ಮೈನ್‌ಪುರಿ (ಉತ್ತರ ಪ್ರದೇಶ): ಯುವತಿವೋರ್ವಳನ್ನು ನಾಗ್ಲಾ ಲಾಲ್ಮನ್ ಗ್ರಾಮದಲ್ಲಿ ವಿವಾಹಿತ ವ್ಯಕ್ತಿವೋರ್ವ ಗುಂಡಿಕ್ಕಿ ಕೊಂದಿದ್ದಾನೆ ಎಂಬ ಆರೋಪ ಪ್ರಕರಣ ನಡೆದಿದೆ.
21 ವರ್ಷದ ಯುವತಿ ಶುಕ್ರವಾರ ಸಂಜೆ ತನ್ನ ಮನೆಯಿಂದ 300 ಮೀಟರ್ ದೂರದಲ್ಲಿರುವ ಹೊಲದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾಳೆ. 28 ವರ್ಷದ ಅಜಾಬ್ ಸಿಂಗ್ ಆಕೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನೊಂದಿಗೆ ನಾಲ್ಕು ವರ್ಷ ಸಂಬಂಧವನ್ನು ಹೊಂದಿದ್ದಳು. ಆದರೆ ಅದನ್ನು ಮುಂದುವರಿಸಲು ಮಹಿಳೆ ಸಿದ್ಧವಿರಲಿಲ್ಲ. ಇದರಿಂದ ಕೋಪಗೊಂಡ ಅಜಾಬ್, ಯುವತಿಯ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.
ಇದನ್ನೂ ಓದಿ: ಜೀವನದಲ್ಲಿ ಏನೂ ಸಾಧನೆ ಮಾಡಿಲ್ಲ ಅಂತಾ ಖಿನ್ನತೆಗೊಳಗಾಗಿ ಯುವಕ ಆತ್ಮಹತ್ಯೆ