ETV Bharat / bharat

ಹಿರಿಯ ಅಧಿಕಾರಿಯ ಕಿರುಕುಳದಿಂದ ಯೋಧ ಆತ್ಮಹತ್ಯೆ ಆರೋಪ: ಸಹೋದ್ಯೋಗಿಗಳ ಪ್ರತಿಭಟನೆ

ಜಾರ್ಖಂಡ್ ರಾಜ್ಯದ ಪಲಮು ಜಿಲ್ಲೆಯ ಲೆಸ್ಲಿಗಂಜ್‌ನಲ್ಲಿ ಹಿರಿಯ ಅಧಿಕಾರಿಯ ಕಿರುಕುಳದಿಂದ ಯೋಧರೊಬ್ಬರ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

uproar-over-suicide-of-jharkhand-jaguars-jawan-at-jap-8-corps-in-palamu
ಹಿರಿಯ ಅಧಿಕಾರಿಯ ಕಿರುಕುಳದಿಂದ ಯೋಧ ಆತ್ಮಹತ್ಯೆ ಆರೋಪ: ಸಹೋದ್ಯೋಗಿಗಳ ಪ್ರತಿಭಟನೆ
author img

By

Published : Mar 15, 2023, 9:34 PM IST

ಪಲಮು (ಜಾರ್ಖಂಡ್): ಜಾರ್ಖಂಡ್ ವಿಶೇಷ ಕಾರ್ಯಪಡೆ ಯೋಧರೊಬ್ಬರ ಆತ್ಮಹತ್ಯೆ ಪ್ರಕರಣ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಪಲಮು ಜಿಲ್ಲೆಯ ಲೆಸ್ಲಿಗಂಜ್‌ನಲ್ಲಿರುವ ಝಾಪ್ 8 ಕಾರ್ಪ್ಸ್ ಮುಖ್ಯ ಕಚೇರಿ ಆವರಣದಲ್ಲಿ ಅನೀಶ್ ವರ್ಮಾ ಎಂಬ ಯೋಧ ಸಾವಿಗೆ ಶರಣಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಇತರ ಸೈನಿಕರು ಅಧಿಕಾರಿಗಳ ಮೇಲೆ ದಾಳಿ ಮಾಡಿ ಥಳಿಸಿದ್ದಾರೆ.

