ETV Bharat / bharat

ಹೈಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ: ತಮಿಳುನಾಡಿನಲ್ಲಿ ಸಿಜೆಐ ಹೇಳಿದ್ದೇನು? - Chief Minister M K Stalin

ಜಗತ್ತು ವೇಗವಾಗಿ ಸಾಗುತ್ತಿದೆ. ಈಗ ನಾವು 5 ದಿನಗಳ ಕ್ರಿಕೆಟ್​ ಟೆಸ್ಟ್​ನಿಂದ 20-20 ಮಾದರಿಗೆ ಬಂದಿದ್ದೇವೆ. ಆದ್ದರಿಂದ ನ್ಯಾಯದಾನ ತ್ವರಿತವಾಗಿ ಕೊಡದೇ ಹೋದರೆ ನಿಜವಾದ ನ್ಯಾಯ ಸಿಗದೇ ಹೋಗಬಹುದು ಎಂದು ಸಿಐ ರಮಣ ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎನ್​​.ವಿ.ರಮಣ

author img

By

Published : Apr 23, 2022, 8:09 PM IST

ಚೆನ್ನೈ (ತಮಿಳುನಾಡು): ಹೈಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ ಬಗ್ಗೆ ಕೆಲವು ಅಡೆತಡೆಗಳು ಇರುವುದು ನಿಜ. ಆದರೆ, ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನೆರವಿನಿಂದ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎನ್​​.ವಿ.ರಮಣ ಅಭಿಪ್ರಾಯಪಟ್ಟರು.

ಮದ್ರಾಸ್​​ ಹೈಕೋರ್ಟ್​​ನ 9 ಅಂತಸ್ತಿನ ಆಡಳಿತಾತ್ಮಕ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ 348ನೇ ವಿಧಿಯ ಪ್ರಕಾರ ಹೈಕೋರ್ಟ್​ಗಳ ವಿಚಾರಣೆಯಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಅವಕಾಶ ನೀಡುವಂತೆ ವಿವಿಧ ಪ್ರದೇಶಗಳಿಂದ ಕಾಲ-ಕಾಲಕ್ಕೆ ಬೇಡಿಕೆಗಳಿವೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಆದರೆ, ಆಯಾ ಹೈಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆಗಳ ಪರಿಚಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಕುರಿತು ನನ್ನ ಗಮನಕ್ಕೂ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​, ಮದ್ರಾಸ್​​ ಹೈಕೋರ್ಟ್​​ನಲ್ಲಿ ವಿಚಾರಣೆಯಲ್ಲಿ ತಮಿಳು ಭಾಷೆ ಬಳಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ಸಿಐಜೆ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಸ್ಥಳೀಯ ಭಾಷೆ ಅಳವಡಿಸಿಕೊಳ್ಳುವುದರಲ್ಲಿ ಇರುವ ಅಡೆತಡೆಗಳ ಪರಿಹಾರದ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಹಾಗೂ ಕೃತಕ ಬುದ್ಧಿಮತ್ತೆಯಲ್ಲಿನ ಪ್ರಗತಿಯಿಂದ ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಬಹುದು ಎಂದರು.

ಇಷ್ಟೇ ಅಲ್ಲ, ತಮಿಳರು ತಮ್ಮ ಅಸ್ಮಿತೆ, ಭಾಷೆ, ಆಹಾರ ಮತ್ತು ಸಂಸ್ಕೃತಿಗೆ ಅತಿಯಾದ ಹೆಮ್ಮೆ ಪಡುತ್ತಾರೆ. ದೇಶದಲ್ಲಿ ಸಾಂಸ್ಕೃತಿಕ ಮತ್ತು ಭಾಷಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ತಮಿಳರು ಮುಂಚೂಣಿಯಲ್ಲಿದ್ದಾರೆ. ಇಂದಿಗೂ ನಾವು ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಯೋಚಿಸಿದಾಗ ತಮಿಳರು ನಡೆಸಿದ ಹೋರಾಟ ನನ್ನ ನೆನಪಿಗೆ ಬರುತ್ತದೆ. ಬಾಲ್ಯದಲ್ಲಿ ನಾನು ಭಾಷೆಯ ವಿಷಯದ ಬಗ್ಗೆ ಭಾರಿ ಪ್ರತಿಭಟನೆಗಳನ್ನು ಕಂಡಿದ್ದೇನೆ ಎಂದೂ ಅವರು ಸ್ಮರಿಸಿದರು.

ಟೆಸ್ಟ್ ಕ್ರಿಕೆಟ್​​ನಿಂದ 20-20 ಮಾದರಿಗೆ: ಕಳೆದ ನನ್ನ ಒಂದು ವರ್ಷದ ಅಧಿಕಾರವಧಿಯಲ್ಲಿ ನ್ಯಾಯಾಂಗದ ವ್ಯವಸ್ಥೆಯಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಕಂಡಿದ್ದು, ಅವುಗಳನ್ನು ನಾನು ಸಾಕಷ್ಟು ಸಲ ಮುನ್ನೆಲೆಗೂ ತಂದಿದ್ದೇನೆ. ಆದರೆ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ಜಾರಿಗೊಳಿಸುವುದೇ ನಮ್ಮ ಕರ್ತವ್ಯ. ಇದು ಭಾರಿ ಹೊರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ನ್ಯಾಯಾಂಗ ಸಂಸ್ಥೆಗಳನ್ನು ಬಲಪಡಿಸುವುದೇ ನಮ್ಮ ಮೊದಲ ಆದ್ಯತೆಯಾಗಬೇಕೆಂದು ಸಿಜೆಐ ರಮಣ ಹೇಳಿದ್ದಾರೆ.

ಸಮಾಜದಲ್ಲಿನ ನೈಜತೆಗಳ ಬಗ್ಗೆ ನ್ಯಾಯಾಧೀಶರು ತಿಳಿದುಕೊಳ್ಳಬೇಕು. ಸಮಾಜದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ನಿಜವಾದ ನ್ಯಾಯವನ್ನು ಪಾಲನೆ ಮಾಡಬೇಕು. ಜಗತ್ತು ಕೂಡ ವೇಗವಾಗಿ ಸಾಗುತ್ತಿದೆ. ಈಗ ನಾವು 5 ದಿನಗಳ ಕ್ರಿಕೆಟ್​ ಟೆಸ್ಟ್​ನಿಂದ 20-20 ಮಾದರಿಗೆ ಬಂದಿದ್ದೇವೆ. ಆದ್ದರಿಂದ ನ್ಯಾಯದಾನ ತ್ವರಿತವಾಗಿ ಕೊಡದೇ ಹೋದರೆ ನಿಜವಾದ ನ್ಯಾಯ ಸಿಗದೇ ಹೋಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿಎಂ ಠಾಕ್ರೆ ಮನೆ ಮುಂದೆ ಹನುಮಾನ್​ ಚಾಲೀಸಾ ಪಠಿಸುವ ಸವಾಲು: ಸಂಸದೆ, ಪತಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.