ಕೌಶಂಬಿ (ಉತ್ತರಪ್ರದೇಶ) : ಪೊಲೀಸ್ ಇಲಾಖೆ ಎಂದರೆ ಅಲ್ಲೊಂದು ಶಿಸ್ತು, ಸಮವಸ್ತ್ರ ಇದ್ದೇ ಇರುತ್ತೆ. ಉತ್ತರಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮದೇ ಪ್ರತ್ಯೇಕ ಸಮವಸ್ತ್ರ ಹೊಂದಿದ್ದು ಕೆಲಸದಿಂದಲೇ ಅಮಾನತಾಗಿದ್ದಾರೆ. ಅದೇನಪ್ಪಾ ಅಂದ್ರೆ, ಠಾಣೆಯಲ್ಲಿ ದೂರು ಪಡೆಯುವ ವೇಳೆ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಇಲಾಖೆ ಸಸ್ಪೆಂಡ್ ಮಾಡಿದೆ. ಜೊತೆಗೆ ತನಿಖೆಗೆ ಆದೇಶಿಸಲಾಗಿದೆ.
-
यूपी पुलिस का नया ड्रेस कोड! दारोगा जी अर्धनग्न होकर महिलाओं की सुन रहे शिकायत
— ETVBharat UttarPradesh (@ETVBharatUP) November 7, 2023 " class="align-text-top noRightClick twitterSection" data="
उत्तर प्रदेश पुलिस एक अलग तरह की यूनिफार्म में रहती है. लेकिन, कौशांबी में दारोगा जी एक अनोखे ड्रेस कोड में अपनी चौकी पर बैठते हैं और लोगों की शिकायत सुनते हैं. जिसका वीडियो वायरल हो रहा है. pic.twitter.com/6VGI1wczCy
">यूपी पुलिस का नया ड्रेस कोड! दारोगा जी अर्धनग्न होकर महिलाओं की सुन रहे शिकायत
— ETVBharat UttarPradesh (@ETVBharatUP) November 7, 2023
उत्तर प्रदेश पुलिस एक अलग तरह की यूनिफार्म में रहती है. लेकिन, कौशांबी में दारोगा जी एक अनोखे ड्रेस कोड में अपनी चौकी पर बैठते हैं और लोगों की शिकायत सुनते हैं. जिसका वीडियो वायरल हो रहा है. pic.twitter.com/6VGI1wczCyयूपी पुलिस का नया ड्रेस कोड! दारोगा जी अर्धनग्न होकर महिलाओं की सुन रहे शिकायत
— ETVBharat UttarPradesh (@ETVBharatUP) November 7, 2023
उत्तर प्रदेश पुलिस एक अलग तरह की यूनिफार्म में रहती है. लेकिन, कौशांबी में दारोगा जी एक अनोखे ड्रेस कोड में अपनी चौकी पर बैठते हैं और लोगों की शिकायत सुनते हैं. जिसका वीडियो वायरल हो रहा है. pic.twitter.com/6VGI1wczCy
