ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ದುರಂತ ಘಟನೆ ನಡೆದಿದೆ. ಹದಿಹರೆಯದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನೆಂದು ಆರೋಪಿಸಿದ್ದಕ್ಕೆ ಮಹಿಳೆಯೊಬ್ಬರನ್ನು ಹುಡುಗರ ಪೋಷಕರು ಥಳಿಸಿ ಕೊಂದಿದ್ದಾರೆ.ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಮಹಿಳೆ ಶುಕ್ರವಾರ ಚಿಕಿತ್ಸೆ ಫಲಿಸಿದೆ ಸಾವಿಗೀಡಾಗಿದ್ದಾಳೆ.
ಜಿಲ್ಲೆಯ ಬುವಾಪುರ ಗ್ರಾಮದಲ್ಲಿ ಹುಡುಗಿ ತನ್ನ ಮೇಕೆಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದಾಗ ಘಟನೆ ಜರುಗಿದೆ. ಆರೋಪಿ ಯುವಕರು ಅಲ್ಲಿಗೆ ಹೋಗಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಹಾಗೆ ಆಕೆಯ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಹುಡುಗಿ ಕಿರುಚಲು ಪ್ರಾರಂಭಿಸಿದಾಗ ಹೆದರಿ ಯುವಕರು ಸ್ಥಳದಿಂದ ಓಡಿ ಹೋಗಿದ್ದಾರೆ.
ಮನೆಗೆ ಮರಳಿದ ಹುಡುಗಿ ನಡೆದ ಘಟನೆಯನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಈ ಸಂಬಂಧ ಈಕೆಯ ಪೋಷಕರು ಆರೋಪಿ ಯುವಕರ ಮನೆಗೆ ಹೋಗಿ ಪ್ರಶ್ನಿಸಿದ್ದಾರೆ. ತಮ್ಮ ಮಗನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಬದಲು, ಯುವಕರ ಪೋಷಕರು ಮತ್ತು ಅವರ ಸಂಬಂಧಿಕರು ಸಂತ್ರಸ್ತ ಹುಡುಗಿಯ ತಾಯಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಹಿನ್ನೆಲೆ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ.
ಘಟನೆ ಸಂಬಂಧ ಪೊಲೀಸರು ಆರೋಪಿ ಯುವಕರ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.