ಲಖನೌ (ಉತ್ತರ ಪ್ರದೇಶ): ಇಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತಿದೆ. ಪಾಕಿಸ್ತಾನವನ್ನು ಭಾರತದ ವೀರ ಯೋಧರು ಸದೆಬಡಿದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದರು. ಈ ಯುದ್ಧದಲ್ಲಿ ಹಲವಾರು ಯೋಧರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ.
ಹುತಾತ್ಮ ಯೋಧ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ತಂದೆ ಗೋಪಿಚಂದ್ ಪಾಂಡೆ ಈ ಕುರಿತು ಮಾತನಾಡಿ, ನನ್ನ ಮಗನ ಬಗ್ಗೆ ಹೆಮ್ಮೆಯಾಗುತ್ತದೆ. ತಾಯಿನಾಡಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ಅನೇಕರಿಗೆ ಸ್ಫೂರ್ತಿಯಾಗಿದ್ದಾನೆ ಎಂದು ಕಾರ್ಗಿಲ್ ಯುದ್ದ ದಿನಗಳನ್ನು ಮೆಲುಕು ಹಾಕಿದರು.
ನನ್ನ ಮಗ ಇಡೀ ರಾಷ್ಟ್ರವೇ ಹೆಮ್ಮೆಪಡುವಂತಹ ಕೆಲಸ ಮಾಡಿದ್ದಾನೆ. 1999ರ ಕಾರ್ಗಿಲ್ ಯುದ್ಧದ ನೆನಪಿಗಾಗಿ ಉತ್ತರ ಪ್ರದೇಶದ ಸೈನಿಕ್ ಶಾಲೆಗೆ ಕ್ಯಾಪ್ಟನ್ ಮನೋಜ್ ಪಾಂಡೆ ಹೆಸರಿಡಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿ, ಮಾಹಿತಿ ನೀಡಿದರು.
ಐತಿಹಾಸಿಕ ಕಾರ್ಗಿಲ್ ಯುದ್ಧವು 1999 ರ ಮೇ ಮತ್ತು ಜುಲೈ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಬಳಿ ನಡೆಯಿತು. ಪಾಕಿಸ್ತಾನದ ಪಡೆಗಳು ಆಕ್ರಮಿಸಿಕೊಂಡ ತಾಣಗಳ ಮೇಲೆ ಭಾರತ ಜಯ ಸಾಧಿಸಿದಾಗ ನಮ್ಮ ಸೇನೆಯ ಹೋರಾಟ, ಉತ್ಸಾಹ ಮತ್ತು ಸ್ಥಿತಿಸ್ಥಾಪಕತ್ವವು ಫಲ ನೀಡಿತು. ಪ್ರತಿ ವರ್ಷ, ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಜುಲೈ 26 ರಂದು ಕಾರ್ಗಿಲ್ ದಿವಸ್ ಎಂದು ಆಚರಿಸುತ್ತಿದೆ.