ಘಟನೆಯ ವಿವರ: ಕೌಶಂಬಿ ಜಿಲ್ಲೆಯ ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಘಿಯಾ ಹೊರಠಾಣೆಯ ಅಧಿಕಾರಿ ರಾಮ್ ನಾರಾಯಣ್ ಸೋಂಕರ್ ಅಮಾನತಾದವರು. ಕೌಟುಂಬಿಕ ಕಲಹದ ವಿಚಾರವಾಗಿ ಮಹಿಳೆಯರು ದೂರು ನೀಡಲು ಬಂದಾಗ ಕಚೇರಿಯ ಆಸನದ ಮೇಲೆ ಕುಳಿತಾಗ ಪೊಲೀಸ್ ಸಮವಸ್ತ್ರ ಬಿಟ್ಟು ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಕುಳಿತಿದ್ದರು. ಇದನ್ನು ಯಾರೋ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಉತ್ತರಪ್ರದೇಶದಲ್ಲಿ ಪೊಲೀಸ್ ಠಾಣೆಗಳ ಜೊತೆಗೆ ಹೊರಠಾಣೆಗಳನ್ನು ನೀಡಲಾಗಿದೆ. ಜನರಿಗೆ ತಕ್ಷಣಕ್ಕೆ ಆರಕ್ಷಕ ಸೇವೆ ಸಿಗಲಿ ಎಂಬ ಉದ್ದೇಶದಿಂದ ಇವುಗಳನ್ನು ಆಯಾ ಗ್ರಾಮಗಳಲ್ಲಿ ಆರಂಭಿಸಲಾಗಿದೆ. ಅದರಲ್ಲಿ ಒಂದಾದ ಸಿಂಘಿಯಾ ಹೊರ ಠಾಣೆಗೆ ರಾಮ್ ನಾರಾಯಣ್ ಸೋಂಕರ್ ಅವರನ್ನು ಇನ್ಚಾಜ್ ಆಗಿ ನೇಮಕ ಮಾಡಲಾಗಿದೆ. ಮಹಿಳೆಯರಿಬ್ಬರು ಕೌಟುಂಬಿಕ ವಿಚಾರವಾಗಿ ದೂರು ನೀಡಲು ಬಂದಿದ್ದರು.
ಅಧಿಕಾರಿ ರಾಮ್ ನಾರಾಯಣ್ ಅವರು ಅರೆಬೆತ್ತಲೆಯಲ್ಲಿ ಕುಳಿತು ಮಹಿಳೆಯರ ದೂರು ಆಲಿಸುತ್ತಿದ್ದರು. ಅಧಿಕಾರಿಯ ಅವಸ್ಥೆ ಕಂಡು ಮಹಿಳೆಯರು ಕೂಡ ದಿಗ್ಭ್ರಮೆಗೊಂಡಿದ್ದರು. ಈ ವೇಳೆ ಯಾರೋ ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಶಿಸ್ತು ಕಾಪಾಡಬೇಕಾದ ಪೊಲೀಸರು, ಠಾಣೆಯಲ್ಲಿ ಅಸಭ್ಯ ವಸ್ತ್ರ ಧರಿಸಿದ್ದನ್ನು ಟೀಕಿಸಲಾಗಿದೆ.
ಅಧಿಕಾರಿಗೆ ಅಮಾನತು ಶಿಕ್ಷೆ: ವಿಡಿಯೋ ವೈರಲ್ ಆಗಿದ್ದೇ ತಡ, ಮೇಲಧಿಕಾರಿಗಳು ರಾಮ್ ನಾರಾಯಣ್ ವಿರುದ್ಧ ಕ್ರಮ ಜರುಗಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ, ಇಲಾಖಾ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಉತ್ತರಪ್ರದೇಶ ಪೊಲೀಸ್ ಇಲಾಖೆ ಮೇಲೆ ಈಗಾಗಲೇ ಹಲವಾರು ಆಪಾದನೆಗಳು ಇದ್ದು, ಈಗಿನ ಪ್ರಕರಣ ಮತ್ತೊಂದು ಕಳಂಕ ತಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳೆಯರಿಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ಆರಂಭಿಸಲು ಯೋಜಿಸಿದ್ದು, ಅದರ ಮಧ್ಯೆ ಪೊಲೀಸ್ ಅಧಿಕಾರಿ ಅಶಿಸ್ತಿನ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪರಿಸರ ರಕ್ಷಣೆಗೆ ನ್ಯಾಯಾಲಯಗಳು ಪ್ರತಿ ಬಾರಿ ಆದೇಶಿಸಬೇಕಿಲ್ಲ, ಜನರೇ ಹೊಣೆಗಾರಿಕೆ ಮೆರೆಯಬೇಕು: ಸುಪ್ರೀಂಕೋರ್ಟ್