ETV Bharat / bharat

ಯುಪಿ ವಿಧಾನ ಪರಿಷತ್ ಚುನಾವಣೆ: 39 ಜಿಲ್ಲೆಗಳಲ್ಲಿ 5 ಎಂಎಲ್‌ಸಿ ಸ್ಥಾನಗಳಿಗೆ ಮತದಾನ

ಎಂಎಲ್‌ಸಿ ಚುನಾವಣೆ 2023: ಪದವೀಧರ ಕ್ಷೇತ್ರದ 3 ಹಾಗೂ ಶಿಕ್ಷಣ ಕ್ಷೇತ್ರದ 2 ಸ್ಥಾನಗಳಿಗೆ ಒಟ್ಟು 75 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 7 ಅಭ್ಯರ್ಥಿಗಳ ಪತ್ರಗಳನ್ನು ರದ್ದುಗೊಳಿಸಲಾಗಿದೆ. ಅದೇ ಸಮಯದಲ್ಲಿ 5 ಜನರು ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ 63 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

UP MLC elections
ಸಾಂದರ್ಭಿಕ ಚಿತ್ರ
author img

By

Published : Jan 30, 2023, 6:54 PM IST

ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 5 ಸ್ಥಾನಗಳಿಗೆ ಇಂದು (ಸೋಮವಾರ) ಬೆಳಗ್ಗೆ 8 ಗಂಟೆಯಿಂದ ಮತದಾನ ನಡೆಯಿತು. ಮೂರು ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 44 ಅಭ್ಯರ್ಥಿಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು ಐದು ಕ್ಷೇತ್ರಗಳಲ್ಲಿ 63 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 39 ಜಿಲ್ಲೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆದಿದೆ. ಫೆ.2ರಂದು ಮತ ಎಣಿಕೆ ನಡೆಯಲಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ರತ್ನೇಶ್ ಸಿಂಗ್ ತಿಳಿಸಿದ್ದಾರೆ.

ಮತದಾರರ ವಿವರ: ಗೋರಖ್‌ಪುರ- ಫೈಜಾಬಾದ್, ಕಾನ್ಪುರ ಮತ್ತು ಬರೇಲಿ-ಮೊರಾದಾಬಾದ್ ಎಂಬ ಮೂರು ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 6.32 ಲಕ್ಷ ಜನರು ಮತದಾನ ಮಾಡಿದ್ದು, ಇದರಲ್ಲಿ 3.93 ಲಕ್ಷ ಪುರುಷ ಮತ್ತು 2.39 ಲಕ್ಷ ಮಹಿಳಾ ಮತದಾರರಿದ್ದಾರೆ. 826 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಅಲಹಾಬಾದ್-ಝಾನ್ಸಿ ಮತ್ತು ಕಾನ್ಪುರ್ ಎಂಬ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ 5,392 ಮಂದಿ ಮತ ಚಲಾಯಿಸಿದ್ದಾರೆ. ಅವರಲ್ಲಿ 3,505 ಪುರುಷರು ಮತ್ತು 1,887 ಮಹಿಳೆಯರು ಇದ್ದಾರೆ. ಇದಕ್ಕಾಗಿ ಶಿಕ್ಷಕರ ಕ್ಷೇತ್ರಗಳಲ್ಲಿ 238 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

4,941 ಮತಗಟ್ಟೆ ಸಿಬ್ಬಂದಿ ನಿಯೋಜನೆ: ಚುನಾವಣಾ ಆಯೋಗದಿಂದ ಪ್ರತಿ ಕ್ಷೇತ್ರದಲ್ಲಿ ತಲಾ ಒಬ್ಬ ವೀಕ್ಷಕರನ್ನು ನಿಯೋಜಿಸಲಾಗಿದೆ. ಅವರ ಜತೆಗೆ 594 ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳು ಮತ್ತು 234 ವಲಯ ಮ್ಯಾಜಿಸ್ಟ್ರೇಟ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳ ವ್ಯವಸ್ಥೆ ಮತ್ತು ಮತದಾನದ ವಿಡಿಯೋಗ್ರಫಿ ಕೂಡ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಒಟ್ಟು 4,941 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಗೋರಖ್‌ಪುರ-ಫೈಜಾಬಾದ್‌ನಿಂದ ದೇವೇಂದ್ರ ಪ್ರತಾಪ್ ಸಿಂಗ್, ಕಾನ್ಪುರದಿಂದ ಅರುಣ್ ಪಾಠಕ್ ಮತ್ತು ಬರೇಲಿ-ಮೊರಾದಾಬಾದ್‌ನಿಂದ ಡಾ.ಜೈ ಪಾಲ್ ಸಿಂಗ್ ಮತ್ತು ಶಿಕ್ಷಕರ ಕ್ಷೇತ್ರದಿಂದ ಇಬ್ಬರು ಪದವೀಧರ ಕ್ಷೇತ್ರಗಳ ಚುನಾಯಿತ ಸದಸ್ಯರ ಅಧಿಕಾರಾವಧಿಯಂತೆ ಮತದಾನ ನಡೆಯಿತು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ರತ್ನೇಶ್ ಸಿಂಗ್ ತಿಳಿಸಿದ್ದಾರೆ.

