ಕೈರಾನಾ(ಉತ್ತರ ಪ್ರದೇಶ): ಕೋವಿಡ್ ಮಹಾಮಾರಿ ನಡುವೆ ಘೋಷಣೆಯಾಗಿರುವ ಪಂಚ ರಾಜ್ಯಗಳ ಚುನಾವಣೆ ವಿಭಿನ್ನವಾಗಿ ನಡೆಯಲಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯಲ್ಲೂ ಸಾರ್ವಜನಿಕ ಪ್ರಚಾರ ಸಭೆ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಹೀಗಾಗಿ, ಇದೀಗ ಮನೆ ಮನೆ ಪ್ರಚಾರ ನಡೆಸುವುದು ಎಲ್ಲ ಪಕ್ಷಗಳಿಗೆ ಅನಿವಾರ್ಯವಾಗಿದೆ.
ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ. ಇದೇ ಕಾರಣಕ್ಕಾಗಿ ಇದೀಗ ಭಾರತೀಯ ಜನತಾ ಪಾರ್ಟಿ ಮನೆ ಮನೆ ಪ್ರಚಾರ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕೈರಾನಾ ಪ್ರದೇಶದಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ.
-
कैराना (पश्चिम उत्तर प्रदेश) में भाजपा के घर-घर संपर्क अभियान के अंतर्गत लोगों से संपर्क करते हुए... #हर_घर_भाजपा https://t.co/QaPOk03EhG
— Amit Shah (@AmitShah) January 22, 2022 " class="align-text-top noRightClick twitterSection" data="
">कैराना (पश्चिम उत्तर प्रदेश) में भाजपा के घर-घर संपर्क अभियान के अंतर्गत लोगों से संपर्क करते हुए... #हर_घर_भाजपा https://t.co/QaPOk03EhG
— Amit Shah (@AmitShah) January 22, 2022कैराना (पश्चिम उत्तर प्रदेश) में भाजपा के घर-घर संपर्क अभियान के अंतर्गत लोगों से संपर्क करते हुए... #हर_घर_भाजपा https://t.co/QaPOk03EhG
— Amit Shah (@AmitShah) January 22, 2022
ಈ ವೇಳೆ ಮಾತನಾಡಿರುವ ಅಮಿತ್ ಶಾ, 2014ರಲ್ಲಿ ನಾನು ಕೈರಾನಾಗೆ ಬಂದಿದ್ದೆ. ಕಳೆದ ಐದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದು, ಇಲ್ಲಿನ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಸೌಲಭ್ಯಗಳು ಜನರಿಗೆ ಸಿಗುವಂತಾಗಿವೆ. ಈ ಹಿಂದಿನ ಸರ್ಕಾರಗಳು ಕೇವಲ ಕುಟುಂಬ ರಾಜಕಾರಣ ಮಾಡಿವೆ ಎಂದರು.
ಬರುವ ದಿನಗಳಲ್ಲಿ ಉತ್ತರ ಪ್ರದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿದ್ದು, ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು. ಮನೆ ಮನೆಗೆ ತೆರಳಿ ಪ್ರಚಾರ ನಡೆಸಿರುವ ವಿಡಿಯೋ ತುಣುಕವೊಂದನ್ನ ಅಮಿತ್ ಶಾ ಶೇರ್ ಮಾಡಿಕೊಂಡಿದ್ದಾರೆ.
-
Union Home Minister Amit Shah holds door-to-door campaigning in Kairana ahead of upcoming #UttarPradeshElections2022 pic.twitter.com/PUeKh2XNDX
— ANI UP/Uttarakhand (@ANINewsUP) January 22, 2022 " class="align-text-top noRightClick twitterSection" data="
">Union Home Minister Amit Shah holds door-to-door campaigning in Kairana ahead of upcoming #UttarPradeshElections2022 pic.twitter.com/PUeKh2XNDX
— ANI UP/Uttarakhand (@ANINewsUP) January 22, 2022Union Home Minister Amit Shah holds door-to-door campaigning in Kairana ahead of upcoming #UttarPradeshElections2022 pic.twitter.com/PUeKh2XNDX
— ANI UP/Uttarakhand (@ANINewsUP) January 22, 2022
ಇದನ್ನೂ ಓದಿರಿ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್.. ಇಬ್ಬರು ಆರೋಪಿಗಳ ಬಂಧನ
ಫೆ. 10ರಿಂದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಒಟ್ಟು 403 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬರಲಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