ETV Bharat / bharat

ಸ್ನಾನ ಮಾಡಲು ಹೋಗಿದ್ದ ಇಬ್ಬರು ಕಾಲುವೆಯಲ್ಲಿ ಮುಳುಗಿ ಸಾವು - ಸರಯೂ ಕಾಲುವೆಯಲ್ಲಿ ಸಾವು

ಐವರು ಪುರುಷರು ಸರಯೂ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಆದರೆ, ಅವರು ನೀರಿನೊಳಗೆ ತುಂಬಾ ದೂರ ಹೋದಾಗ ಈಜಲು ಪರದಾಡತೊಡಗಿದರು. ಅವರ ಕೂಗಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದರೂ ಮೂವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

UP: Two men drown in Saryu canal while bathing

author img

By

Published : Jul 11, 2022, 6:04 PM IST

ಬಲರಾಂಪುರ್ (ಉತ್ತರ ಪ್ರದೇಶ): ಇಲ್ಲಿಗೆ ಹತ್ತಿರದ ಸರಯೂ ಕಾಲುವೆಯಲ್ಲಿ ಯುವಕರಿಬ್ಬರು ಮುಳುಗಿ ಸತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಜಡಿಕುಯಿಯಾ ಗ್ರಾಮದ ಬಳಿ ಕಾಲುವೆ ಹರಿಯುವ ಸ್ಥಳದಲ್ಲಿ ಯುವಕರು ಸೋಮವಾರ ಸ್ನಾನ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ.

ಪೊಲೀಸರ ಪ್ರಕಾರ, ಐವರು ಪುರುಷರು ಸರಯೂ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಆದರೆ, ಅವರು ನೀರಿನೊಳಗೆ ತುಂಬಾ ದೂರ ಹೋದಾಗ ಈಜಲು ಪರದಾಡತೊಡಗಿದರು. ಅವರ ಕೂಗಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದರೂ ಮೂವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸೋನು (24) ಮತ್ತು ಫೈಜಾನ್ (28) ಎಂದು ಗುರುತಿಸಲಾಗಿದೆ. ಇಬ್ಬರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಿ ಕಾನೂನು ವಿಧಿವಿಧಾನಗಳ ನಂತರ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪಚ್‌ಪೇಡ್ವಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಲೋಕ್ ರೈ ತಿಳಿಸಿದ್ದಾರೆ. ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಎಸ್ ಪಿ ಯಾದವ್ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪ್ರತಿ ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ. ಸಹಾಯ ಘೋಷಣೆ ಮಾಡಿದ್ದಾರೆ.

ಇದನ್ನು ಓದಿ:ಬೆಡ್ ರೂಮ್ ರೊಮ್ಯಾಂಟಿಕ್​​ ಸೀನ್ ಚಿತ್ರೀಕರಣಕ್ಕೆ ಗಂಡನ ಹಠ.. ಇಷ್ಟವಿಲ್ಲದ ಹೆಂಡ್ತಿ ಏನು ಮಾಡಿದ್ಳು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.