ಗೋರಖ್‌ಪುರ-ಫೈಜಾಬಾದ್‌ ಕ್ಷೇತ್ರಕ್ಕೆ ಕರುಣಾಕಾಂತ್‌ ಮೌರ್ಯ, ಮೊರಾದಾಬಾದ್‌-ಬರೇಲಿ ಕ್ಷೇತ್ರಕ್ಕೆ ಶಿವಪ್ರತಾಪ್‌ ಸಿಂಗ್‌ ಮತ್ತು ಕಾನ್‌ಪುರ-ಉನ್ನಾವ್‌ ಕ್ಷೇತ್ರಕ್ಕೆ ಕಮಲೇಶ್‌ ಯಾದವ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಅವಧೇಶ್‌ ಮಿಶ್ರಾ ಹೇಳಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಎಸ್‌ಪಿ ಸಿಂಗ್ ಅವರು ಪ್ರಯಾಗ್‌ರಾಜ್-ಝಾನ್ಸಿ ಸ್ಥಾನಕ್ಕೆ ಮತ್ತು ಪ್ರಿಯಾಂಕಾ ಕಾನ್ಪುರ್-ಉನ್ನಾವ್ ಕ್ಷೇತ್ರಕ್ಕೆ ಎಸ್‌ಪಿಯಿಂದ ಕಣದಲ್ಲಿದ್ದರು.

ವಿಧಾನ ಪರಿಷತ್ ಚುನಾವಣೆ: ದೇಶದ 6 ರಾಜ್ಯಗಳಲ್ಲಿ ಅಂದರೆ ಬಿಹಾರ, ಯುಪಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿಧಾನಸಭೆಯೊಂದಿಗೆ ವಿಧಾನ ಪರಿಷತ್​ ಇದೆ. ಲೆಜಿಸ್ಲೇಟಿವ್ ಕೌನ್ಸಿಲ್(ವಿಧಾನ ಪರಿಷತ್) ವಿಧಾನಸಭೆಯ ಮೂರನೇ ಒಂದು ಭಾಗದಷ್ಟು ಸದಸ್ಯರನ್ನು ಹೊಂದಬಹುದು. ಯುಪಿಯಲ್ಲಿ 403 ವಿಧಾನಸಭಾ ಸ್ಥಾನಗಳಿವೆ. ಆದ್ದರಿಂದ ವಿಧಾನ ಪರಿಷತ್ತಿನಲ್ಲಿ ಗರಿಷ್ಠ 134 ಸದಸ್ಯರನ್ನು ಹೊಂದ ಬಹುದು. ವಿಧಾನ ಪರಿಷತ್ತಿನಲ್ಲಿ ಕನಿಷ್ಠ 40 ಸದಸ್ಯರನ್ನು ಹೊಂದಿರುವುದು ಅವಶ್ಯಕ.

ಶಾಶ್ವತ ಸದನ: ವಿಧಾನ ಪರಿಷತ್ ಶಾಶ್ವತ ಸದನ. ಅಂದರೆ ಅದನ್ನು ವಿಸರ್ಜಿಸಲಾಗುವುದಿಲ್ಲ. ವಿಧಾನ ಪರಿಷತ್ತಿನ ಸದಸ್ಯರನ್ನು ಎಂಎಲ್​ಸಿ ಎಂದು ಕರೆಯಲಾಗುತ್ತದೆ. ಅವರ ಸ್ಥಾನಮಾನ ಎಂಎಲ್​ಎಗೆ ಸಮ.

ಚುನಾವಣಾ ಪ್ರಕ್ರಿಯೆ: ವಿಧಾನ ಪರಿಷತ್ ಸದಸ್ಯರ ಅವಧಿ ಆರು ವರ್ಷ. ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಮೂರನೇ ಒಂದು ಭಾಗದಷ್ಟು ಸದಸ್ಯರು ಶಾಸಕರಿಂದ ಆಯ್ಕೆಯಾಗುತ್ತಾರೆ. ಇದಲ್ಲದೇ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ, ಪ್ರದೇಶ ಪಂಚಾಯಿತಿ ಸದಸ್ಯರಿಂದ ಮೂರನೇ ಒಂದರಷ್ಟು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. -1/12 ನೇ ಸದಸ್ಯರನ್ನು ಶಿಕ್ಷಕರಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು 1/12 ನೇ ಸದಸ್ಯರು ನೋಂದಾಯಿತ ಪದವೀಧರರಾಗಿದ್ದಾರೆ. ಉಳಿದ ಸದಸ್ಯರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ.

ಯುಪಿಯಲ್ಲಿ ಹೇಗೆ ಆಯ್ಕೆಯಾಗುತ್ತಾರೆ?: ಯುಪಿಯ 100 ವಿಧಾನ ಪರಿಷತ್ ಸದಸ್ಯರ ಪೈಕಿ 38 ಸದಸ್ಯರ ಚುನಾವಣೆಯಲ್ಲಿ ಶಾಸಕರು ಭಾಗವಹಿಸುತ್ತಾರೆ. 36 ಸದಸ್ಯರನ್ನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರಸಭೆಯ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. 8-8 ಆಯ್ಕೆ ಶಿಕ್ಷಕರು ಮತ್ತು ನೋಂದಾಯಿತ ಪದವೀಧರರು. ರಾಜ್ಯಪಾಲರು 10 ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಇಂದು ಮತದಾನ, ಮತದಾರರ ತೋರು ಹಾಗೂ ಮಧ್ಯದ ಬೆರಳಿಗೆ ಶಾಹಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.