ETV Bharat / bharat

ಮೇ 28ಕ್ಕೆ UPSC ಪ್ರಿಲಿಮ್ಸ್‌ ಪರೀಕ್ಷೆ: ಅಭ್ಯರ್ಥಿಗಳ ತಯಾರಿಗೆ ಕೆಲವು ಟಿಪ್ಸ್‌

ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಸಮೀಪಿಸುತ್ತಿದ್ದು ಅಭ್ಯರ್ಥಿಗಳ ತಯಾರಿಗೆ ಬೇಕಿರುವ ಕೆಲವು ಅಂಶಗಳು ಇಲ್ಲಿವೆ.

UPSC Prelims 2023  Civil Services Preliminary Exam  Civil Services Preliminary Exam on May 28  ಮೇ 28ಕ್ಕೆ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ  ಅಭ್ಯರ್ಥಿಗಳ ತಯಾರಿ ಹೀಗರಲಿ  ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ  ತಯಾರಿ ನಡೆಸಬೇಕಾದ ಕೆಲ ಅಂಶಗಳು  ಮೇ 28 ರಂದು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ  ಅಭ್ಯರ್ಥಿಗಳಿಗೆ ಕೊಂಚ ಆತಂಕ  ಪ್ರಮುಖ ವಿಷಯಗಳ ಬಗ್ಗೆ ಗಮನ  ಕಲ್ಯಾಣ ಸಚಿವಾಲಯಗಳ ವೆಬ್‌ಸೈಟ್‌ಗಳು  ನಿಖರವಾಗಿ ಉತ್ತರಿಸುವ ಪ್ರಶ್ನೆಗಳ ಗಮನ ಹರಿಸಿ
ಮೇ 28ಕ್ಕೆ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ
author img

By

Published : May 18, 2023, 8:57 AM IST

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಪ್ರತಿ ವರ್ಷ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ದಿನ ಸಮೀಪಿಸುತ್ತಿದೆ. ಪ್ರಸ್ತುತ ವರ್ಷ ಮೇ 28 ರಂದು ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ದೇಶದ ಅತ್ಯಂತ ಕಠಿಣ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ಆತಂಕ ಸಹಜವೇ. ಹೀಗಾಗಿ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್.

ಕಳೆದ ಬಾರಿಗೆ ಹೋಲಿಸಿದರೆ ದೇಶಾದ್ಯಂತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕೋವಿಡ್ ನಂತರದ ಪರಿಸ್ಥಿತಿ ಪರಿಗಣಿಸಿ, ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇದು ಹೆಚ್ಚು ಸ್ಪರ್ಧೆಗೆ ಅವಕಾಶ ನೀಡಿದ ಸವಾಲು ಹೆಚ್ಚಿಸುತ್ತದೆ. ಕಳೆದ ವರ್ಷಕ್ಕಿಂತ ಖಾಲಿ ಹುದ್ದೆಗಳ ಸಂಖ್ಯೆಯೂ ಹೆಚ್ಚಾಗಿದೆ. ಈಗ ಖಾಲಿ ಹುದ್ದೆಗಳ ಸಂಖ್ಯೆ 1,105.

*ಪಠ್ಯಕ್ರಮ ಗಮನಹರಿಸಿ: ಇದುವರೆಗೆ ಪಠ್ಯಕ್ರಮವನ್ನು ಹಲವು ಬಾರಿ ತಿರುವಿ ಹಾಕಿರುತ್ತೀರಿ. ಆದ್ರೂ ಮತ್ತೊಮ್ಮೆ ಎಚ್ಚರಿಕೆಯಿಂದ ಗಮನಿಸಿ. ಯಾವುದೇ ವಿಷಯಗಳು ಮರೆತುಹೋಗಿದ್ದರೆ, ಪ್ರಸ್ತುತ ವಿಷಯಗಳನ್ನು ಮೂಲಭೂತ ವಿಷಯಗಳೊಂದಿಗೆ ಜೋಡಿಸಿ, ಅಭ್ಯಾಸ ಮಾಡಬೇಕಿದೆ.