2013ರಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ (ಆರ್​ಐಬಿ)ಯ ಸೈನಿಕರಾಗಿ ಅನೀಶ್ ವರ್ಮಾ ನೇಮಕಗೊಂಡಿದ್ದರು. 2015ರಲ್ಲಿ ಜಾರ್ಖಂಡ್ ಜಾಗ್ವಾರ್​ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಸದ್ಯ ಲೆಸ್ಲಿಗಂಜ್‌ನಲ್ಲಿ ಜನವರಿಯಿಂದ ಎಸ್​ಪಿಸಿ (Senior Promotion Course) ತರಬೇತಿ ನಡೆಯುತ್ತಿದೆ. ಈ ಸಮಯದಲ್ಲಿ ಅವರನ್ನು ಮೆಸ್ ಉಸ್ತುವಾರಿಯನ್ನಾಗಿ ಮಾಡಲಾಯಿತು. ಪ್ರತಿ ದಿನ ಬೆಳಗ್ಗೆ 5.30ಕ್ಕೆ ತರಬೇತಿ ಆರಂಭವಾಗಿತ್ತು. ಇತರ ಯೋಧರು ತರಬೇತಿಗಾಗಿ ಹೋಗಿದ್ದರು. ಈ ವೇಳೆ, ಅನೀಶ್ ತನ್ನ ಟೆಂಟ್‌ನಲ್ಲೇ ಉಳಿದುಕೊಂಡಿದ್ದರು. ಈ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಡಿಎಸ್​ಪಿ ವಿರುದ್ಧ ಕಿರುಕುಳ ಆರೋಪ: ಅನೀಶ್ ವರ್ಮಾ ಸಾವಿನ ಬೆನ್ನಲ್ಲೇ ಸಹೋದ್ಯೋಗಿ ಯೋಧರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಯ ಕಿರುಕುಳ ಮತ್ತು ಹಲ್ಲೆಯಿಂದ ಅನೀಶ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಯೋಧರು ಪ್ರತಿಭಟನೆ ನಡೆಸಿದ್ದು, ಮೇಲಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪಲಾಮು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮತ್ತು ಝಾಪ್​ 8 ಕಾರ್ಪ್ಸ್ ಪ್ರಭಾರಿ ಕಮಾಂಡೆಂಟ್ ಚಂದನ್ ಕುಮಾರ್ ಸಿನ್ಹಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ವೇಳೆ ಆಕ್ರೋಶಿತ ಯೋಧರು ಪ್ರಭಾರಿ ಕಮಾಂಡೆಂಟ್​ ಅವರನ್ನು ಸುತ್ತುವರೆದಿದ್ದಾರೆ. ಈ ಘಟನೆ ಡಿಎಸ್​ಪಿ ಅವರೇ ಕಾರಣ ಎಂದು ಆರೋಪಿಸಿ ಕಿಡಿಕಾರಿದ್ದಾರೆ. ಜೊತೆಗೆ ಡಿಎಸ್‌ಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಯೋಧರನ್ನು ಸಮಾಧಾನಪಡಿಸಲು ಕಮಾಂಡೆಂಟ್​ ಯತ್ನಿಸಿದ್ದಾರೆ. ಮತ್ತೊಂದೆಡೆ, ಲೆಸ್ಲಿಗಂಜ್ ಪೊಲೀಸ್ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಯೋಧರು ಒಂದೇ ಕಡೆ ಜಮಾಯಿಸಿ ಗಲಾಟೆ ಸೃಷ್ಟಿಸಿದ್ದಾರೆ. ಮತ್ತೊಂದೆಡೆ, ಅವರನ್ನು ಶಾಂತಗೊಳಿಸುವ ಪ್ರಯತ್ನ ಮಾಡಲಾಗಿದೆ.

ತರಬೇತಿಯಲ್ಲಿರುವ 400 ಯೋಧರು: ಲೆಸ್ಲಿಗಂಜ್‌ನಲ್ಲಿ ಯೋಧರು ತರಬೇತಿ ಪಡೆಯುತ್ತಿದ್ದಾರೆ. ಎಲ್ಲ ಯೋಧರಿಗೆ ಜನವರಿ 27ರಿಂದ ತರಬೇತಿ ನೀಡಲಾಗುತ್ತಿದೆ. ಅನೀಶ್ ವರ್ಮಾ ಮೂಲತಃ ಜಮ್‌ಶೆಡ್‌ಪುರದ ಬಾಗ್‌ಬೇರಾದ ಬಿಡಿ ರಸ್ತೆಯ ನಿವಾಸಿಯಾಗಿದ್ದರು. ಬುಧಾಪಹಾರ್, ಸರಂದಾ ಸೇರಿದಂತೆ ಹಲವು ಪ್ರಮುಖ ನಕ್ಸಲ್ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು.

ಇದೀಗ ಸಾವಿನ ಘಟನೆಯ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಜಮ್ಶೆಡ್‌ಪುರದಿಂದ ಕುಟುಂಬ ಸದಸ್ಯರು ಪಲಾಮುಗೆ ಆಗಮಿಸಿದ್ದಾರೆ. ಮೇದಿನ್ರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಂಎಂಸಿಎಚ್)ಯಲ್ಲಿ ಮೃತದೇಹ ಇರಿಸಲಾಗಿದೆ. ಪಂಚನಾಮೆ ಮತ್ತು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಐಐಟಿ, ಎನ್‌ಐಟಿ, ಐಐಎಂ ಸಂಸ್ಥೆಯ 16 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.