ETV Bharat / bharat

ಫೇಸ್​ಬುಕ್​ನಲ್ಲಿ ಪರಿಚಯವಾದ ಪಾಕ್‌ ಯುವತಿಯನ್ನು ವರಿಸಿದ ಯುಪಿ ಯುವಕ - ಫೇಸ್​ಬುಕ್​ನಲ್ಲಿ ಸಂಪರ್ಕಕ್ಕೆ ಬಂದ ಪಾಕಿಸ್ತಾನ ಯುವತಿ

ಫೇಸ್​ಬುಕ್​ನಲ್ಲಿ ಸಂಪರ್ಕಕ್ಕೆ ಸಿಕ್ಕಿದ ಪಾಕಿಸ್ತಾನಿ ಯುವತಿಯನ್ನು ಉತ್ತರಪ್ರದೇಶದ ಯುವಕನೋರ್ವ ಪಾಕ್‌ಗೆ ಹೋಗಿ ವರಿಸಿದ್ದಾನೆ.

UP man marries Pak girl after Facebook friendship
ಫೇಸ್​ಬುಕ್​ನಲ್ಲಿ ಪರಿಚಯವಾದ ಪಾಕ್​ ಯುವತಿಯನ್ನು ಮದುವೆಯಾದ ಕಲಾವಿದ
author img

By

Published : Jun 21, 2022, 3:32 PM IST

ಫಾರೂಕಾಬಾದ್​​ (ಉತ್ತರ ಪ್ರದೇಶ): ಫೇಸ್​​ಬುಕ್​ನಲ್ಲಿ ಪರಿಚಯವಾದ ಪಾಕಿಸ್ತಾನದ ಹುಡುಗಿಯನ್ನು ಉತ್ತರ ಪ್ರದೇಶದ ಫಾರೂಕಾಬಾದ್​ ಜಿಲ್ಲೆಯ ಜರ್ದೋಜಿ ಕಲಾವಿದ ಮೊಹಮ್ಮದ್​​ ಜಮಲ್ ಎಂಬಾತ ಮದುವೆಯಾಗಿದ್ದಾನೆ.

ಮೊಹಮ್ಮದ್​​ ಜಮಲ್​ಗೆ ಫೇಸ್​ಬುಕ್​ನಲ್ಲಿ ಯುವತಿ ಸಂಪರ್ಕಕ್ಕೆ ಸಿಕ್ಕಿದ್ದಾಳೆ. ಆಕೆ ಪಾಕಿಸ್ತಾನಿ ಎಂದು ಯುವಕನಿಗೆ ಗೊತ್ತಾಗಿದೆ. ಕ್ರಮೇಣ ಇಬ್ಬರ ನಡುವೆ ಪ್ರೇಮವೂ ಅರಳಿದೆ. ತನ್ನ ಪ್ರೇಯಸಿಯಾಗಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ಜೂನ್​ 17ರಂದು ಮದುವೆಯಾಗಿದ್ದಾನೆ. "ನವದಂಪತಿ ಭಾರತಕ್ಕೆ ಬರುವುದನ್ನು ನಾವು ಕಾತುರದಿಂದ ಎದುರು ನೋಡುತ್ತಿದ್ಧೇವೆ. ಅವರು ಇಲ್ಲಿಗೆ ಆಗಮಿಸಿದ ಬಳಿಕ ಸಂಪ್ರದಾಯಬದ್ಧವಾಗಿ ಅದ್ದೂರಿ ಕಾರ್ಯಕ್ರಮ ಮಾಡುತ್ತೇವೆ" ಎಂದು ಜಮಲ್​ನ ತಂದೆ ಅಲಿಮುದ್ದೀನ್​ ತಿಳಿಸಿದ್ದಾರೆ.

"ನವ ಜೋಡಿಗೆ ಅಗತ್ಯವಾದ ಆಡಳಿತಾತ್ಮಕ ನೆರವು ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಯುವತಿ ಒಂದು ವರ್ಷದ ತಾತ್ಕಾಲಿಕ ವೀಸಾ ಪಡೆಯಬೇಕು. ಅದನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸಲು ಸಾಧ್ಯವಿದೆ. ಬಳಿಕ ವಿಶೇಷ ವಿವಾಹ ಕಾಯ್ದೆಯಡಿ ಆಕೆ ಕಾಯಂ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶವಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದೂ ಅಲಿಮುದ್ದೀನ್​ ಹೇಳಿದರು.

ಇದನ್ನೂ ಓದಿ: ಅಗ್ನಿಪಥ: 'ಮೊದಲು ನಮ್ಮ ವಾದ ಆಲಿಸಿ' - ಸುಪ್ರೀಂಗೆ ಕೇಂದ್ರದ ಅಹವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.