*ಸಿದ್ಧತೆ ಸ್ಪಷ್ಟತೆ ಇರಲಿ: ಕಳೆದ ಎರಡ್ಮೂರು ವರ್ಷಗಳಿಂದ ಯಾವ ವಿಷಯಗಳಿಂದ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿ. ನಿಮ್ಮ ಊಹೆ ನಿಖರವಾಗಿರಬೇಕಿಗಿಲ್ಲ. ಆದ್ರೆ ಸಿದ್ಧತೆಗೆ ಸ್ಪಷ್ಟತೆ ತರುತ್ತದೆ.

*ಪ್ರಮುಖ ವಿಷಯಗಳ ಬಗ್ಗೆ ಗಮನ: ನೀವು ಪಠ್ಯಕ್ರಮದ ಎಲ್ಲ ಮುಖ್ಯ ಭಾಗಗಳನ್ನು ಓದಬಹುದು. ಯಾವುದೇ ಭಾಗಗಳು ಮಿಸ್​ ಆಗಿದೆಯಾ ಎಂದು ಪರಿಶೀಲಿಸಿ.

*ಯಾವುದು ಮುಖ್ಯ, ಅಮುಖ್ಯ: ನೀವು ಈಗಾಗಲೇ ಪ್ರೆಸೆಂಟ್ಸ್ ತಯಾರಿಯನ್ನು ಪೂರ್ಣಗೊಳಿಸಿರಬಹುದು. ಅವುಗಳಲ್ಲಿ ಪ್ರಮುಖವಾದವುಗಳನ್ನು ಗುರುತಿಸಿ. ಎಲ್ಲವೂ ಮುಖ್ಯವಾಗಿ ಕಾಣಿಸಬಹುದು. ಆದರೆ ನೀವು ಸಿವಿಲ್‌ಗೆ ತಯಾರಿ ನಡೆಸುತ್ತಿದ್ದೀರಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಿ. ಸಾರ್ವಜನಿಕ ಸೇವೆ ಮಾಡಲು ಆಸಕ್ತಿ ಮತ್ತು ದೂರದೃಷ್ಟಿ ಇರುವವರನ್ನು ಆಯ್ಕೆ ಮಾಡುವುದು ಈ ಪರೀಕ್ಷೆಯ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ. ಉದಾಹರಣೆಗೆ, ‘ಮನ್​ ಕಿ ಬಾತ್’ನಲ್ಲಿ ಪ್ರಧಾನಿ ಪ್ರಸ್ತಾಪಿಸಿದ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಬಹುದು.

*ಕಲ್ಯಾಣ ಸಚಿವಾಲಯಗಳ ವೆಬ್‌ಸೈಟ್‌ಗಳು: ಎಲ್ಲ ಸರ್ಕಾರಿ ಸಚಿವಾಲಯಗಳು ಮುಖ್ಯ. ಇವುಗಳಲ್ಲಿ ಕಲ್ಯಾಣ ಸಚಿವಾಲಯಗಳು ಪ್ರಮುಖ. ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ. ಪ್ರಮುಖವಾದವುಗಳನ್ನು ಗುರುತಿಸಿ, ಅವುಗಳ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳಿ. ಈ ಸಂದರ್ಭದಲ್ಲಿ, '5 WH'ಗಳ ಸೂತ್ರವನ್ನು ಅನುಸರಿಸಬೇಕು (ಯಾವುದು, ಏಕೆ, ಯಾರು, ಯಾವಾಗ, ಎಲ್ಲಿ, ಹೇಗೆ) ಸರ್ಕಾರದ ಯೋಜನೆ ಏನು? ಅದನ್ನು ಏಕೆ ಪ್ರಾರಂಭಿಸಲಾಯಿತು? ಫಲಾನುಭವಿಗಳು ಯಾರು? ಜಾರಿಗೆ ತರುವ ಹೊಣೆಗಾರಿಕೆ ಯಾರದ್ದು? ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು? ಯಾವಾಗ ಕೊನೆಗೊಳ್ಳಬಹುದು? ಎಲ್ಲಿ ಆರಂಭವಾಯಿತು?. ಹೀಗೆ ಎಲ್ಲ ವಿವರಗಳನ್ನು ತಿಳಿದುಕೊಂಡು ಮನದಟ್ಟು ಮಾಡಿಕೊಳ್ಳಬೇಕು.

