ಅಲಿಗಢ(ಉತ್ತರ ಪ್ರದೇಶ): ಹಿರಿಯ ಮಗನಿಗೆ ಹಣ ನೀಡಿದ್ದರಿಂದ ಕೋಪಗೊಂಡ ಕಿರಿಯ ಮಗನೊಬ್ಬ ಸುತ್ತಿಗೆಯಿಂದ ಹೊಡೆದು ತಂದೆ - ತಾಯಿ ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಅಲಿಗಢದ ಸೌರಭ್(22) ಈ ಕೃತ್ಯವೆಸಗಿದ್ದು, ಘಟನೆಯಲ್ಲಿ ತಂದೆ ಓಂಪ್ರಕಾಶ್ (62), ತಾಯಿ ಸೋಮಾವತಿ (60) ಮತ್ತು ಸೋದರಳಿಯ ಶಿವ (4) ಸಾವನ್ನಪ್ಪಿದ್ದಾರೆ. ಸಹೋದರನಿಗೆ ಹಣ ನೀಡಿದ್ದ ಕೋಪಗೊಂಡಿರುವ ಸೌರಭ್ ಸುತ್ತಿಗೆ ಹಾಗೂ ಇಟ್ಟಿಗೆಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ತದನಂತರ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದನ್ನೂ ಓದಿರಿ: 'ಅಗ್ನಿವೀರ್'ಗೋಸ್ಕರ ತಯಾರಿ: ಓಡುತ್ತಿದ್ದಾಗಲೇ ಹಠಾತ್ ಬಿದ್ದು ಸಾವನ್ನಪ್ಪಿದ ಯುವತಿ!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಿವೃತ್ತ ಸರ್ಕಾರಿ ನೌಕರ ಓಂ ಪ್ರಕಾಶ್ ತಮ್ಮ ಹಿರಿಯ ಮಗನಿಗೆ ಜಿಮ್ಗೋಸ್ಕರ ಹಣ ನೀಡಿದ್ದನು. ಇದರಿಂದ ನಿರುದ್ಯೋಗಿ ಸೌರಭ್ ನಿರಾಸೆಗೊಂಡಿದ್ದರು. ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡುವಂತೆ ಕೋರಿಕೊಂಡಿದ್ದರು. ಆದರೆ, ತಂದೆ ಹಣ ನೀಡಿರಲಿಲ್ಲ. ಜೊತೆಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸೌರಭ್ ನಿನ್ನೆ ಸಂಜೆ ದಾಳಿ ನಡೆಸಿ, ಅವರನ್ನ ಕೊಲೆ ಮಾಡಿದ್ದಾನೆ.