ETV Bharat / bharat

ಯುಪಿಆರ್​ಎಫ್ ಸಂಘಟನೆಯ ಸ್ವಯಂ ಘೋಷಿತ ಕಮಾಂಡರ್-ಇನ್-ಚೀಫ್ ಹತ್ಯೆ!

ಯುಪಿಆರ್​ಎಫ್ ಸಂಘಟನೆಯ ಸ್ವಯಂ ಘೋಷಿತ ಕಮಾಂಡರ್-ಇನ್-ಚೀಫ್​ನ್ನು ಆತನ ಸಹಚರರೇ ಭಾನುವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

UPRF
ಯುಪಿಆರ್​ಎಫ್
author img

By

Published : Jul 12, 2021, 9:41 AM IST

ದಿಫು (ಅಸ್ಸೋಂ ): ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್​ಎಫ್) ದಂಗೆಕೋರ ಗುಂಪಿನ ಸ್ವಯಂ ಘೋಷಿತ ಕಮಾಂಡರ್-ಇನ್-ಚೀಫ್ ಅನ್ನು ಆತನ ಸಹಚರರೇ ಅಸ್ಸೋಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾನುವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಖೆಂಗ್‌ಪಿಬುಂಗ್ ಪ್ರದೇಶದಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಮಂಗ್ಗಿನ್ ಖೋಲ್ಹೌ ಅಲಿಯಾಸ್ ವೀರಪ್ಪನ್​ನನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಕೆಲವು ವಿಷಯಗಳ ಬಗ್ಗೆ ಗಲಾಟೆ ನಡೆದಿದ್ದು, ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ವೀರಪ್ಪನ್ ಮೃತಪಟ್ಟಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.