*ನಿಖರವಾಗಿ ಉತ್ತರಿಸುವ ಪ್ರಶ್ನೆಗಳನ್ನು ಗಮನಿಸಿ: ನಾಗರಿಕ ಸೇವಾ ಪರೀಕ್ಷೆಗಳಲ್ಲಿ ನಿಖರ ಬರವಣಿಗೆ ಬಹಳ ಮುಖ್ಯ. ಕಷ್ಟಪಟ್ಟು ಕೆಲಸ ಮಾಡಿದ ಅನೇಕ ಅಭ್ಯರ್ಥಿಗಳು ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಲು ಸಾಧ್ಯವಾಗುತ್ತದೆ. ಕಟ್ಆಫ್ ಮಾರ್ಕ್ ತಲುಪುವುದು ಅಥವಾ ತಲುಪದೇ ಇರುವುದು ನಿಮ್ಮ ಬರವಣಿಗೆಯ ಮೇಲೆ ಅವಲಂಬಿಸಿರುತ್ತದೆ. ಇದಕ್ಕೆ ಸಾಕಷ್ಟು ಅಭ್ಯಾಸದ ಅಗತ್ಯವಿದೆ. ಆದ್ದರಿಂದ ಸಾಧ್ಯವಾದಷ್ಟು ಅಭ್ಯಾಸ ಮುಂದುವರಿಸಿ.

* OMR ಶೀಟ್‌ಗಳ ಬಗ್ಗೆ ತಿಳಿಯಿರಿ: ಅನೇಕ ಅಭ್ಯರ್ಥಿಗಳು OMR ಶೀಟ್‌ಗಳ ಪ್ರ್ಯಾಕ್ಟಿಸ್​ ಬಗ್ಗೆ ನಿರ್ಲಕ್ಷಿಸುತ್ತಾರೆ. ಆದರೆ ಇದು ಬಹಳ ಮುಖ್ಯ. ಕೆಲವೊಮ್ಮೆ ಅಭ್ಯರ್ಥಿಗಳು ಒಂದು ಉತ್ತರವನ್ನು ಬಿಟ್ಟು ಮತ್ತೊಂದಕ್ಕೆ ಗುರುತು ಹಾಕುತ್ತಾರೆ. ಇಂತಹ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ತಪ್ಪು ವೃತ್ತವನ್ನು ತುಂಬಬಾರದು. ನೀವು ಮೊದಲು ಪ್ರಶ್ನೆ ಪುಸ್ತಕದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿ. ಕೊನೆಯಲ್ಲಿ OMR ಶೀಟ್‌ನಲ್ಲಿ ತುಂಬುವುದು ಸೂಕ್ತ

* ಪೇಪರ್-2 ನಿರ್ಲಕ್ಷಿಸಬೇಡಿ: ಪೇಪರ್-2 ಅರ್ಹತೆಯನ್ನು ನಿರ್ಧರಿಸುತ್ತದೆ, ನಿರ್ಲಕ್ಷಿಸಬಾರದು. ನೀವು ಕ್ವಾಂಟ್ ಮತ್ತು ರೀಸನಿಂಗ್ ವಿಭಾಗದಲ್ಲಿ ಉತ್ತಮವಾಗಿದ್ದರೆ ಎರಡು ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಮೊದಲು ಗಣಿತದ ಪ್ರಶ್ನೆಗಳನ್ನು ಮತ್ತು ನಂತರ ಇಂಗ್ಲಿಷ್ ಕಾಂಪ್ರೆಹೆನ್ಷನ್ ಉತ್ತರಗಳನ್ನು ಬರೆಯಲು ಮರೆಯದಿರಿ.

ಪತ್ರಿಕೆ-1 ಸಮಗ್ರ ಪ್ರಶ್ನೆ ಪತ್ರಿಕೆಗಳ ಅಭ್ಯಾಸ: ಗುಣಮಟ್ಟದ ಆರು ಸಮಗ್ರ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಿ. ವಿಷಯವಾರು ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇದು ಸೂಕ್ತ ಸಮಯವಲ್ಲ.

