ವಾರಣಾಸಿ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದ್ದು, ಆ ಕ್ಷೇತ್ರಗಳಲ್ಲಿ ಇದೀಗ ಬಿರುಸಿನ ಮತಬೇಟೆ ಕಾರ್ಯ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಅನೇಕ ದೇಶಗಳು ಸಾಂಕ್ರಾಮಿಕ ರೋಗ, ಗಡಿ ಬಿಕ್ಕಟ್ಟು ಸೇರಿದಂತೆ ಅನಿಶ್ಚಿತತೆಯಿಂದ ಸಮಸ್ಯೆಗೊಳಗಾಗಿವೆ. ಆದರೆ, ಈ ಎಲ್ಲ ಬಿಕ್ಕಟ್ಟು ಎದುರಿಸಲು ಭಾರತ ಸಜ್ಜಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷ ಉಲ್ಲೇಖಿಸಿರುವ ನಮೋ, ಈ ಯುದ್ಧ ಜಾಗತಿಕತೆ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದೆ. ಯುದ್ಧಪೀಡಿತ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ನಡೆಯುತ್ತಿದ್ದು, 'ಆಪರೇಷನ್ ಗಂಗಾ' ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ ಎಂದರು.
-
Huge turnout of people at PM Narendra Modi's roadshow in his parliamentary constituency of Varanasi, ahead of the seventh and the last phase of Uttar Pradesh Assembly elections pic.twitter.com/NZ14YdWKre
— ANI UP/Uttarakhand (@ANINewsUP) March 4, 2022 " class="align-text-top noRightClick twitterSection" data="
">Huge turnout of people at PM Narendra Modi's roadshow in his parliamentary constituency of Varanasi, ahead of the seventh and the last phase of Uttar Pradesh Assembly elections pic.twitter.com/NZ14YdWKre
— ANI UP/Uttarakhand (@ANINewsUP) March 4, 2022Huge turnout of people at PM Narendra Modi's roadshow in his parliamentary constituency of Varanasi, ahead of the seventh and the last phase of Uttar Pradesh Assembly elections pic.twitter.com/NZ14YdWKre
— ANI UP/Uttarakhand (@ANINewsUP) March 4, 2022
ಇದನ್ನೂ ಓದಿ: ಉಕ್ರೇನ್ನಲ್ಲಿ ಸಮರ: ಆಶ್ರಯ ತಾಣವಾಗಿರುವ ಬಂಕರ್ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಿದ್ಯಾರ್ಥಿ
ಪ್ರಪಂಚದಲ್ಲಿ ಕೊರೊನಾ ಸೋಂಕು ಸಮಯದಲ್ಲಿ 'ವಂದೇ ಭಾರತ್ ಮಿಷನ್' ಅಡಿ ವಿವಿಧ ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಯಶಸ್ವಿಯಾಗಿ ಕರೆತರಲಾಗಿದೆ. ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉಂಟಾಗಿದ್ದ ಸಂದರ್ಭದಲ್ಲೂ 'ಆಪರೇಷನ್ ದೇವಿ ಭಾರತ್' ನಡೆಸಿ ಅನೇಕರನ್ನು ಕರೆತರಲಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ: ಭಾಷಣದ ವೇಳೆ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೋದಿ, ಪರಿವಾರವಾದಿ, ಮಾಫಿಯಾಗಳಿಂದ ಉತ್ತರ ಪ್ರದೇಶ ರಕ್ಷಣೆ ಮಾಡಬೇಕಾಗಿದ್ದು, ರಾಜ್ಯದಲ್ಲಿ ಎರಡನೇ ಅವಧಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಉತ್ತರ ಪ್ರದೇಶ ವಿಧಾನಸಭೆಗೆ ಮಾರ್ಚ್ 7ರಂದು ಕೊನೆಯ ಹಂತದ ವೋಟಿಂಗ್ ನಡೆಯಲಿದ್ದು, ಮತ ಎಣಿಕೆ ಮಾರ್ಚ್ 10ರಂದು ಹೊರಬರಲಿದೆ. 2017ರಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 312 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ ಅಧಿಕಾರ ರಚನೆ ಮಾಡಿತ್ತು.