ETV Bharat / bharat

ಯುಎಸ್​ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಭಾರತಕ್ಕೆ ಆಗಮನ: ಮಿಲಿಟರಿ ಸಹಕಾರ ಬಲಪಡಿಸಲು ಚರ್ಚೆ

ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತಕ್ಕೆ ಆಗಮಿಸಿದ್ದಾರೆ. ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ನಾಯಕರನ್ನು ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ.

author img

By

Published : Jun 4, 2023, 7:39 PM IST

US Defence Secy Lloyd Austin
US Defence Secy Lloyd Austin

ನವದೆಹಲಿ : ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸಿಂಗಾಪುರದಿಂದ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಅವರನ್ನು ಬರಮಾಡಿಕೊಂಡರು. ಆಸ್ಟಿನ್ ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಮೂರನೇ ಹಂತದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ.

ತಮ್ಮ ಭಾರತ ಭೇಟಿಯ ಬಗ್ಗೆ ಟ್ವಿಟರ್​ನಲ್ಲಿ ಬರೆದಿರುವ ಆಸ್ಟಿನ್, "ನಮ್ಮ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚೆಗಾಗಿ ಪ್ರಮುಖ ನಾಯಕರನ್ನು ಭೇಟಿ ಮಾಡಲು ನಾನು ಭಾರತಕ್ಕೆ ಆಗಮಿಸಿದ್ದೇನೆ. ಒಟ್ಟಿಗೆ ನಾವು ಮುಕ್ತ ಇಂಡೋ ಪೆಸಿಫಿಕ್‌ಗಾಗಿ ಹಂಚಿಕೆಯ ದೃಷ್ಟಿಯನ್ನು ಮುನ್ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆಸ್ಟಿನ್ ಅವರ ನವದೆಹಲಿ ಭೇಟಿಯು ಭಾರತ-ಅಮೆರಿಕಗಳ ಮಧ್ಯದ ಹೊಸ ರಕ್ಷಣಾ ಆವಿಷ್ಕಾರಗಳು ಮತ್ತು ಕೈಗಾರಿಕಾ ಸಹಕಾರ ಉಪಕ್ರಮಗಳನ್ನು ಮುಂದುವರೆಸುವುದರ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿದೆ. ಅಮೆರಿಕ ಮತ್ತು ಭಾರತೀಯ ಮಿಲಿಟರಿಗಳ ನಡುವಿನ ಕಾರ್ಯಾಚರಣೆಯ ಸಹಕಾರವನ್ನು ವಿಸ್ತರಿಸಲು ಈ ಭೇಟಿ ಪೂರಕವಾಗಲಿದೆ.

ರಕ್ಷಣಾ ಕಾರ್ಯದರ್ಶಿಯ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ಪೆಂಟಗನ್, "ಸಿಂಗಾಪುರದ ನಂತರ ಕಾರ್ಯದರ್ಶಿ ಆಸ್ಟಿನ್ ಅವರು ನವದೆಹಲಿಗೆ ಭೇಟಿ ನೀಡಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ನಾಯಕರನ್ನು ಭೇಟಿಯಾಗಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತಗಳು ಯುಎಸ್-ಇಂಡಿಯಾ ರಕ್ಷಣಾ ಪಾಲುದಾರಿಕೆಯನ್ನು ಮುಂದುವರಿಸಲಿವೆ" ಎಂದು ತಿಳಿಸಿದೆ. "ಈ ಭೇಟಿಯು ಹೊಸ ರಕ್ಷಣಾ ನಾವೀನ್ಯತೆ ಮತ್ತು ಕೈಗಾರಿಕಾ ಸಹಕಾರ ಉಪಕ್ರಮಗಳನ್ನು ವೇಗಗೊಳಿಸಲು ಮತ್ತು ಯುಎಸ್ ಮತ್ತು ಭಾರತೀಯ ಮಿಲಿಟರಿಗಳ ನಡುವಿನ ಕಾರ್ಯಾಚರಣೆಯ ಸಹಕಾರವನ್ನು ವಿಸ್ತರಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ" ಎಂದು ಪೆಂಟಗನ್ ಪ್ರಕಟಣೆ ಹೇಳಿದೆ.

ಆಸ್ಟಿನ್ ತಮ್ಮ ದೆಹಲಿ ಭೇಟಿಯ ಸಂದರ್ಭದಲ್ಲಿ ರಕ್ಷಣಾ ಕೈಗಾರಿಕಾ ಪಾಲುದಾರಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಜೂನ್‌ನಲ್ಲಿ ಶ್ವೇತಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಭೇಟಿಯು ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ 2016 ರಲ್ಲಿ ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಮ್ ಆಫ್ ಅಗ್ರಿಮೆಂಟ್ (LEMOA) ಸೇರಿದಂತೆ ಉಭಯ ದೇಶಗಳು ಪ್ರಮುಖ ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳು ತಮ್ಮ ಮಿಲಿಟರಿಗಳು ಪರಸ್ಪರರ ನೆಲೆಗಳನ್ನು ದುರಸ್ತಿ ಮತ್ತು ಸರಬರಾಜು ಮರುಪೂರಣಕ್ಕಾಗಿ ಬಳಸಲು ಅನುಮತಿ ನೀಡುತ್ತವೆ.

ಭಾರತಕ್ಕೆ ಆಗಮಿಸುವ ಮುನ್ನ ಆಸ್ಟಿನ್ ಅವರು ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಸಂವಾದದಲ್ಲಿ ಪಾಲ್ಗೊಂಡಿದ್ದರು ಮತ್ತು ಟೋಕಿಯೊದಲ್ಲಿ ಜಪಾನಿನ ರಕ್ಷಣಾ ಸಚಿವ ಯಸುಕಾಸು ಹಮದಾ ಮತ್ತು ಇತರ ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು. ಅಲ್ಲದೆ ಜಪಾನ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಸೇನಾ ಯೋಧರನ್ನು ಭೇಟಿ ಮಾಡಿದರು. ಜಪಾನ್‌ನಿಂದ ಸಿಂಗಾಪುರಕ್ಕೆ ತೆರಳಿದ ಅವರು, ಅಲ್ಲಿ ಸಿಂಗಾಪುರದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (ಐಐಎಸ್‌ಎಸ್) 20 ನೇ ಶಾಂಗ್ರಿ-ಲಾ ಡೈಲಾಗ್‌ನಲ್ಲಿ ಮಾತನಾಡಿದರು.

ಇದನ್ನೂ ಓದಿ : ತಾಲಿಬಾನ್ ಕ್ರೂರ ಆಡಳಿತ: ತಪ್ಪಿತಸ್ಥರಿಗೆ ಸಾರ್ವಜನಿಕವಾಗಿ ಛಡಿಯೇಟು, ಮರಣದಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.