ಲಖನೌ(ಉತ್ತರಪ್ರದೇಶ): ಉತ್ತರಪ್ರದೇಶ ಬಿಜೆಪಿ ಸರ್ಕಾರದ ಮತ್ತೊಬ್ಬ ಸಚಿವ ಧರಂ ಸಿಂಗ್ ಸೈನಿ ಪಕ್ಷ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಳೆದ 3 ದಿನದಲ್ಲಿ ಮೂವರು ಸಚಿವರು ಮತ್ತು 5 ಶಾಸಕರು ಪಕ್ಷಕ್ಕೆ ವಿದಾಯ ಹೇಳಿದಂತಾಗಿದೆ.
-
I have resigned because for 5 years Dalits, backward classes were suppressed, their voices were suppressed... We will do whatever Swami Prasad Maurya will say. One minister and 3-4 MLAs will resign every day till Jan 20: Dharam Singh Saini after resigning from the UP cabinet pic.twitter.com/1z4Coqs6Zt
— ANI UP/Uttarakhand (@ANINewsUP) January 13, 2022 " class="align-text-top noRightClick twitterSection" data="
">I have resigned because for 5 years Dalits, backward classes were suppressed, their voices were suppressed... We will do whatever Swami Prasad Maurya will say. One minister and 3-4 MLAs will resign every day till Jan 20: Dharam Singh Saini after resigning from the UP cabinet pic.twitter.com/1z4Coqs6Zt
— ANI UP/Uttarakhand (@ANINewsUP) January 13, 2022I have resigned because for 5 years Dalits, backward classes were suppressed, their voices were suppressed... We will do whatever Swami Prasad Maurya will say. One minister and 3-4 MLAs will resign every day till Jan 20: Dharam Singh Saini after resigning from the UP cabinet pic.twitter.com/1z4Coqs6Zt
— ANI UP/Uttarakhand (@ANINewsUP) January 13, 2022
ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದ ಧರಂ ಸಿಂಗ್ ಸೈನಿ ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಸರ್ಕಾರ ನೀಡಿದ್ದ ಭದ್ರತೆ, ಅಧಿಕೃತ ನಿವಾಸವನ್ನು ಹಿಂದಿರುಗಿಸಿದ್ದರು. ಇದು ಅವರು ಪಕ್ಷವನ್ನು ತೊರೆಯಲಿದ್ದಾರೆ ಎಂಬ ಸುಳಿವು ನೀಡಿತ್ತು. ಇದೀಗ ಪಕ್ಷದಿಂದ ಅಧಿಕೃತವಾಗಿ ಹೊರಬಂದಿದ್ದಾರೆ.
ಇನ್ನು ಮೊನ್ನೆಯಷ್ಟೇ ಕ್ಯಾಬಿನೆಟ್ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಲ್ಲದೇ ಐವರು ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯ ಕೂಡ ಬಿಜೆಪಿಗೆ ಗುಡ್ಬೈ ಹೇಳಿದ್ದರು.
-
‘सामाजिक न्याय’ के एक और योद्धा डॉ. धर्म सिंह सैनी जी के आने से, सबका मेल-मिलाप-मिलन करानेवाली हमारी ‘सकारात्मक और प्रगतिशील राजनीति’ को और भी उत्साह व बल मिला है। सपा में उनका ससम्मान हार्दिक स्वागत एवं अभिनंदन!
— Akhilesh Yadav (@yadavakhilesh) January 13, 2022 " class="align-text-top noRightClick twitterSection" data="
बाइस में समावेशी-सौहार्द की जीत निश्चित है! #मेला_होबे pic.twitter.com/2FDkLLNW93
">‘सामाजिक न्याय’ के एक और योद्धा डॉ. धर्म सिंह सैनी जी के आने से, सबका मेल-मिलाप-मिलन करानेवाली हमारी ‘सकारात्मक और प्रगतिशील राजनीति’ को और भी उत्साह व बल मिला है। सपा में उनका ससम्मान हार्दिक स्वागत एवं अभिनंदन!