* ಪರೀಕ್ಷೆಯನ್ನು ಹಾರ್ಡ್ ಕಾಪಿ ರೂಪದಲ್ಲಿ ಬರೆಯಬೇಕು. ಆನ್‌ಲೈನ್‌ನಿಂದ ಡೌನ್‌ಲೋಡ್ ಮಾಡಿ. ಅಗತ್ಯವಿದ್ದರೆ ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಆನ್‌ಲೈನ್‌ನಲ್ಲಿ ಉತ್ತರಗಳನ್ನು ಬರೆಯಬೇಡಿ.

* ಸಿವಿಲ್ಸ್ ಪರೀಕ್ಷೆಯ ಸಮಯದಲ್ಲಿ ಸಮಗ್ರ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಪ್ರಯತ್ನಿಸಿ. ಪರೀಕ್ಷೆಯ ಸಮಯ 9.30 ಗಂಟೆಯಾಗಿದ್ದರೆ ನೀವು ಪ್ರತಿದಿನ ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು.

* ಪರೀಕ್ಷೆ ಆರಂಭವಾದ ನಂತರ ವಿರಾಮ ತೆಗೆದುಕೊಳ್ಳಬೇಡಿ. ಒಮ್ಮೆ ನೀವು ಪ್ರಾರಂಭಿಸಿದರೆ, ನೀವು ಅದನ್ನು ಮುಗಿಸಬೇಕು. ಇತರ ವಿಷಯಗಳ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಳ್ಳುವಂತೆ ನೀವು ಭಾವಿಸಬಹುದು. ಆದರೆ ಅದೆಲ್ಲವನ್ನೂ ಬದಿಗಿಟ್ಟು ಪರೀಕ್ಷೆ ಮುಗಿಸಿ. ಬರೆದ ನಂತರ ಸ್ಕೋರ್ ಪರಿಶೀಲಿಸಿ.

* ಪರೀಕ್ಷೆಗಳ ಬರವಣಿಗೆಯನ್ನು ಪೂರ್ಣಗೊಳಿಸಿದ ನಂತರ, ಬರೆಯುವ ಶೈಲಿ ವಿಶ್ಲೇಷಿಸಬೇಕು. ಟೇಬಲ್ ರೂಪದಲ್ಲಿ ವಿಶ್ಲೇಷಿಸುವುದು ಸುಲಭ. (ಸಿಲಬಸ್ ವಿಷಯ, ಪ್ರಶ್ನೆಗಳು, ಸರಿ, ತಪ್ಪು, ಅಲಿಖಿತ ಇತ್ಯಾದಿಗಳನ್ನು ಈ ವಿಷಯಗಳೊಂದಿಗೆ ಪಟ್ಟಿ ಮಾಡಬಹುದು)

* ಪಠ್ಯಕ್ರಮದ ಒಂದು ವಿಷಯವು ನಿಯಮಿತವಾಗಿ ಎರಡಕ್ಕಿಂತ ಹೆಚ್ಚು ಪತ್ರಿಕೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದರೆ ಆ ವಿಷಯವನ್ನು ಎಚ್ಚರಿಕೆಯಿಂದ ಪರಿಷ್ಕರಿಸಬೇಕು. ಆ ವಿಷಯದಲ್ಲಿ ಯಾವುದೇ ಪ್ರಸ್ತುತ ವಿಷಯಗಳಿದ್ದರೆ, ಅವುಗಳನ್ನು ಸಂಬಂಧಿಸಿ ಅಧ್ಯಯನ ಮಾಡಬೇಕು.

ಇದನ್ನೂ ಓದಿ: ಯುಪಿಎಸ್​ಸಿ ಪ್ರಿಲಿಮ್ಸ್​ ಪರೀಕ್ಷೆಗೆ ತಯಾರಿ ಹೇಗೆ? ಅಭ್ಯರ್ಥಿಗಳು ಈ ಯಡವಟ್ಟು ಮಾಡದಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.