ್​ ಬಿಕಿನಿ ಇಂಡಿಯಾ, ಮಿಸ್​ ಬಿಕಿನಿ ಯೂನಿವರ್ಸ್​​​ ಇಂಡಿಯಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.

ಅರ್ಚನಾ​ ಗೌತಮ್ ಅವರು​​ ಮೀರತ್​​ನ IIMTಯಿಂದ BJMCಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ 'ಮೋಸ್ಟ್​ ಟ್ಯಾಲೆಂಟ್'​​ ಶೀರ್ಷಿಕೆ ಗೆದ್ದಿದ್ದಾರೆ. 2015ರಲ್ಲಿ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಇವರನ್ನು 'ಬಿಕಿನಿ ಗರ್ಲ್'​ ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ: ಮತ ಎಣಿಕೆ ನಡೆಯುತ್ತಿರುವಾಗಲೇ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್​

Last Updated : Mar 10, 2022, 10:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.