— Akhilesh Yadav (@yadavakhilesh) January 13, 2022
बाइस में समावेशी-सौहार्द की जीत निश्चित है! #मेला_होबे pic.twitter.com/2FDkLLNW93‘सामाजिक न्याय’ के एक और योद्धा डॉ. धर्म सिंह सैनी जी के आने से, सबका मेल-मिलाप-मिलन करानेवाली हमारी ‘सकारात्मक और प्रगतिशील राजनीति’ को और भी उत्साह व बल मिला है। सपा में उनका ससम्मान हार्दिक स्वागत एवं अभिनंदन!
— Akhilesh Yadav (@yadavakhilesh) January 13, 2022
बाइस में समावेशी-सौहार्द की जीत निश्चित है! #मेला_होबे pic.twitter.com/2FDkLLNW93
ಇನ್ನಷ್ಟು ಶಾಸಕರಿಂದ ರಾಜೀನಾಮೆ: ಧರಂ ಸಿಂಗ್ ಸೈನಿ
ಕಳೆದ 5 ವರ್ಷದಲ್ಲಿ ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಈ ಕಾರಣಕ್ಕಾಗಿ ಸರ್ಕಾರದಿಂದ ಹೊರ ಬರುತ್ತಿದ್ದೇನೆ. ಮತ್ತೊಬ್ಬ ಸಚಿವರು ಸರ್ಕಾರದಿಂದ ಹೊರ ಬರಲಿದ್ದಾರೆ. ಇದಲ್ಲದೇ, ಜನವರಿ 20 ರವರೆಗೂ ದಿನವೂ 3-4 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಧರಂ ಸಿಂಗ್ ಸೈನಿ ಹೇಳಿಕೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಸ್ವಾಗತ
ಧರಂ ಸಿಂಗ್ ಸೈನಿ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಲು ಮುಂದಾಗಿದ್ದು, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತ ಫೋಟೋವನ್ನು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, 'ಪಕ್ಷಕ್ಕೆ ಧರಂ ಸಿಂಗ್ ಸೈನಿ ಅವರನ್ನು ಸ್ವಾಗತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಜನ ಬಿಜೆಪಿ ಬಿಡ್ತಾರೆ: ಶರದ್ ಪವಾರ್
ಬೇರೆ ಪಕ್ಷದೆಡೆ ವಲಸೆ ಹೋಗುತ್ತಿರುವ ಉತ್ತರಪ್ರದೇಶ ಬಿಜೆಪಿ ಶಾಸಕರು, ಸಚಿವರ ಬಗ್ಗೆ ಮಾತನಾಡಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ನಾಯಕ ಶರದ್ ಪವಾರ್, ಯುಪಿಯಲ್ಲಿ 13 ಶಾಸಕರು ಬಿಜೆಪಿ ತೊರೆಯಲಿದ್ದಾರೆ. ಇಂದು ನಾಲ್ವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಪಕ್ಷಾಂತರ ಪರ್ವ
ಇನ್ನು ಇತ್ತೀಚೆಗಷ್ಟೇ ಸಹರನ್ಪುರ್ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಫಿರೋಜಾಬಾದ್ನ ಶಾಸಕ ಹರಿ ಓಂ ಯಾದವ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿದ್ದ ಇಮ್ರಾನ್ ಮಾಸೂದ್ ಸಮಾಜವಾದಿ ಪಕ್ಷ ಸೇರಿಕೊಂಡಿದ್ದರು.
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ
ಉತ್ತರಪ್ರದೇಶದಲ್ಲಿ ಬಿಜೆಪಿ ತೊರೆದ ಮತ್ತೊಬ್ಬ ಶಾಸಕ... 3 ದಿನದಲ್ಲಿ 7 ನಾಯಕರು ಕಮಲಕ್ಕೆ ಗುಡ್ಬೈ
ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷ ಸೇರಿದ ಯುಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