ಸುಲ್ತಾನ್‌ಪುರ : ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನಿನ್ನೆ(ಶನಿವಾರ) ಹೊರಬಿತ್ತು. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಕ್ಷವು ಪ್ರಮುಖವಾಗಿ 17 ನಗರಸಭೆಗಳ ಮೇಯರ್ ಸ್ಥಾನವನ್ನು ಗೆದ್ದಿರುವುದು ವಿಶೇಷ. ಆದ್ರೆ ದುರಾದೃಷ್ಟವೆಂಬಂತೆ ಸುಲ್ತಾನ್‌ಪುರ ಜಿಲ್ಲೆಯ ಕಡಿಪುರ ನಗರ ಪಂಚಾಯತ್‌ನ ವಾರ್ಡ್ ಸಂಖ್ಯೆ 10 ರ ಸ್ವತಂತ್ರ ಅಭ್ಯರ್ಥಿ ಸಂತ ಪ್ರಸಾದ್ (65) ಗೆಲುವು ಸಾಧಿಸಿದ್ದು, ಈ ಸಂಭ್ರಮಾಚರಣೆ ಕಣ್ತುಂಬಿಕೊಳ್ಳುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.
ಹಣ್ಣಿನ ವ್ಯಾಪಾರಿ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿದ್ದರು. ಮೃತರು ಇಬ್ಬರು ಪುತ್ರರು ಮತ್ತು ಐವರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್ ಮೃತಪಟ್ಟಿರುವುದಕ್ಕೆ ವಾರ್ಡ್ನ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 5 ಬಾರಿ ಸಂಸದರಾದ ರಾಜಕಾರಣಿಯ ಪತ್ನಿಗೆ ಸೋಲುಣಿಸಿದ ಮೆಡಿಕಲ್ ವಿದ್ಯಾರ್ಥಿನಿಗೆ ಮೇಯರ್ ಪಟ್ಟ !
ಈ ಕುರಿತು ಮಾಹಿತಿ ನೀಡಿರುವ ಕಡಿಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶಿವಪ್ರಸಾದ್, "ಮೃತ ಸಂತ ಪ್ರಸಾದ್ ಅವರನ್ನು ವಾರ್ಡ್ ನಂ. 10 ರ ವಿಜೇತ ಎಂದು ಘೋಷಿಸಲಾಗಿದೆ. ಮೂರು ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಅವರ ನಿಧನದಿಂದ ಸ್ಥಾನ ತೆರವಾದ ಕಾರಣ ಈ ವಾರ್ಡ್ಗೆ ಹೊಸದಾಗಿ ಚುನಾವಣೆ ನಡೆಸಲಾಗುವುದು" ಎಂದರು.
ಇದನ್ನೂ ಓದಿ : ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆ ; ಇಡೀ ರಾತ್ರಿ ಕೋಲಾಹಲ , ಬಿಜೆಪಿ ವಿರುದ್ಧ ಮತಪೆಟ್ಟಿಗೆ ಕಳವು ಆರೋಪ
ಉತ್ತರ ಪ್ರದೇಶದಲ್ಲಿ ಮೇ 4 ಮತ್ತು ಮೇ 11 ರಂದು ಎರಡು ಹಂತಗಳಲ್ಲಿ ಪುರಸಭೆ, ನಗರಪಾಲಿಕೆ ಚುನಾವಣೆ ನಡೆದಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಪ್ರಮುಖವಾಗಿ 17 ನಗರಸಭೆಗಳ ಮೇಯರ್ ಸ್ಥಾನಗಳನ್ನು ಗೆದ್ದಿದೆ. ಲಕ್ನೋ, ಪ್ರಯಾಗ್‌ರಾಜ್, ವಾರಣಾಸಿ, ಮೀರತ್, ಸಹರಾನ್‌ಪುರ, ಅಯೋಧ್ಯೆ, ಕಾನ್ಪುರ್, ಬರೇಲಿ, ಮೊರಾದಾಬಾದ್, ಆಗ್ರಾ, ಅಲಿಗಢ, ಫಿರೋಜಾಬಾದ್, ಗೋರಖ್‌ಪುರ, ಗಾಜಿಯಾಬಾದ್, ಝಾನ್ಸಿ, ಮಥುರಾ ಮತ್ತು ಶಹಜಹಾನ್‌ಪುರ ನಗರಸಬೆ ಮೇಯರ್ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇದನ್ನೂ ಓದಿ : ರಣಾಂಗಣವಾದ ದೆಹಲಿ ಮಹಾನಗರ ಪಾಲಿಕೆ .. ಮೇಯರ್ ಆಯ್ಕೆ ಚುನಾವಣೆ ಮತ್ತೆ ಮುಂದೂಡಿಕೆ
ಮೊದಲ ಹಂತದಲ್ಲಿ 9 ವಿಭಾಗಗಳು ಮತ್ತು 10 ಮುನ್ಸಿಪಲ್ ಕಾರ್ಪೊರೇಷನ್‌ಗಳ 37 ಜಿಲ್ಲೆಗಳಲ್ಲಿ ಮತದಾನ ನಡೆದಿತ್ತು. 10 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ 830 ವಾರ್ಡ್‌ಗಳಲ್ಲಿ ಮತದಾನ ನಡೆದಿತ್ತು. 9,699 ಮತಗಟ್ಟೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ 2,658 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಇದನ್ನೂ ಓದಿ : ಯುಪಿಯಲ್ಲಿ ಪುರಸಭೆ , ನಗರಪಾಲಿಕೆ ಚುನಾವಣೆ : ಗೋರಖ್‌ಪುರದಲ್ಲಿ ಮತ ಚಲಾಯಿಸಿದ ಯೋಗಿ